ಕನಕಪುರ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮರಿಯಪ್ಪ ವಿಧಿವಶ

ರಾಮನಗರ, ಜುಲೈ, 26: ಜಿಲ್ಲೆಯ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮರಿಯಪ್ಪ (95 ) ಇಂದು ವಿಧಿವಶರಾಗಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಸಬಾ ಹೋಬಳಿ ಹೆಚ್.ಕೊತ್ತನೂರು ಗ್ರಾಮದ ಮೂಲೆಕೇರಿಯ ಮರಿಯಪ್ಪ ವಯೋಸಹಜ ಕಾಯಿಲೆಯಿಂದ ಬಧವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

Kanakapura: Senior freedom fighter Mariyappa passes away

ಹಿರಿಯ ಗಾಂಧಿವಾದಿ, ಕನಕಪುರದ ನಿಮಾತೃ, ಶಿಕ್ಣಣ ದಾನಿ ಎಸ್.ಕರಿಯಪ್ಪನವರ ಅನುಯಾಯಿಯಾಗಿ ಹಲವಾರು ಸ್ವತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಮೂಲೆಕೇರಿ ಮರಿಯಪ್ಪ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ನಡೆಯಿತು.

ಮೃತ ಮರಿಯಪ್ಪ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಮರಿಯಪ್ಪ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡು ದೇಶದ ಹಿತ ಕಾಯ್ದು ಕನಕಪುರ ತಾಲೂಕಿಗೆ ಕೀರ್ತಿ ತಂದ ಮಹಾನುಭಾವರು. ಅಲ್ಲದೆ ತಾಲೂಕಿನ ಅಭಿವೃದ್ಧಿಗೆ ತಮಗೂ ಮಾರ್ಗದರ್ಶನ ಮಾಡಿ, ಹಲವಾರು ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು ಎಂದು ಅವರ ಸೇವೆಯನ್ನು ನೆನಪು ಮಾಡಿಕೊಂಡರು.

ಇನ್ನು ಸ್ವಾತಂತ್ರ್ಯ ಹೋರಾಟಗಾರ ಮರಿಯಪ್ಪ ಅವರ ನಿಧನದಿಂದ ರಾಜ್ಯ ಹಾಗೂ ತಾಲೂಕಿಗೆ ಅಪಾರ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು ಭಗವಂತನಲ್ಲಿ ಪಾರ್ಥಿಸುತ್ತೇನೆ. ಮರಿಯಪ್ಪನವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಪಾರ್ಥಿಸುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+