ಯೋಗೇಶ್ವರ್ ಗೆ ಮತ ನೀಡಲ್ಲ ಎಂದು ಪ್ರತಿಭಟನೆ ನಡೆಸಿದ ದಲಿತರು

ರಾಮನಗರ, ಮೇ.‌ 08 : ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರನ್ನು ದಲಿತರು ಮತ್ತು ಛಲವಾದಿಗಳು ಬೆಂಬಲಿಸಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ. ಶಿವರಾಮ್
ಹೇಳಿಕೆ ನೀಡಿರುವುದನ್ನು ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಯೋಗೇಶ್ವರ್ ಒಬ್ಬ ಸುಳ್ಳು ಶಾಸಕ. ಕಳೆದ 19 ವರ್ಷದಿಂದ ದಲಿತರ ಹೆಸರಲ್ಲಿ ಅಧಿಕಾರ ಹಿಡಿದಿದ್ದಾರೆ. ಆದರೆ ತಾಲೂಕಿನಲ್ಲಿ ದಲಿತರ ಅಭಿವೃದ್ಧಿ ಮಾಡಿಲ್ಲ. ಅಲ್ಲದೆ, ತಮ್ಮ ಚುನಾವಣಾ ಪ್ರಚಾರ ಕೈಪಿಡಿಯಲ್ಲಿ ಅಂಬೇಡ್ಕರ್ ಭವನ ಪೂರ್ಣಗೊಳಿಸಿರುವುದಾಗಿ ಹೇಳಿದ್ದಾರೆ.

ಭವನ ಲೋಕಾರ್ಪಣೆಯಾಗದೆ ಶಿಥಿಲವಾಸ್ಥೆಗೆ ತಲುಪುತ್ತಿದೆ ಎಂದು ದಲಿತರು ಆರೋಪಿಸಿದರು.

Dalits protested against Yogeshwar for not voting

ಪಟ್ಟಣದ ಅಂಬೇಡ್ಕರ್ ಭವನದ ಎದರು ಯೋಗೇಶ್ವರ್ ಮತ್ತು ಕೆ.ಶಿವರಾಮ್ ವಿರುದ್ಧ ಪ್ರತಿಭಟನೆ ನಡೆಸಿದ ಸಂಘಟನೆಗಳ ಕಾರ್ಯಕರ್ತರು ಯೋಗೇಶ್ವರ್ ಚುನಾವಣಾ ಕರಾಪತ್ರ ಹಾಗೂ ಕೈ ಪಿಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಈ ಬಾರಿ ಯೋಗೇಶ್ವರ್ ಗೆ ದಲಿತರು ಮತ ನೀಡಲ್ಲ ಎಂದರು.

ಕೆಲ ದಿನಗಳ ಹಿಂದೆ ಚನ್ನಪಟ್ಟಣದ ಮುಸ್ಲಿಂ ಬಡಾವಣೆಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆ ಗ್ರಾಮ ಪ್ರವೇಶಿಸದಂತೆ ತಡೆದ ಘಟನೆ ಚನ್ನಪಟ್ಟಣದ ಸಾಮಂದಿಪುರ ಗ್ರಾಮದಲ್ಲಿ ನಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+