ವಂಡರ್ ಲಾ ಗೆ ನುಗ್ಗಿದ ಚಿರತೆ: ಪ್ರವಾಸಿಗರಲ್ಲಿ ಆತಂಕ
ರಾಮನಗರ, ಫೆಬ್ರವರಿ 28 : ಬಿಡದಿ ಬಳಿಯ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ನೊಳಗೆ ಚಿರತೆ ನುಗ್ಗಿದ್ದು ಪ್ರವಾಸಿಗರು, ಸ್ಥಳೀಯರು, ವಂಡರ್ ಲಾ ಸಿಬ್ಬಂದಿ ಆತಂಕಗೊಂಡಿದ್ದಾರೆ.
ಬುಧವಾರ ಮಧ್ಯಾಹ್ನ ರಾಮನಗರ ಜಿಲ್ಲೆಯ ಮಂಚನಾಯಕನಹಳ್ಳಿಯಲ್ಲಿರುವ ವಂಡರ್ ಲಾ ದೊಳಗೆ ಚಿರತೆಯೊಂದು ನುಗ್ಗಿದೆ. ಚಿರತೆ ನೋಡಿದ ಪ್ರವಾಸಿಗರು, ಮಕ್ಕಳು ಆತಂಕಕ್ಕೀಡಾಗಿದ್ದಾರೆ. ಅಲ್ಲಿಂದ ಹೊರ ಬರಲೂ ಆದರೆ ಕಷ್ಟ ಪಡುತ್ತಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಧಾವಿಸಿದ್ದು ಚಿರತೆಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಂಡರ್ ಲಾ ಸಮೀಪದಲ್ಲಿರುವ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಚಿರತೆ ವಂಡರ್ ಲಾ ಗೆ ನುಗ್ಗಿದೆ ಎಂದು ಹೇಳಲಾಗುತ್ತಿದೆ.











Click it and Unblock the Notifications