ಉಗ್ರರೊಂದಿನ ಕಾಳಗದಲ್ಲಿ ಕರ್ನಾಟಕದ ಯೋಧ ಹುತಾತ್ಮ
ರಾಮನಗರ, ಜನವರಿ 15: ಉಗ್ರರೊಂದಿನ ಕಾದಾಟದಲ್ಲಿ ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಮಾಗಡಿಯ ವೀರ ಯೋಧ ಹುತಾತ್ಮನಾಗಿರುವ ಘಟನೆ ಜಮ್ಮುವಿನ ಉದ್ಧಂಪುರ ಸೇನಾ ಕ್ಯಾಂಪ್ ಬಳಿ ನಡೆದಿದೆ.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಪಾಪಣ್ಣನವರ ಪುತ್ರ ವೆಂಕಟ ನರಸಿಂಹಮೂರ್ತಿ(29) ಎಂಬುವರೇ ಹುತಾತ್ಮನಾಗಿರುವ ವೀರ ಯೋಧ. ಹುತಾತ್ಮ ಯೋಧ ಸೇನೆಯ ಸಿ.ಎಲ್.ಎಸ್.ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಯೋಧ ವೆಂಕಟ ನರಸಿಂಹಮೂರ್ತಿ ಅವರು ನಿನ್ನೆ ನಡೆದ ಉಗ್ರರೊಂದಿಗಿನ ಸೆಣಸಾಟದಲ್ಲಿ ಮೃತಪಟ್ಟ ವಿಷಯ ಸೇನೆಯಿಂದ ಮಾಗಡಿ ಪೊಲೀಸ್ ಠಾಣೆಗೆ ಬಂದಿದೆ. ಪೋಲೀಸರು ಹುತಾತ್ಮ ಯೋಧನ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಮೃತ ಯೋಧನ ಪಾರ್ಥಿವ ಶರೀರ ಮಾಗಡಿಗೆ ಯಾವಾಗ ಬರುತ್ತದೆ ಎಂಬ ಮಾಹಿತಿ ಸೇನೆಯಿಂದ ಬಂದಿಲ್ಲ. ಸಂಕ್ರಾಂತಿ ಹಬ್ಬ ಆಚರಣೆಯ ಸಂಭ್ರದಲ್ಲಿದ್ದ ಯೋಧನ ಕುಟುಂಬಕ್ಕೆ ವೀರ ಯೋಧ ಸಾವನ್ನಪ್ಪಿದ ವಿಚಾರ ತಿಳಿದು ಪೋಷಕರ ದುಃಖ ಮಡುಗಟ್ಟಿದೆ.











Click it and Unblock the Notifications