ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮ್ಮ ಪ್ರೀತಿಯ ಮನೆ ಉಳಿಸಿಕೊಳ್ಳಲು ಈ ಕುಟುಂಬ ಮಾಡಿತು ಹೊಸ ಐಡಿಯಾ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 03: ಶ್ರಮದಿಂದ ದುಡಿದ ಹಣದಲ್ಲಿ ಕನಸಿನ ಮನೆ ಕಟ್ಟಿಸಿದ್ದ ಈ ಕುಟುಂಬಕ್ಕೆ ಈ ಮನೆಯಲ್ಲಿ ಒಳ‌ಚರಂಡಿ ವ್ಯವಸ್ಥೆ ಸರಿಯಿಲ್ಲದ್ದು ದೊಡ್ಡ ತಲೆ ನೋವಾಗಿತ್ತು. ಇದೇ ಕಾರಣಕ್ಕೆ ಎಂಟು ವರ್ಷಗಳ ಕಾಲ ಮನೆಯನ್ನು ಖಾಲಿ ಬಿಟ್ಟಿದ್ದರು. ತಮ್ಮ ಪ್ರೀತಿಯ ಮನೆ ಮಾರಲು ಮನಸ್ಸು ಒಪ್ಪದೇ, ಏನು ಮಾಡುವುದೆಂಬ ಚಿಂತೆಯಲ್ಲಿದ್ದರು.

Recommended Video

Deepika Padukone make up artist did make up for sri ramulu daughter | Oneindia Kannada

ಇಂಥ ಸಮಯದಲ್ಲಿ ಅವರ ಕೈ ಹಿಡಿದಿದ್ದು ಈ ಹೊಸ ತಂತ್ರಜ್ಞಾನ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಇಡೀ ಮನೆಯನ್ನು ಹೈಡ್ರಾಲಿಕ್ ಜಾಕ್ ಬಳಸಿ ಲಿಫ್ಟ್ ಮಾಡುವ ಹೊಸ ತಂತ್ರಜ್ಞಾನದ ಮೊರೆಹೋಗಿದೆ ಈ ಕುಟುಂಬ. ಅದರ ವಿವರ ಇಲ್ಲಿದೆ ನೋಡಿ...

 ತನ್ನ ಕನಸಿನ ಮನೆ ಉಳಿಸಿಕೊಳ್ಳಲೇಬೇಕೆಂದು ಮಾಲೀಕ ಮಾಡಿದ್ದೇನು ಗೊತ್ತಾ? ತನ್ನ ಕನಸಿನ ಮನೆ ಉಳಿಸಿಕೊಳ್ಳಲೇಬೇಕೆಂದು ಮಾಲೀಕ ಮಾಡಿದ್ದೇನು ಗೊತ್ತಾ?

 ಹೊಸ ತಂತ್ರಜ್ಞಾನದಿಂದ ಲಿಫ್ಟಿಂಗ್ ಪ್ರಯತ್ನ

ಹೊಸ ತಂತ್ರಜ್ಞಾನದಿಂದ ಲಿಫ್ಟಿಂಗ್ ಪ್ರಯತ್ನ

ಚೆನ್ನೈ, ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಈ ಹೊಸ ತಂತ್ರಜ್ಞಾನ ಬಳಸಿ ಮನೆಯನ್ನು ಸ್ಥಳಾಂತರ ಮಾಡಿದ್ದನ್ನು ಕೇಳಿದ್ದ ಜಿಲ್ಲೆಯ ವೆಂಕಟೇಶ್ ಎಂಬುವರು ತಾವೂ ಈ ಸಾಹಸಕ್ಕೆ ಕೈಹಾಕಿದ್ದಾರೆ. ನಗರದ ವಿವೇಕಾನಂದ ನಗರದಲ್ಲಿ ಇಂಥದ್ದೊಂದು ವಿನೂತನ ಪ್ರಯತ್ನ ನಡೆದಿದೆ. ವೆಂಕಟೇಶ್‌ ಸುಜಾತ ದಂಪತಿ ಮೂಲತಃ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದವರು. ವಾಸವಿರುವುದು ಮಂಡ್ಯ ನಗರದಲ್ಲಿ. ಬಾಡಿಗೆ ನೀಡುವ ದೃಷ್ಟಿಯಿಂದ ಚನ್ನಪಟ್ಟಣದಲ್ಲಿ ಮನೆ ಕಟ್ಟಿದ್ದರು. ಕಾಲ ಕಳೆದಂತೆ ಮನೆಯ ರಸ್ತೆಗೆ ಡಾಂಬರೀಕರಣವಾದ ಸಂದರ್ಭ ಮನೆಯ ಅಡಿಪಾಯ ಕೆಳಭಾಗಕ್ಕೆ ಸರಿಯಿತು. ಜೊತೆಗೆ ಈ ಮನೆಯಿರುವ ರಸ್ತೆಯಲ್ಲಿ ಒಳಚರಂಡಿ ವ್ಯವಸ್ಥೆಯಿಲ್ಲದ ಕಾರಣ ಒಂದು ಪೈಪ್‌ನಲ್ಲಿ ಕೊಳಚೆ ನೀರು ಹೋಗುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

 ಮನೆಯೊಳಗೆ ನುಗ್ಗುತ್ತಿದ್ದ ಕೊಳಚೆ ನೀರು

ಮನೆಯೊಳಗೆ ನುಗ್ಗುತ್ತಿದ್ದ ಕೊಳಚೆ ನೀರು

ಆದರೆ ಇವರ ಮನೆ ಕೆಳಭಾಗದಲ್ಲಿದ್ದ ಕಾರಣ ಅತಿಯಾಗಿ ಮಳೆಯಾದಾಗ ಕೊಳಚೆ ನೀರೆಲ್ಲಾ ಮನೆಯೊಳಗೆ ನುಗ್ಗುತ್ತಿತ್ತು. ಅಕ್ಕಪಕ್ಕದಲ್ಲಿದ್ದ ಮನೆಗಳು ಮೇಲ್ಭಾಗದಲ್ಲಿದ್ದ ಕಾರಣ ಯಾವ ಮನೆಗಳಿಗೂ ತೊಂದರೆಯಾಗುತ್ತಿರಲಿಲ್ಲ. ಈ ಕಾರಣದಿಂದ ಮನೆಯನ್ನೇ ಮಾರಬೇಕೆಂಬ ತೀರ್ಮಾನಕ್ಕೆ ಕುಟುಂಬಸ್ಥರು ಬಂದಿದ್ದರು. ಆದರೆ ಕಷ್ಟಪಟ್ಟು ಮನೆ ಕಟ್ಟಿದ್ದ ಕಾರಣ ಮಾರಲು ಮನಸ್ಸು ಬರಲಿಲ್ಲ. ಹಾಗಾಗಿ ಹರಿಯಾಣದ ಯಮುನಾ ನಗರದಲ್ಲಿನ ಹೊಸತಂತ್ರಜ್ಞಾನಕ್ಕೆ ಮೊರೆ ಹೋದರು. ಮನೆಯ ಅಡಿಪಾಯದಿಂದ ಈಗ ತಂತ್ರಜ್ಞಾನದ ಮೂಲಕ 3 ಅಡಿ ಎತ್ತರಕ್ಕೆ ಮನೆಯನ್ನೇ ಮೇಲ್ಭಾಗಕ್ಕೆ ಲಿಫ್ಟ್ ಮಾಡಲಾಗುತ್ತಿದೆ.

ನೆರೆ ತಪ್ಪಿಸಿಕೊಳ್ಳಲು ಬೈಲಗುತ್ತು ನಿವಾಸಿ ಮಾಡಿದ ಸಾಹಸವೇನು ಗೊತ್ತಾ?ನೆರೆ ತಪ್ಪಿಸಿಕೊಳ್ಳಲು ಬೈಲಗುತ್ತು ನಿವಾಸಿ ಮಾಡಿದ ಸಾಹಸವೇನು ಗೊತ್ತಾ?

 ಹರಿಯಾಣದ ಲಿಫ್ಟಿಂಗ್ ಕಂಪನಿ

ಹರಿಯಾಣದ ಲಿಫ್ಟಿಂಗ್ ಕಂಪನಿ

ಹರಿಯಾಣದ ಯಮುನಾ ನಗರದಲ್ಲಿರುವ ಟಿ.ಡಿ.ವಿ.ಡಿ ಹೌಸ್ ಲಿಫ್ಟಿಂಗ್ ಸರ್ವೀಸ್ ಹೆಸರಿನ ಕಂಪನಿ ಈ ಹೊಸ ತಂತ್ರಜ್ಞಾನದ ಮೂಲಕ ಹೈಡ್ರಾಲಿಕ್ ಜಾಕ್ ಬಳಸಿ ಕಟ್ಟಿರುವ ಮನೆಗಳನ್ನು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಒಂದೆಡೆಯಿಂದ ಬೇರೆಡೆಗೆ ಹಾಗೂ ಸ್ಥಳದಲ್ಲಿಯೇ ಕೆಳಭಾಗದಿಂದ ಮೇಲ್ಭಾಗಕ್ಕೆ ಲಿಫ್ಟ್ ಮಾಡುವ ಕಾರ್ಯತಂತ್ರ ಮಾಡಲಾಗುತ್ತಿದೆ.

 30-40 ಅಡಿ ನಿವೇಶನದಲ್ಲಿನ ಮನೆ

30-40 ಅಡಿ ನಿವೇಶನದಲ್ಲಿನ ಮನೆ

30-40 ಅಡಿ ನಿವೇಶನದಲ್ಲಿ ಈ ಮನೆಯಿದ್ದು, ಮೊದಲ ಒಂದು ಅಡಿಗೆ 250 ರೂಪಾಯಿ ಚಾರ್ಜ್ ಮಾಡುವ ಕಂಪನಿ ನಂತರದ ಒಂದು ಅಡಿಗೆ ತಲಾ 50 ರೂಪಾಯಿ ಜಾರ್ಚ್ ಮಾಡುತ್ತದೆ. ಈ ಮನೆಯನ್ನು ಲಿಫ್ಟ್ ಮಾಡಲು ಬರೋಬ್ಬರಿ 6 ರಿಂದ 7 ಲಕ್ಷ ರೂಪಾಯಿ ಹಣ ಖರ್ಚಾಗುತ್ತದೆ. ಈ ಕಂಪನಿ ಮೈಸೂರಿನಲ್ಲಿ ಒಂದು ಮನೆಯ ಜೊತೆಗೆ ದೇವಸ್ಥಾನವನ್ನು ಲಿಫ್ಟ್ ಮಾಡಿದೆ. ಚೆನ್ನೈನಲ್ಲಿ ಮೊದಲ ಬಾರಿಗೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದರು. ಟಿ.ಡಿ.ವಿ.ಡಿ ಹೌಸ್ ಲಿಫ್ಟಿಂಗ್ ಸರ್ವೀಸ್ ಕಾರ್ಮಿಕ ನಂಧುಸಿಂಗ್ ಮಾತನಾಡಿ, "ನಮ್ಮ ಕಂಪನಿ ಮನೆಯ ಮಾಲೀಕರೊಂದಿಗೆ ತಮ್ಮ ಕೆಲಸದ ವಿಚಾರವಾಗಿ 20 ವರ್ಷಗಳ ಗ್ಯಾರಂಟಿ ಒಪ್ಪಂದ ಮಾಡಿಕೊಟ್ಟಿದೆ. ನಾವು ಕೆಲಸ ಮಾಡುವಾಗ ಅಥವಾ ಒಪ್ಪಂದದ ಅವಧಿಯಲ್ಲಿ ಮನೆಗೆ ಏನೇ ಹಾನಿಯಾದರೂ ಕಂಪನಿಯೇ ಹೊಣೆ ಎಂಬುದನ್ನು ಒಪ್ಪಿಕೊಂಡು ಕೆಲಸ ಪ್ರಾರಂಭಿಸಿದ್ದೇವೆ ಎಂದು ಮಾಹಿತಿ ನೀಡಿದರು.

English summary
This family decided to use a new technology -hydraulic jack to elevates the entire house using for the first time in Channapattana,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X