ಕನಕಪುರ ಬಳಿ ನೀರಿನ ತೊಟ್ಟಿಗೆ ಬಿದ್ದಿದ್ದ ಚಿರತೆ ರಕ್ಷಣೆ
ಕನಕಪುರ, ಏಪ್ರಿಲ್ 01: ಆಹಾರ ಅರಸಿ ನಾಡಿಗೆ ಬಂದು, ನೀರಿನ ತೊಟ್ಟಿಯಲ್ಲಿ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಕನಕಪುರ ತಾಲ್ಲೂಕಿನ ಕೆರಳಾಳುಸಂದ್ರ ಗ್ರಾಮದ ತೋಟದ ನೀರಿನ ಟ್ಯಾಂಕ್ ನಲ್ಲಿ ಇಂದು ಚಿರತೆಯೊಂದು ಬಿದ್ದಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಚಿರತೆ ಮೇಲೆ ಬರಲು ನೀರಿನ ತೊಟ್ಟಿಗೆ ಬಲೆ ಹಾಗೂ ಮರದ ದಿಮ್ಮಿ ಇಳಿಬಿಟ್ಟರು. ಬಲೆ ಸಹಾಯದಿಂದ ಮೇಲೆ ಬಂದ ಚಿರತೆ ಕಾಡಿನತ್ತ ದೌಡಾಯಿಸಿತು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಿಳಿಕಲ್ ಅರಣ್ಯ ಪ್ರದೇಶದ ಸನಿಹದ ಕೆರಳಾಳುಸಂದ್ರ ಗ್ರಾಮದ ಹೋಟೆಲ್ ನ ತೋಟದ ನೀರಿನ ಟ್ಯಾಂಕ್ ನಲ್ಲಿ ಚಿರತೆ ಬಿದ್ದಿದ್ದು, ವಿಷಯ ತಿಳಿದು ಸ್ಥಳಕ್ಕೆ ಕನಕಪುರ ತಾಲ್ಲೂಕು ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿದರು. ಡಿಎಫ್ ಒ ದೇವರಾಜ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಚಿರತೆಯನ್ನು ರಕ್ಷಿಸಲಾಯಿತು.












Click it and Unblock the Notifications