ಫೆ.21ರಿಂದ ಹಾರೋಹಳ್ಳಿ ತಾಲೂಕು ಕೇಂದ್ರ ಕಾರ್ಯಾರಂಭ: ಸೂಕ್ತ ಸವಲತ್ತು ನೀಡುವಂತೆ ಸರ್ಕಾರಕ್ಕೆ ಒತ್ತಾಯ

ಹಾರೋಹಳ್ಳಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಫೆಬ್ರವರಿ 21, ಮಂಗಳವಾರ ಅಧಿಕೃತವಾಗಿ ಉದ್ಘಾಟನೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ತಾಲೂಕು ಕೇಂದ್ರದ ಉದ್ಘಾಟನೆಯನ್ನು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ‌ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಮನಗರ, ಫೆಬ್ರವರಿ 20: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ತನ್ನ ಕೊನೆಯ ಬಜೆಟ್‌ನಲ್ಲಿ ಜಿಲ್ಲೆಯ ಐದನೇ ತಾಲೂಕು ಕೇಂದ್ರವನ್ನಾಗಿ ಹಾರೋಹಳ್ಳಿ ಪಟ್ಟಣವನ್ನು ಘೋಷಣೆ ಮಾಡಿದ್ದು, ಇದೀಗ ಎಲ್ಲಾ ಹಂತದ ಪ್ರಕ್ರಿಯೆಗಳನ್ನು ಮುಗಿಸಿ ತಾಲೂಕು ಕೇಂದ್ರ ಉದ್ಘಾಟನೆಗೆ ಜಿಲ್ಲಾಡಳಿತ ಮುಹೂರ್ತ ನಿಗದಿ ಮಾಡಿದೆ.

ಹಾರೋಹಳ್ಳಿ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಫೆಬ್ರವರಿ 21, ಮಂಗಳವಾರ ಅಧಿಕೃತವಾಗಿ ಉದ್ಘಾಟನೆ ಮಾಡಲು ಜಿಲ್ಲಾಡಳಿತ ಸಜ್ಜಾಗಿದೆ. ತಾಲೂಕು ಕೇಂದ್ರದ ಉದ್ಘಾಟನೆಯನ್ನು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ‌ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ್ ಉಪಸ್ಥಿತಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಉದ್ಘಾಟನೆ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ವಹಿಸಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಕನಕಪುರ ಶಾಸಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿಕ್ಕಬಳ್ಳಾಪುರ ಸಂಸದ ಬಜ್ಜೇಗೌಡ, ಮಾಗಡಿ ಶಾಸಕ ಎ.ಮಂಜುನಾಥ್ ಸೇರಿದಂತೆ ಜಿಲ್ಲೆಯ ಎಲ್ಲಾ ಎಂಎಲ್‌ಸಿಗಳು ಹಾಗೂ ವಿವಿಧ ನಿಗಮಗಳ ಅಧ್ಯಕ್ಷರು ಭಾಗಿಯಾಗಲಿದ್ದಾರೆ.

ಫೆಬ್ರವರಿ 21ರಿಂದ ಹಾರೋಹಳ್ಳಿ ತಾಲೂಕು ಕೇಂದ್ರ ಕಾರ್ಯಾರಂಭ

ಫೆಬ್ರವರಿ 21ರಿಂದ ಹಾರೋಹಳ್ಳಿ ತಾಲೂಕು ಕೇಂದ್ರ ಕಾರ್ಯಾರಂಭ

ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಸರ್ಕಾರ 2019ರ ಫೆಬ್ರವರಿ 8 ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಹಾರೋಹಳ್ಳಿ ಹೋಬಳಿ ಕೇಂದ್ರವನ್ನು ಜಿಲ್ಲೆಯ ಐದನೇ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿತ್ತು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮಾಡಿದ್ದ ತಾಲೂಕು ಘೋಷಣೆಯನ್ನು ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರ ಎಲ್ಲಾ ಪ್ರಕ್ರಿಯೆಗಳನ್ನು ಹಂತ ಹಂತವಾಗಿ ಪೂರೈಸಿ ನಾಲ್ಕು ವರ್ಷಗಳ ನಂತರ ಫೆಬ್ರವರಿ 21ರಂದು ರಾಮನಗರ ಜಿಲ್ಲೆಯ ಐದನೇ ತಾಲೂಕು ಕೇಂದ್ರವಾಗಿ ಹಾರೋಹಳ್ಳಿ ಕಾರ್ಯಾರಂಭ ಮಾಡಲಿದೆ.

ಹಾರೋಹಳ್ಳಿ ತಾಲೂಕು ಕೇಂದ್ರದ ಪ್ರಾದೇಶಿಕ ನೋಟ

ಹಾರೋಹಳ್ಳಿ ತಾಲೂಕು ಕೇಂದ್ರದ ಪ್ರಾದೇಶಿಕ ನೋಟ

ಹಾರೋಹಳ್ಳಿ ಕೇಂದ್ರದ ಪೂರ್ವಕ್ಕೆ ತಮಿಳುನಾಡು ರಾಜ್ಯದ ಗಡಿ, ಆನೇಕಲ್ ತಾಲೂಕು ಮತ್ತು ಬೆಂಗಳೂರು ನಗರ ಜಿಲ್ಲೆಯ ಗಡಿ, ಪಶ್ಚಿಮದಲ್ಲಿ ರಾಮನಗರ ಮತ್ತು ಕನಕಪುರ ತಾಲೂಕುಗಳ ಗಡಿ, ಉತ್ತರಕ್ಕೆ ಬೆಂಗಳೂರು ದಕ್ಷಿಣ ತಾಲೂಕು, ಆನೇಕಲ್ ಮತ್ತು ರಾಮನಗರ ತಾಲೂಕು ಗಡಿ, ದಕ್ಷಿಣಕ್ಕೆ ಕನಕಪುರ ತಾಲೂಕು ಗಡಿಯನ್ನು ಹಂಚಿಕೊಂಡಿದೆ. ನೂತನ ಹಾರೋಹಳ್ಳಿ ತಾಲೂಕು ಕೇಂದ್ರ 26 ಕಂದಾಯ ವೃತ್ತಗಳನ್ನು ಒಳಗೊಂಡಿದ್ದು, ಕನಕಪುರ ತಾಲೂಕು ವ್ಯಾಪ್ತಿಯಲ್ಲಿ 81 ಕಂದಾಯ ವೃತ್ತಗಳಿವೆ. ಈ ಪೈಕಿ 26 ವೃತ್ತಗಳನ್ನು ಕನಕಪುರ ತಾಲೂಕಿನಿಂದ ಬೇರ್ಪಡಿಸಿ ನೂತನ ಹಾರೋಹಳ್ಳಿ ತಾಲೂಕನ್ನು ಸೃಷ್ಟಿಸಲಾಗುತ್ತಿದೆ.

ಹಾರೋಹಳ್ಳಿ ತಾಲೂಕು ವ್ಯಾಪ್ತಿಗೆ ಮರಳವಾಡಿಯ 145 ಗ್ರಾಮಗಳು

ಹಾರೋಹಳ್ಳಿ ತಾಲೂಕು ವ್ಯಾಪ್ತಿಗೆ ಮರಳವಾಡಿಯ 145 ಗ್ರಾಮಗಳು

ಹಾರೋಹಳ್ಳಿ ಹೋಬಳಿಯ ಹಾರೋಹಳ್ಳಿ, ಗಬ್ಬಾಡಿ, ಕಗ್ಗಲಹಳ್ಳಿ, ಕಾಡು ಜಕ್ಕಸಂದ್ರ, ಕೋನಸಂದ್ರ, ಬನ್ನಿಕುಪ್ಪೆ ಮೇಡ ಮಾರನಹಳ್ಳಿ, ಕೊಟ್ಟಿಗನಹಳ್ಳಿ, ಪಿಚ್ಚನಕೆರೆ, ಚಿಕ್ಕಕಬ್ಬಾಳು, ದೊಡ್ಡಮುದುವಾಡಿ ಗ್ರಾಮದ ವೃತ್ತಗಳು‌ ತಾಲೂಕು ಕೇಂದ್ರಕ್ಕೆ ಸೇರಲಿವೆ.

ಮರಳವಾಡಿ ಹೋಬಳಿಯ ದೊಡ್ಡಮರಳವಾಡಿ, ಚಿಕ್ಕಮರಳವಾಡಿ, ತೇರು ಬೀದಿ, ಯಲಚವಾಡಿ, ಕಲ್ಲನಕುಪ್ಪೆ, ಬನವಾಸಿ, ತಟ್ಟೆಕೆರೆ, ಮಲ್ಲಿಗಮೆಟ್ಟು ತೋಕಸಂದ್ರ, ಎಂ.ಮಯಂ ಬಾಳ್, ಟಿ.ಹೊಸಹಳ್ಳಿ, ಚೀಲೂರು, ದೊಡ್ಡ ದೇನಹಳ್ಳಿ, ಅವರೆಮಾಳ, ಗೋದೂರು ವೃತ್ತಗಳು ನೂತನ ತಾಲೂಕಿನ ವ್ಯಾಪ್ತಿಗೆ ಬರಲಿವೆ.

ಹಾರೋಹಳ್ಳಿ ಹೋಬಳಿಯ ವೃತ್ತಕ್ಕೆ 107 ಗ್ರಾಮಗಳು ಮತ್ತು ಮರಳವಾಡಿ ಹೋಬಳಿಯ ವೃತ್ತಕ್ಕೆ 145 ಗ್ರಾಮಗಳು ಒಟ್ಟು 252 ಗ್ರಾಮಗಳು ನೂತನ ಹಾರೋಹಳ್ಳಿ ತಾಲೂಕು ವ್ಯಾಪ್ತಿಗೆ ಬರಲಿವೆ.

ರಾಜ್ಯ ಸರ್ಕಾರದ ಮುಂದಿದೆ ದೊಡ್ಡ ಸವಾಲು

ರಾಜ್ಯ ಸರ್ಕಾರದ ಮುಂದಿದೆ ದೊಡ್ಡ ಸವಾಲು

ರಾಜ್ಯ ಸರ್ಕಾರ ತನ್ನ ಅಧಿಕಾರದ ಕೊನೆಯ ದಿನಗಳಲ್ಲಿ‌ ಹಾರೋಹಳ್ಳಿ ತಾಲೂಕು ಕೇಂದ್ರವನ್ನು ಉದ್ಘಾಟನೆ ಮಾಡಿದರೆ ಅಷ್ಟೇ ಸಾಲದು,‌ ತಾಲೂಕು ಕೇಂದ್ರ ಕಾರ್ಯಾರಂಭಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಮುಂದೆ ಇರುವ ದೊಡ್ಡ ಸವಾಲು. ಈಗಾಗಲೇ ಸರ್ಕಾರಿ ಕಟ್ಟಡಗಳನ್ನು ಪಟ್ಟಣದ ಒಳಭಾಗದಲ್ಲೇ ನಿರ್ಮಾಣ ಮಾಡಬೇಕು ಎಂಬ ಕೂಗು ಆರಂಭವಾಗಿದೆ.

ಹಾರೋಹಳ್ಳಿ ತಾಲೂಕು ಕೇಂದ್ರಕ್ಕೆ ಅತೀ ಮುಖ್ಯವಾಗಿ ತಾಲೂಕು ಕಚೇರಿ, ನ್ಯಾಯಾಲಯ ಸಂರ್ಕೀಣ, ಸ್ಥಳೀಯ ಸಂಸ್ಥೆಗಳ ಕಟ್ಟಡಗಳು, ವಾಣಿಜ್ಯ ಸಂಕೀರ್ಣ, ಸರಕಾರಿ ಕಚೇರಿಗಳು, ಜಿಲ್ಲಾ ಪಂಚಾಯತ್ ಉಪ ವಿಭಾಗಗಳಾದ ಸುಮಾರು 26 ಇಲಾಖೆಗಳು ಕಟ್ಟಡಗಳು ಹಾಗೂ ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಕ, ಹೀಗೆ ಸಾಕಷ್ಟು ಸವಲತ್ತುಗಳಿಗಾಗಿ ನೂತನ ತಾಲೂಕು ಕೇಂದ್ರ, ರಾಜ್ಯ ಸರ್ಕಾರವನ್ನು ಎದುರು ನೋಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+