ಡಿಕೆಶಿಗೆ ಇ.ಡಿಯಿಂದ ಮಾನಸಿಕ ಕಿರುಕುಳ: ಮಾನವ ಹಕ್ಕು ಆಯೋಗಕ್ಕೆ ದೂರು
ರಾಮನಗರ, ಸೆಪ್ಟೆಂಬರ್ 28: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ತಡರಾತ್ರಿವರೆಗೂ ಪ್ರಶ್ನೆ ಕೇಳುತ್ತಾ, ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಇ.ಡಿ. ವಿರುದ್ಧ ರಾಜ್ಯಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಸಮಾಜದಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿಯಾಗಿದ್ದು, ಮೋನಿಕಾ ಶರ್ಮಾ ನಟೋರಿಯಸ್ ಕ್ರಿಮಿನಲ್ ಮತ್ತು ದೇಶದ್ರೋಹದ ಅಡಿ ಬಂಧಿತ ಆರೋಪಿಗಳ ರೀತಿ ಮಾಜಿ ಸಚಿವರನ್ನು ನಡೆಸಿಕೊಳ್ಳುತ್ತಿರುವುದು ಆಕ್ಷೇಪಾರ್ಹ.
ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಜೊತೆ ಗೌರವಯುತವಾಗಿ ನಡೆದುಕೊಂಡಿಲ್ಲ. ಡಿ.ಕೆ.ಶಿವಕುಮಾರ್ ಕನಕಪುರ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಯಾಗಿದ್ದು, ಬಂಧನದಿಂದಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ.

ಇಡಿ ಅಧಿಕಾರಿ ಮೋನಿಕಾ ಶರ್ಮಾ ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ತಡರಾತ್ರಿಯವರೆಗೂ ಪ್ರಶ್ನೆಗಳನ್ನು ಕೇಳುತ್ತಾ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿದ್ದಾರೆ.
ಡಿಕೆ ಶಿವಕುಮಾರ್ ಆರೋಗ್ಯ ಈಗಾಗಲೇ ಹದಗೆಟ್ಟಿದೆ, ಮೂರು ವಾರಗಟ್ಟಲೆ ಅವರು ಆಸ್ಪತ್ರೆಯಲ್ಲಿದ್ದರು. ಅವರಿಗೆ ರಕ್ತದೊತ್ತಡ, ಶುಗರ್ ಸೇರಿದಂತೆ ಬಳಲುತ್ತಿದ್ದಾರೆ. ಆದರೂ ಮೋನಿಕಾ ಶರ್ಮಾ ಅನಾರೋಗ್ಯದ ನಡುವೆಯೂ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ಮೋನಿಕಾ ಉದ್ದೇಶ ಪೂರ್ವಕವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಹಿರಿಯರಿಗೆ ಎಡೆ ಇಡುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುಮತಿ ನೀಡಲಿಲ್ಲ. ವಿಚಾರಣೆ ಎಂದು ಹೇಳಿ ಸತತ ಎರಡು ವಾರಗಳ ಕಾಲ ಹಿಂಸೆ ನೀಡಿದ್ದಾರೆ.












Click it and Unblock the Notifications