• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರ: ಮಾಜಿ ಪ್ರಧಾನಿ ದೇವೇಗೌಡರು ನಮ್ಮ ನಾಯಕ‌ ಎಂದ ಸಚಿವ ವಿ.ಸೋಮಣ್ಣ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್‌, 21: ''ಮಾಜಿ ಪ್ರಧಾನಿ ದೇವೇಗೌಡರೇ ನಮಗೆ ನಾಯಕರು, ಅವರನ್ನು ಅಪ್ಪಿಕೊಂಡಿದ್ದೇನೆ. ಅದ್ದರಿಂದ ಅವರ ಮಗನಾದವರು ಯಾವ ರೀತಿ ಭಾಷೆ ಪ್ರಯೋಗ ಮಾಡಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಮಾತನಾಡಿದರೆ ಅವರಿಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು'' ಎಂದು‌ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಕನಕಪುರ ತಾಲೂಕಿನ ಬಿಳಿದಾಳೆ ಗ್ರಾಮದಲ್ಲಿ ಹರಿಹಾಯ್ದರು.

‌ಕನಕಪುರ ತಾಲೂಕಿನ ಬಿಳಿದಾಳೆ ಗ್ರಾಮದ ಜಡೆಲಿಂಗೇಶ್ವರ ಸ್ವಾಮಿ ದೇಗುಲ ನೂತನ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಅಲ್ಲದೇ ನಾನು ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲಿ ಬೆಳೆದವನಾಗಿದ್ದೇನೆ. ಅವರು ಸುಳ್ಳು ಹೇಳುತ್ತಾರೆ ಅಂದರೆ ನಾನು ಸುಳ್ಳು ಹೇಳುತ್ತೇನೆ," ಎಂದು ತಿರುಗೆಟು ನೀಡಿದರು.

ಜೆಡಿಎಸ್‌ಗೆ ಹೆಚ್ಚು ಅನುದಾನ: ಪುರಸಭೆ ತಾರತಮ್ಯ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ಎಚ್ಚರಿಕೆಜೆಡಿಎಸ್‌ಗೆ ಹೆಚ್ಚು ಅನುದಾನ: ಪುರಸಭೆ ತಾರತಮ್ಯ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ಎಚ್ಚರಿಕೆ

ಕುಮಾರಸ್ವಾಮಿ ವಿರುದ್ಧ ಸೋಮಣ್ಣ ಆಕ್ರೋಶ
ಇತ್ತೀಚೆಗೆ ರಾಜೀಗಾಂಧಿ ವಸತಿ ನಿಗಮದ ವತಿಯಿಂದ ಸರ್ಕಾರ ಚನ್ನಪಟ್ಟಣ ತಾಲೂಕಿಗೆ 3 ಸಾವಿರ ಮನೆ ಮಂಜೂರು ಮಾಡಿದ ವಿಚಾರವಾಗಿ ಚನ್ನಪಟ್ಟಣ ಕ್ಷೇತ್ರದ ಮಾಜಿ‌ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ನಡುವೆ ಅಭಿವೃದ್ಧಿ ಕ್ರೆಡಿಟ್ ವಾರ್ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ನಾನು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು 320 ಮನೆಗಳನ್ನು ನೀಡುವಂತೆ ಮನವಿ ಮಾಡಿದ್ದೆ. ನನ್ನ ಮನವಿಗೆ ಹೇಗೆ ಸ್ಪಂದಿಸಿದ್ದಾರೆ ಅನ್ನುವು ಸುಳ್ಳು. ಅದಕ್ಕೆ ಅವರನ್ನು ಸುಳ್ಳು ಸೋಮಣ್ಣ ಎನ್ನುವುದು ಎಂದು ಹೇಳಿಕೆ ನೀಡಿದ್ದರು.

ಪ್ರತಿಮೆ ಅನಾವರಣದಿಂದ ಮತ ಸಿಗಲ್ಲ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿ ಪ್ರತಿಮೆ ಅನಾವರಣದಿಂದ ಮತ ಸಿಗಲ್ಲ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿ

ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪತ್ರ ಬರೆದಿದ್ದರು. ಹಾಗಾಗಿ ವಸತಿ ಇಲಾಖೆ ಮನೆ ಮಂಜೂರು ಮಾಡಿದೆ. ನಾನು ಈಗಾಗಲೇ ಚನ್ನಪಟ್ಟಣಕ್ಕೆ ಸಾಕಷ್ಟು ಮನೆಗಳನ್ನು ಕೊಟ್ಟಿದ್ದೇನೆ. ಇನ್ನೂ ಮನೆಗಳನ್ನು ಕೊಡುತ್ತೇನೆ. ಆದರೆ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

Kanakapura: former Prime Minister HD DeveGowda is our leader said Minister V. Somanna

ಎಚ್‌ಡಿಕೆ ತಮ್ಮ ಪೂರ್ವಗ್ರಹ ನೋಡಿಕೊಳ್ಳಲಿ
‌‌‌ನಾನು ಕುಮಾರಸ್ವಾಮಿ ಮುಖವನ್ನು ನೋಡಿ ಮಾತನಾಡಲ್ಲ. ನಮ್ಮನ್ನು ಬೆಳೆಸಿದವರು ದೇವೇಗೌಡರು. ನಾನು ಸಂಸ್ಕಾರದಿಂದ ಬಂದಿದ್ದೇನೆ. ಸಂಸ್ಕಾರದಿಂದ ಇದ್ದೇನೆ. ಕುಮಾರಸ್ವಾಮಿ ನಾಲಿಗೆ ಬಿಗಿಹಿಡಿದು ಮಾತನಾಡಲಿ. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಸ್ವಲ್ಪ ಗಾಂಭೀರ್ಯದಿಂದ ನಡೆದುಕೊಳ್ಳಲಿ. ಮಾಜಿ ಸಿಎಂ ಅಗಿದ್ದ ಕುಮಾರಸ್ವಾಮಿ ತಮ್ಮ ಪೂರ್ವಗ್ರಹವನ್ನು ನೋಡಿಕೊಳ್ಳಲಿ‌‌‌ ಎಂದು ‌ವಸತಿ ಸಚಿವ ವಿ.ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.

ನಾನು ದೇವೇಗೌಡರು, ಚೆನ್ನಮ್ಮರನ್ನು ಯಾವಗಲೂ ನೆನೆಪಿಸಿಕೊಳ್ಳುತ್ತೇನೆ. ಇನ್ನು ಅವರ ಮಗನಾಗಿ ಯಾವ ರೀತಿ ಮಾತನಾಡಬೇಕು ಎಂದು ಅರಿತು ಮಾತನಾಡಿದರೆ, ಅವರಿಗೆ ಒಳ್ಳೆಯದು ಎಂದು ಎಚ್‌.ಡಿ.ಕೆ ವಿರುದ್ಧ‌ ಸಚಿವ ವಿ.ಸೋಮಣ್ಣ ಕಿಡಿಕಾರಿದರು.

English summary
Minister V Somanna said in Bilidale village of Kanakapura taluk DeveGowda is our leader, HD Kumaraswamy should learn correct speech. know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X