ಡಿಕೆಶಿ, ಎಚ್‌ಡಿಕೆಗೆ ಟಾಂಗ್ ನೀಡುವ ಸುಳಿವು ನೀಡಿದ ಸಚಿವ ಸಿಪಿ ಯೋಗೇಶ್ವರ್
ರಾಮನಗರ, ಜನವರಿ 30: ಇನ್ನು 3-4 ದಿನಗಳಲ್ಲಿ ಮಹತ್ವದ ಪತ್ರಿಕಾಗೋಷ್ಠಿ ಕರೆಯುತ್ತೇನೆ ಎನ್ನುವ ಮೂಲಕ ಸಚಿವ ಸಿಪಿ ಯೋಗೇಶ್ವರ್ ರಾಮನಗರ ಜಿಲ್ಲೆಯ ಇಬ್ಬರು ನಾಯಕರಿಗೆ ಟಾಂಗ್ ಕೊಡುವ ಸುಳಿವು ನೀಡಿದರು.
ರಾಮನಗರ ಸ್ಪೂರ್ತಿ ಭವನದ ಬಳಿ ಜಿಲ್ಲಾ ಸರಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಸರಕಾರಿ ನೌಕರರಿಗೆ ಸೇವಾರತ್ನ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿ ಸಚಿವ ಸಿಪಿ ಯೋಗೇಶ್ವರ್ ಮಾತನಾಡಿದರು. ಮೊದ ಮೊದಲು ಮಾಧ್ಯಮದವರನ್ನು ನೋಡುತ್ತಲೇ ನಾನು ಏನನ್ನೂ ಮಾತನಾಡುವುದಿಲ್ಲ ಅಂತಾ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.
ನಂತರ ಮಾತನಾಡಿ 3-4 ದಿನದಲ್ಲಿ ರಾಮನಗರ ಜಿಲ್ಲೆಗೆ ಸಂಬಂಧಿಸಿದಂತೆ ನಾನೇ ಸುದ್ದಿಗೋಷ್ಠಿ ಕರೆಯುತ್ತೇನೆ ಎನ್ನುವ ಮೂಲಕ ತಮ್ಮ ಇಬ್ಬರು ವಿರೋಧಿ ನಾಯಕರ ವಿರುದ್ಧ ಮಾತನಾಡುವ ಸುಳಿವು ನೀಡಿದರು. ಅಲ್ಲದೇ ಕೋಲಾರ ಜಿಲ್ಲಾ ಉಸ್ತುವಾರಿ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಇದು ನನ್ನ ಜಿಲ್ಲೆ, ಮೊದಲ ಎರಡನೇ ಭೇಟಿ ಅಂತಾ ಯಾವುದು ಬರುವುದಿಲ್ಲ ಅಂತಾ ಹೇಳಿದ ಸಿಪಿ ಯೋಗೇಶ್ವರ್, ಮತ್ತೆ ನಿಮ್ಮ ಖಾತೆ ಬದಲಾವಣೆ ಆಗುತ್ತಾ ಎಂಬ ಪ್ರಶ್ನೆಗೆ ನಗುತ್ತಲೇ, ಮತ್ತೆ ಖಾತೆ ಬದಲಾವಣೆ ಆಗೋದಿಲ್ಲ ಅಂತಾ ಸ್ಪಷ್ಟಪಡಿಸಿದರು.












Click it and Unblock the Notifications