ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಪುತ್ರಿಗೆ ಕೊರೊನಾ ಸೋಂಕು ದೃಢ
ರಾಮನಗರ, ಜೂನ್ 22: ಮಾಗಡಿ ಮಾಜಿ ಶಾಸಕ ಎಚ್ ಸಿ ಬಾಲಕೃಷ್ಣ ಅವರ ಪುತ್ರಿಗೆ ಕೊರೊನಾ ಸೋಂಕು ತಗುಲಿದೆ. ಈ ವಿಚಾರವನ್ನು ಖುದ್ದು ಶಾಸಕರೇ ಟ್ವಿಟ್ಟರ್ ಖಾತೆ ಮೂಲಕ ಖಚಿತಪಡಿಸಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿದ್ದ ಬಾಲಕೃಷ್ಣ ಅವರ ಪುತ್ರಿ ರಚನಾ, ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೊವಿಡ್ ಪರೀಕ್ಷೆಗೆ ಒಳಪಡಿಸಿದ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸಚಿವ ಡಾ. ಕೆ. ಸುಧಾಕರ್ ತಂದೆಗೆ ಕೋವಿಡ್ - 19 ಸೋಂಕು
''ಎಲ್ಲರಿಗೂ ನನ್ನ ನಮಸ್ಕಾರ, ಮಾಗಡಿ ಬಾಲಕೃಷ್ಣ ಆದ ನಾನು ನನ್ನ ಮಗಳಾದ ಡಾಕ್ಟರ್ ರಚನ ,ಅವಳು ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ, ಕೊರೊನಾ (Covid-19) ಪರೀಕ್ಷೆ ಮಾಡಿಸಿದಾಗ, ಪರೀಕ್ಷಾ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ'' ಎಂದು ಮಾಹಿತಿ ನೀಡಿದ್ದಾರೆ.
ಎಲ್ಲರಿಗೂ ನನ್ನ ನಮಸ್ಕಾರ,
— HC Balakrishna (@HCBalakrishna1) June 22, 2020
ಮಾಗಡಿ ಬಾಲಕೃಷ್ಣ ಆದ ನಾನು ನನ್ನ ಮಗಳಾದ ಡಾಕ್ಟರ್ ರಚನ ,ಅವಳು ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಕಳೆದ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ, ಕೋರೋನಾ (Covid-19) ಪರೀಕ್ಷೆ ಮಾಡಿಸಿದಾಗ, ಪರೀಕ್ಷಾ ವರದಿಯಲ್ಲಿ ಕರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ,
ಬಾಲಕೃಷ್ಣ ಅವರ ಮಗಗಳಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಚಾರಕ್ಕೆ ಬಹಿರಂಗವಾಗುತ್ತಿದ್ದಂತೆ ಆತಂಕಗೊಂಡಿರುವ ಆಪ್ತರು, ಹಿತೈಷಿಗಳು ಫೋನ್ ಮಾಡುವ ಮೂಲಕ ಯೋಗಕ್ಷೇಮ ವಿಚಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಾಲಕೃಷ್ಣ ''ಎಲ್ಲಾ ನನ್ನ ಆತ್ಮೀಯರಲ್ಲಿ ನನ್ನ ಮನವಿ, ಯಾವುದೇ ಆತಂಕಪಡುವುದು ಬೇಡ, ದಯವಿಟ್ಟು ಯಾರೂ ಕರೆ ಮಾಡಬೇಡಿ, ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ ಎಂದು ವಿನಂತಿಸುತ್ತೇನೆ'' ಎಂದಿದ್ದಾರೆ.
'ಈ ವಿಷಯವನ್ನು ನಿಮ್ಮೆಲ್ಲರ ಗಮನಕ್ಕೆ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಈ ಪ್ರಮುಖ ವಿಚಾರವನ್ನು ತಿಳಿಸಲು ಇಚ್ಛೆ ಪಡುತ್ತೇನೆ.'' ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರ ತಂದೆಗೂ ಇಂದು ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ರಾಜ್ಯದಲ್ಲಿ ಕೊವಿಡ್ ಹೋರಾಟದ ಮುಂದಾಳತ್ವ ವಹಿಸಿರುವ ಸುಧಾಕರ್ ಮನೆಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.