ವೀರಾಪುರ ಗ್ರಾಮವನ್ನು ದತ್ತು ಪಡೆಯಲಿದ್ದಾರೆ ಡಿ.ಕೆ.ಶಿವಕುಮಾರ್

ರಾಮನಗರ, ಜನವರಿ 21 : ಶಿವಕುಮಾರ ಸ್ವಾಮೀಜಿಗಳ ಹುಟ್ಟೂರು ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುಮಾರು 50 ಮನೆಗಳಿರುವ ವೀರಾಪುರ ರಾಮನಗರ ಜಿಲ್ಲೆಯಲ್ಲಿದೆ.+

In Pics: ಕೈಲಾಸಕ್ಕೆ ಹೊರಟರು ಶಿವ ಶರಣ ಶಿವಕುಮಾರ ಸ್ವಾಮಿ

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, 'ಸಿದ್ದಗಂಗಾ ಶ್ರೀಗಳ ಹುಟ್ಟೂರು ವೀರಾಪುರ ರಾಮನಗರ ಜಿಲ್ಲೆಯಲ್ಲಿದೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾರಣ ಊರನ್ನು ದತ್ತು ಪಡೆದು ಅಭಿವೃದ್ಧಿ ಮಾಡಲಾಗುತ್ತದೆ' ಎಂದು ಹೇಳಿದರು.

dk shiva kumar

ಶಿವಕುಮಾರ ಶ್ರೀಗಳು ಸೋಮವಾರ ಲಿಂಗೈಕ್ಯರಾದ ಸುದ್ದಿ ಕೇಳಿದ ಬಳಿಕ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಹುಟ್ಟೂರಿನ ನೂರಾರು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆಯಲು ತುಮಕೂರಿಗೆ ಆಗಮಿಸಿದ್ದಾರೆ.

ಡಾ.ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಜನ್ಮಸ್ಥಳ ವೀರಾಪುರದ ಮಹಾದ್ವಾರ ಎಂಬ ಫಲಕ ಗ್ರಾಮದ ಆರಂಭದಲ್ಲಿಯೇ ಕಾಣಸಿಗುತ್ತದೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಹೋಬಳಿಯಲ್ಲಿ ವೀರಾಪುರ ಗ್ರಾಮವಿದೆ.

ಶಿವಕುಮಾರ ಶ್ರೀಗಳು ರಾಜ್ಯಾದ್ಯಂತ ಭಕ್ತರನ್ನು ಹೊಂದಿದ್ದರು. ರಾಮನಗರ ಜಿಲ್ಲೆಯಲ್ಲಿಯಲ್ಲಿಯೂ ಅವರಿಗೆ ಅಪಾರ ಭಕ್ತರಿದ್ದಾರೆ. ಜಿಲ್ಲೆಯ 4 ತಾಲೂಕುಗಳಲ್ಲಿ ಭಕ್ತರ ಕರೆಗೆ ಓಗೊಟ್ಟು ಪಾದಪೂಜೆಗೆ ಆಗಮಿಸಿ, ಭಕ್ತರನ್ನು ಶ್ರೀಗಳು ಆರ್ಶೀವದಿಸಿದ್ದಾರೆ.

ಶ್ರೀಗಳ ಹುಟ್ಟೂರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೆ ಬಿದ್ದಿದೆ. ಉತ್ತಮ ರಸ್ತೆ, ಬಸ್ ಸಂಚಾರ, ಕುಡಿಯುವ ನೀರು ಮುಂತಾದ ವ್ಯವಸ್ಥೆಗಳು ಆಗಬೇಕಿದೆ. ಸಚಿವರು ದತ್ತು ತೆಗೆದುಕೊಂಡು ಗ್ರಾಮವನ್ನು ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+