ರಾಮನಗರ-ಚನ್ನಪಟ್ಟಣವನ್ನು ಟ್ವಿನ್ ಸಿಟಿ ಮಾಡಲಿದ್ದಾರಂತೆ ಕುಮಾರಸ್ವಾಮಿ!

Posted By: ರಾಮನಗರ ಪ್ರತಿನಿಧಿ
Subscribe to Oneindia Kannada
   ಎಚ್ ಡಿ ಕುಮಾರಸ್ವಾಮಿಯವರಿಗೆ ರಾಮನಗರ ಚನ್ನಪಟ್ಟಣವನ್ನ ಟ್ವಿನ್ ಸಿಟಿ ಮಾಡುವಾಸೆ | Oneindia Kannada

   ರಾಮನಗರ, ಏಪ್ರಿಲ್ 17 : ಚನ್ನಪಟ್ಟಣ ಮತ್ತು ರಾಮನಗರ ಕಾರ್ಯಕರ್ತರ ಹಿತ ಕಾಯುವುದಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕಿ ಅನಿತಾ ಕುಮಾರಸ್ವಾಮಿ ಹೇಳಿದರು.

   'ಅವರು ಕಾಂಗ್ರೆಸ್ ನವರು ಎನ್ನಿ' ಎಂದು ನಗುತ್ತಾ ಹೇಳಿದ ಕುಮಾರಸ್ವಾಮಿ

   ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಮತ್ತು ನೇರಲೂರಿ ಗ್ರಾಮಗಳಲ್ಲಿ ಸೋಮವಾರ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಎಚ್.ಡಿ.ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣವನ್ನು ಟ್ವಿನ್ ಸಿಟಿಯನ್ನಾಗಿ ಮಾಡಬೇಕೆಂದುಕೊಂಡಿದ್ದಾರೆ ಎಂದು ತಿಳಿಸಿದರು.

   ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

   ಕುಮಾರಸ್ವಾಮಿ ಅವರ ಗೆಲುವಿಗೆ ಸಮರ್ಥವಾಗಿ ದುಡಿದು, ಕಮಿಷನ್ ಗಾಗಿ ದುಡಿಯುತ್ತಿರುವ ಶಾಸಕರನ್ನು ಸೋಲಿಸಬೇಕು. ಸಿ.ಪಿ.ಯೋಗೇಶ್ವರ್ ತಾಲೂಕನ್ನು ಅಭಿವೃದ್ಧಿಗೊಳಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

   Kumaraswamy makes Ramanagara and Channapatna as Twin cities

   ಮುಂದಿನ ವಾರದಿಂದ ಬಹಿರಂಗ ಪ್ರಚಾರ ಶುರು ಮಾಡುತ್ತೇವೆ. ಈ ಬಾರಿ ರಾಮನಗರ ಜಿಲ್ಲೆಯಲ್ಲೇ ರಾಜಕೀಯ ಬಿರುಸಾಗಿದೆ. ರಾಜ್ಯದಲ್ಲೇ ಕುಮಾರಸ್ವಾಮಿ ಪರ ಅಲೆ ಕಾಣುತ್ತಿದೆ. ಪರಿಸ್ಥಿತಿ ಅಂಡರ್ ಕರೆಂಟ್ ತರಹ ಇದೆ. ಅದು ಚುನಾವಣಾ ಫಲಿತಾಂಶದ ದಿನ ಗೊತ್ತಾಗಲಿದೆ ಎಂದರು.

   ಇಂಡಿಯಾ ಟುಡೇ ಸಮೀಕ್ಷೆ ಹಿಂದೆ ಅಮಿನ್ ಮಟ್ಟು ಕೈವಾಡ: ಎಚ್ ಡಿಕೆ

   ಈ ಬಾರಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವಷ್ಟು ನಂಬರ್ ನಮ್ಮ ಪಕ್ಷಕ್ಕೆ ಬರುತ್ತೆ. ಆ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

   ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ, ಯೋಗೇಶ್ವರ್, ರೇವಣ್ಣ ನಡುವೆ ತ್ರಿಕೋನ ಸ್ಪರ್ಧೆ ನಡೆಯುತ್ತದೆ. ಆದರೆ ಖಂಡಿತ ಕುಮಾರಸ್ವಾಮಿ ಗೆಲ್ತಾರೆ ಎಂದು ಭವಿಷ್ಯ ನುಡಿದರು. ಸಭೆಯಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವಥ್, ಚನ್ನಪಟ್ಟಣ ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು ಮತ್ತಿತರರು ಇದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Anitha kumaraswamy on Tuesday said that the JDS former CM HD Kumaraswamy makes Ramanagara and Channapatna as twin cities. He asks ramanagara and channapatna people probems. But C.P. Yogeshwar failed in people problems solvation.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ