Get Updates
Get notified of breaking news, exclusive insights, and must-see stories!

channapatna: ಯೋಗೇಶ್ವರ್‌ ರೆಡಿಮೇಡ್‌ ಗಂಡು..! ಜನರ ನಾಡಿ ಮಿಡಿತ ಅವರಿಗೆ ಗೊತ್ತು

ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರ ಗೆಲುವಿಗೆ ತೊಡೆ ತಟ್ಟಿರುವ ಡಿ.ಕೆ.ಶಿವಕುಮಾರ್‌ ಅವರು ಇಂದು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಯೋಗೇಶ್ವರ್‌ ಜೊತೆಗೂಡಿ ಅಬ್ಬರದ ಭಾಷಣ ಮಾಡುತ್ತಿದ್ದಾರೆ.

ಇಂದು ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ತಗಚಗೆರೆಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡಿದರು. ಸಿ.ಪಿ. ಯೋಗೇಶ್ವರ್‌ ಅವರು ರೆಡಿಮೇಡ್‌ ಗಂಡು. ಅವರಿಗೆ ಈ ಭಾಗದ ಜನರ ನಾಡಿ ಮಿಡಿತ ಗೊತ್ತಿದೆ ಎಂದು ಹೇಳಿದ್ದಾರೆ. ಈ ಮಾತಿಗೆ ಅಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿದರು.

DCM DK Shivakumar Campaigned For Congress Candidate In Channapatna Today

ತಗಚಗೆರೆ ಗ್ರಾಮದ ಜನರಿಗೆ ನಾನು ಹೇಳುವುದು ಇಷ್ಟೇ, ದೇವರು ನಮಗೆ ವರನೂ ಕೊಡೋದಿಲ್ಲ, ಶಾಪಾನೂ ಕೊಡೋದಿಲ್ಲ, ಅವಕಾಶ ಮಾತ್ರ ಕೊಡ್ತಾನೆ. ಅಂತಹ ಅವಕಾಶ ನಿಮಗೆ ಒದಗಿ ಬಂದಿದೆ ಎಂದರು.

ಚನ್ನಪಟ್ಟಣದ ಪ್ರತಿ ಮನೆಯವರ ಸಂಕಷ್ಟವನ್ನು ನಾನು ಕೇಳಿದ್ದೇನೆ. ಅವರ ಸಮಸ್ಯೆಗಳನ್ನ ವಿಚಾರಿಸಿದ್ದೇನೆ. ಕೆಲವರು ಸೈಟ್‌ ಇಲ್ಲ, ಮನೆ ಇಲ್ಲ, ಪಿಂಚಣಿ ಬರ್ತಿಲ್ಲ ಅಂತ ನೂರಾರು ಸಮಸ್ಯೆಗಳನ್ನ ಹೇಳಿಕೊಂಡರು. ಸಾವಿರಾರು ಜನರಿಗೆ ಸೈಟು, ಮನೆ ಹಂಚುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.

ಐದು ಗ್ಯಾರಂಟಿಗಳ ಮೂಲಕ ಜನರ ಕಷ್ಟಗಳಿಗೆ ನಾವೆಲ್ಲ ಹೆಗಲಾಗದ್ದೇವೆ. ಅಂತಹ ಒಂದು ಕೆಲಸವನ್ನು ಕುಮಾರಸ್ವಾಮಿ ಅವರು ಮಾಡಿದ್ದಾರಾ? ಎರಡು ಬಾರಿ ಕುಮಾರಸ್ವಾಮಿ ಅವರಿಗೆ ಮತ ನೀಡಿ ಶಾಸಕರನ್ನಾಗಿ ಮಾಡಿದ್ರಿ. ಆದರೆ, ಅವರಿಗೆ ಈ ಜನರ ಋಣ ತೀರಿಸಲು ಸಾಧ್ಯವಾಯಿತೇ? ಎಂದು ಮತದಾರರನ್ನು ಪ್ರಶ್ನಿಸಿದರು.

DCM DK Shivakumar Campaigned For Congress Candidate In Channapatna Today

ನಿಮ್ಮ ಪ್ರೀತಿ ಮರೆತು ಮಂಡ್ಯಕ್ಕೆ ಹೋದ್ರು..!

ಚನ್ನಪಟ್ಟಣ ಜನ ತೋರಿದ ಪ್ರೀತಿ, ಮಮಕಾರ ಎಲ್ಲವನ್ನೂ ಮರೆತು ಎಚ್‌.ಡಿ.ಕುಮಾರಸ್ವಾಮಿ ಮಂಡ್ಯಕ್ಕೆ ಹೋದರು. ಅದು ಹೋಗಲಿ, ಸ್ವಾತಂತ್ರ್ಯ ದಿನಾಚರಣೆ ದಿನ ಬಂದು ಧ್ವಜಾರೋಹಣವಾದ್ರೂ ಮಾಡಿದ್ರಾ? ಚನ್ನಪಟ್ಟಣದ ಜನತೆ ಜೊತೆ ಇನ್ಯಾವ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ನೈತಿಕತೆ ಮೇಲೆ ಕುಮಾರಸ್ವಾಮಿ ಅವರು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ ಎಂದು ದೂರಿದರು.

ಆದರೆ ನಮ್ಮ ಸಿ.ಪಿ.ಯೋಗೇಶ್ವರ್‌ ಅವರು ರೆಡಿಮೇಡ್‌ ಗಂಡು. ಅವರಿಗೆ ಈ ಭಾಗದ ಜನರ ನಾಡಿ ಮಿಡಿತ ಗೊತ್ತಿದೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಕಾಂಗ್ರೆಸ್‌ ಸರ್ಕಾರ ಅವರ ಜೊತೆ ಇದೆ. ಖಂಡಿತವಾಗಿಯೂ ಈ ಚನ್ನಪಟ್ಟಣದ ಜನರ ಋಣ ತೀರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಅಶೋಕ್‌ ಭರ್ಜರಿ ಪ್ರಚಾರ: ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಪರ ಬಿಜೆಪಿ ನಾಯಕ ಹಾಗೂ ವಿಪಕ್ಷ ನಾಯಕ ಆರ್ ಅಶೋಕ್‌ ಕೂಡ ನಿನ್ನೆ ಭರ್ಜರಿ ಪ್ರಚಾರ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಲಹೆಯಂತೆ ಜೆಡಿಎಸ್ ಚಿಹ್ನೆಯಡಿ ಸಿ.ಪಿ.ಯೋಗೇಶ್ವರ್ ಅವರಿಗೆ ಸ್ಪರ್ಧಿಸುವುದಕ್ಕೆ ಎಚ್.ಡಿ. ಕುಮಾರಸ್ವಾಮಿ ಅವಕಾಶ ಕೊಟ್ಟರೂ ಅವರು ನಿರಾಕರಿಸಿದರು ಎಂದು ವಾಗ್ದಾಳಿ ನಡೆಸಿದರು.

ಮೊದಲು ಜೆಡಿಎಸ್‌ನಿಂದ ಸ್ಪರ್ಧಿಸುತ್ತೇನೆಂದು ಹೇಳಿದರು. ಜೆಡಿಎಸ್ ನಾಯಕರು ಸೀಟು ಬಿಟ್ಟು ಕೊಡುವುದಾಗಿ ಹೇಳಿದಾಗ ನನಗೆ ಬಿಜೆಪಿ ಟಿಕೆಟ್ ಕೊಡಿ ಎಂದರು. ಕಾಂಗ್ರೆಸ್‌ಗೆ ಹೋಗುವ ಸಲುವಾಗಿ, ಜನರ ಕಣ್ಣಿಗೆ ಮಂಕುಬೂದಿ ಎರಚಲು ಮಾಡಿದ ನಾಟಕವಿದು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಯೋಗೇಶ್ವರ್‌ ವಿರುದ್ಧ ಹರಿಹಾಯ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+