ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಕೆ ಬ್ರದರ್ಸ್ ಚಿತ್ರಾನ್ನ ಗಿರಾಕಿಗಳು: ಅಶ್ವಥ್ ನಾರಾಯಣ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 12: "ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಎಂಬುದು ಇಲ್ಲ. ಸಮಾಜದಿಂದ ಸಂಪೂರ್ಣ ತಿರಸ್ಕಾರಗೊಂಡಿರುವ ಪಕ್ಷವಾದ ಅದು ಮುಳುಗುವ ಹಡಗು. ಎಲ್ಲರೂ ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರನ್ನು ನೇಮಕ ಮಾಡಲು ವ್ಯಕ್ತಿಗಳನ್ನು ಹುಡುಕುತ್ತಿದ್ದಾರೆ" ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ ವ್ಯಂಗ್ಯವಾಡಿದರು.

ಮಾಗಡಿಯ ಚಿಕ್ಕಕಲ್ಯಾ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ (ಜಿಟಿಟಿಸಿ ಕೇಂದ್ರ )ಕೌಶಲ್ಯ ಅಭಿವೃದ್ಧಿ ಕೇಂದ್ರ ವೀಕ್ಷಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಾಗೂ ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಂವಿಧಾನ ಆಶಯ ರಕ್ಷಕರಿಗೆ ಜೀವ ಬೆದರಿಕೆ: ಸಿದ್ದರಾಮಯ್ಯ ಆತಂಕಸಂವಿಧಾನ ಆಶಯ ರಕ್ಷಕರಿಗೆ ಜೀವ ಬೆದರಿಕೆ: ಸಿದ್ದರಾಮಯ್ಯ ಆತಂಕ

"ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ, ಎಲ್ಲರೂ ಬಿಟ್ಟು ಹೋಗುತ್ತಿದ್ದಾರೆ. ಮುಂದೆ ಯಾರು ಸಹ ಆ ಪಕ್ಷದಲ್ಲಿ ಇರುವುದಿಲ್ಲ. ಸಂಪೂರ್ಣವಾಗಿ ನಿರ್ನಾಮವಾಗುವ ಪಕ್ಷ ಕಾಂಗ್ರೆಸ್" ಎಂದು ಭವಿಷ್ಯ ನುಡಿದರು.

"ಕಾಂಗ್ರೆಸ್ ಪಕ್ಷದವರಿಗೆ ಕೇವಲ ಅವರು ದುಡ್ಡು ಮಾಡುವುದು, ಅವರ ಮನೆಯವರ ಅಭಿವೃದ್ಧಿ ಮಾತ್ರ ಮುಖ್ಯ. ಇದನ್ನು ಬಿಟ್ಟರೆ ಅವರಿಗೆ ಬೇರೆ ಏನು ಗೊತ್ತಿಲ್ಲ, ಸ್ವಯಂ ಅಭಿವೃದ್ಧಿ ಎಂದರೆ ಅದು ಕಾಂಗ್ರೆಸ್ ಪಕ್ಷ" ಎಂದರು.

ಸಂತ್ರಸ್ತರಿಗೂ ಪಡಿತರ ವಿತರಣೆ; ಸಿಎಂ ಬೊಮ್ಮಾಯಿ ಸೂಚನೆಸಂತ್ರಸ್ತರಿಗೂ ಪಡಿತರ ವಿತರಣೆ; ಸಿಎಂ ಬೊಮ್ಮಾಯಿ ಸೂಚನೆ

"ನಾನು ಅಧಿಕಾರ ಹುಡುಕಿಕೊಂಡು ಹೋಗುವ ವ್ಯಕ್ತಿ ಅಲ್ಲ. ಯಾವುದರ ಹಿಂದೆಯೂ ಓಡಬಾರದು. ಏನು ಕೊಟ್ಟರು ಕೆಲಸ ಮಾಡುತ್ತೇನೆ. ನನಗೆ ಉತ್ತಮ ಖಾತೆ ಕೊಟ್ಟಿದ್ದಾರೆ, ಇಡೀ ದೇಶಕ್ಕೆ, ಭವಿಷ್ಯ ರೂಪಿಸಬೇಕಾದರೆ ಅದು ಶಿಕ್ಷಣ, ಕೌಶಲ್ಯ, ತಂತ್ರಜ್ಞಾನ ಮತ್ತು ಆವಿಷ್ಕಾರದ ಮೂಲಕ. ನನಗೆ ಜವಾಬ್ದಾರಿ ನೀಡಿರುವ ಇಲಾಖೆ ನಾಡು ಹಾಗೂ ದೇಶದ ಭವಿಷ್ಯ ಬದಲಾಯಿಸುವಂತ ಶಕ್ತಿ ಇರುವ ಇಲಾಖೆ. ಹಾಗಾಗಿ ನನಗೆ ಬೇರೆ ಅಧಿಕಾರದ ದಾಹ ಇಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.

ಡಿಕೆ ಬ್ರದರ್ಸ್ ಚಿತ್ರಾನ್ನ ಗಿರಾಕಿಗಳು

ಡಿಕೆ ಬ್ರದರ್ಸ್ ಚಿತ್ರಾನ್ನ ಗಿರಾಕಿಗಳು

"ಸಿಎಂ ಸ್ಥಾನದ ಆಸೆಯಿಂದ ಅಶ್ವಥ್ ನಾರಾಯಣ ಹೊಸ ಸೂಟ್ ಹೊಲಿಸಿಕೊಂಡಿದ್ದಾರೆ" ಎಂಬ ಡಿಕೆ ಸಹೋದರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ನಾನು ಸಿಎಂ ಆಗುವ ಆತಂಕ ಅವರಿಗಿದ್ದರೆ ನಾನೇನು ಮಾಡುವುದಕ್ಕೆ ಆಗುವುದಿಲ್ಲ. ಅಣ್ಣ, ತಮ್ಮ ಸೂಟ್ ಹೊಲಿಸಿಕೊಂಡು ನಿರಾಸೆಯಾಗಿದ್ದಾರೆ ಪಾಪ. ಡಿಕೆ ಬ್ರದರ್ಸ್ ಇಬ್ಬರೂ ಕೂಡ ಚಿತ್ರಾನ್ನ ಗಿರಾಕಿಗಳು" ಎಂದು ಅಶ್ವಥ್ ನಾರಾಯಣ ಕಿಡಿಕಾರಿದರು.

ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇವೆ

ಜನರ ಮಧ್ಯೆ ಇದ್ದು ಕೆಲಸ ಮಾಡುತ್ತೇವೆ

"ಅಧಿಕಾರಕ್ಕಾಗಿ ಬದುಕುವವರಿಗೆ ನಿರಾಶೆಯಾಗುತ್ತದೆ. ನಮಗೆ ಭರವಸೆ ಇದೆ. ನಾವು ಜನರಿಗಾಗಿ ಬದುಕುವವರು ನಮಗೆ ನಿರಾಶೆಯಿಲ್ಲ, ಹೇಗಿದ್ದರು ಬದುಕುತ್ತೆವೆ. ಜನರ ಮಧ್ಯ ಇದ್ದು ಕೆಲಸ ಮಾಡುತ್ತೇವೆ. ಇವರಂತೆ ಸಮಾಜ ಏನಾದರು ಆಗಿ ಹಾಳಾಗಲಿ ನಮ್ಮ ಅಭಿವೃದ್ಧಿ ಆದರೆ ಸಾಕು ಎನ್ನುವ ಬುದ್ಧಿ ನಮಗೆ ಇಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್ ವಿರುದ್ಧ ಅಶ್ವಥ್ ನಾರಾಯಣ ಹರಿಹಾಯ್ದರು

ಸಿದ್ದರಾಮೋತ್ಸವಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧ

ಸಿದ್ದರಾಮೋತ್ಸವಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧ

"ಕಾಂಗ್ರೆಸ್‌ನವರಲ್ಲೇ ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡಬೇಕಾ?, ಬೇಡವಾ? ಎಂಬ ಗೊಂದಲ ಇದೆ. ಸಿದ್ದರಾಮಯ್ಯನವರ ಪಂಚೆ ಎಳಿಬೇಕಾ?, ಕೂರಿಸಬೇಕಾ? ಎಂಬ ಚರ್ಚೆಯಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಹೊಡೆದಾಟ ನಡೆಯುತ್ತಿದೆ . ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಪರಮೇಶ್ವರ, ಖರ್ಗೆ ಹೀಗೆ ಚರ್ಚೆ, ಗುದ್ದಾಟ ಇದೆ. ನಮ್ಮಲ್ಲಿ ಆ ರೀತಿಯ ಪರಿಸ್ಥಿತಿ ಇಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.

ಸಿದ್ದರಾಂಯ್ಯಗೆ ಅಧಿಕಾರದ ಆಸೆ ಹೋಗಿಲ್ಲ

ಸಿದ್ದರಾಂಯ್ಯಗೆ ಅಧಿಕಾರದ ಆಸೆ ಹೋಗಿಲ್ಲ

"ಬಹಳ ಹಿಂದೆಯೇ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದಿದ್ದರು. 5 ವರ್ಷ ಸಾಕು ಎಂದಿದ್ದರು. ನಂತರ ಸರಕಾರ ನಡೆಸಿ ರುಚಿ ನೋಡಿದರು. ಅವರ ಐದು ವರ್ಷದ ಆಡಳಿತದಲ್ಲಿ ಮರಳು ದಂಧೆ ಸೇರಿ ಇನ್ನೂ ಹಲವು ಅಕ್ರಮ ಮಾಡಿ ಭ್ರಷ್ಟಾಚಾರ ಮೈಗೂಡಿಸಿಕೊಂಡಿದ್ದರು. 2018 ಮತ್ತೆ ಬಂದು ಅಧಿಕಾರದ ಆಸೆಯಿಂದ ಪ್ರತಿ ಪಕ್ಷದ ನಾಯಕನಾಗಿ ಅಧಿಕಾರ ಪಡೆದರು. ಈಗ 75 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಇನ್ನೂ ಅಧಿಕಾರದ ಆಸೆ ಹೋಗಿಲ್ಲ. ಅವರ ಪಕ್ಷದಲ್ಲಿ ಯಾರಿಗೂ ಅವಕಾಶ ಇಲ್ಲ, ಸಿದ್ದರಾಮಯ್ಯ ಒಬ್ಬರೇ ನಾಯಕ" ಎಂದು ಸಚಿವ ಅಶ್ವಥ್ ನಾರಾಯಣ ಟೀಕಿಸಿದರು.

Recommended Video

Petromax ಚಿತ್ರ ನೋಡೋ ಡೆಲಿವರಿ ಬಾಯ್ ಗಳಿಗೆ ನೀನಾಸಂ ಸತೀಶ್ ಕಡೆಯಿಂದ ಫ್ರೀ ಟಿಕೆಟ್ | *Entertainment | OneIndia

English summary
Higher Education minister Dr. C. N. Ashwath Narayan trolled D. K. Shivakumar brothers and congress in Ramangara. He said there is no infighting and differences in BJP like in Congress party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X