'ರೆಸಾರ್ಟ್ ನಿಂದ ಹೊರ ನಡೆದರೆ ಬಿಜೆಪಿಗೆ ಹೋಗುತ್ತಿದ್ದೇವೆ ಎಂದಲ್ಲ'

ರಾಮನಗರ, ಮೇ 17 : ನಾವಿಲ್ಲಿ ಆರಾಮಾಗಿದ್ದೇವೆ. ಜೆಡಿಎಸ್ ನವರು ಬೆಂಗಳೂರಿನಲ್ಲಿದ್ದಾರೆ. ನಮ್ಮ ಇಬ್ಬರು ಶಾಸಕರು ಸಂಪರ್ಕದಲ್ಲಿಲ್ಲ ಅವರು ಕೂಡ ಬರುತ್ತಾರೆ ಎಂದು ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಈಗಲ್ ಟನ್ ರೆಸಾರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾನು ಕೂಡ ಹೊರಗೆ ಹೋಗುತಿದ್ದೇನೆ ಹಾಗಂತ ನಾನು ಬಿಜೆಪಿಗೆ ಹೋಗುತ್ತಿನಾ? ಹಾಗೆಯೇ ರಾಜಶೇಖರ್ ಪಾಟೀಲ್ ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಪ್ರಜಾಪ್ರಭುತ್ವದ ವಿರುದ್ಧ ನಡೆದುಕೊಳ್ಳುತ್ತಿದೆ. ಬಿಜೆಪಿ ಆಪರೇಷನ್ ಅಂತ 10 ಕಾಂಗ್ರೆಸ್ ಶಾಸಕರನ್ನು ಸೆಳೆಯುತ್ತಿದೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನ ಹೊರ ಬಿದ್ದ ಮೇಲೆ ಎಲ್ಲಾ ವಿಷಯ ಗೊತ್ತಾಗಲಿದೆ.

Former Minister Ramalinga reddy Said Were here very well

ಬಿಜೆಪಿಯವರ ತರ ನಾವು ಕಚಡ ರಾಜಕಾರಣ ಮಾಡಲ್ಲ ಎಂದು ಕಿಡಿಕಾರಿದರು. ಬಿಜೆಪಿಯಲ್ಲಿರುವ ಆರು ಜನ ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಎಂ.ಬಿ ಪಾಟೀಲ್ ಹೇಳಿಕೆಗೆ ಎಂ.ಬಿ ಪಾಟೀಲರೇ ಇಲ್ಲಿಗೆ ಬರುತ್ತಾರೆ ಅವರನ್ನೇ ಕೇಳಿ ಎಂದರು.

ನಾವು ಯಾವುದೇ ಆಪರೇಷನ್ ಕಾಂಗ್ರೆಸ್ ಮಾಡುತ್ತಿಲ್ಲ. ಅದರ ಅವಶ್ಯಕತೆಯೂ ನಮಗಿಲ್ಲ. ಕೇರಳ ಅಥವಾ ಪಂಜಾಬ್ ಗೆ ಹೋಗುವ ಬಗ್ಗೆ ನಾಯಕರು ತೀರ್ಮಾನ ಮಾಡುತ್ತಾರೆ. ಎಂದು ರೆಸಾರ್ಟ್ ನಿಂದ ಹೊರ ಹೋಗುವ ಮುಂಚೆ ರಾಮಲಿಂಗ ರೆಡ್ಡಿ ಎಂದು ತಮ್ಮ ಮುಂದಿನ ನಡೆಗಳನ್ನು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+