ರಾಮನಗರದಲ್ಲಿ ಹೋಟೆಲ್ ಆರಂಭಿಸಿ: ಡಿ.ಕೆ. ಸುರೇಶ್ ಮನವಿ

ರಾಮನಗರ, ಮೇ 05: ರಾಮನಗರ ಜಿಲ್ಲೆ ಕೋವಿಡ್ ಮುಕ್ತ ಜಿಲ್ಲೆಯಾಗಿದ್ದು, ಈ ಪ್ರದೇಶದಲ್ಲಿ ಪಾರ್ಸಲ್ ಪದ್ಧತಿ ಆಧಾರದ ಮೇಲೆ ಹೋಟೆಲ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ ಕೆ ಸುರೇಶ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಈ ವಿಚಾರವಾಗಿ ವಿಡಿಯೋ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಸದ ಸುರೇಶ್ ಮನವಿ ಮಾಡಿದ್ದಾರೆ. ವಿಡಿಯೊದಲ್ಲಿ ಸುರೇಶ್ ಅವರು, ಮನವಿ ಮಾಡಿದ್ದಿಷ್ಟು: ಮಾನ್ಯ ಮುಖ್ಯಮಂತ್ರಿಗಳೇ ರಾಮನಗರ ಜಿಲ್ಲೆಯನ್ನು ನೀವು ಹಸಿರು ವಲಯವನ್ನಾಗಿ ಘೋಷಿಸಿದ್ದೀರಿ.

ಆದರೂ ಜಿಲ್ಲೆಯಲ್ಲಿ ಈವರೆಗೂ ಹೋಟೆಲ್‌ಗಳಿಂದ ತಿಂಡಿಯನ್ನು ಪಾರ್ಸಲ್ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುತ್ತಿಲ್ಲ. ಈ ವಿಚಾರವಾಗಿ ನಾನು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರೂ ಅವಕಾಶ ನೀಡಲಾಗುತ್ತಿಲ್ಲ.

D K Suresh has appealed to Yediyurappa to approve the opening the hotels in Ramanagar district.

ಹಳ್ಳಿಗಳಿಂದ ಪಟ್ಟಣಕ್ಕೆ ಬಂದ ಜನರಿಗೆ ತಿನ್ನಲು ಏನು ಸಿಗುತ್ತಿಲ್ಲ. ಹೀಗಾಗಿ ತಾವುಗಳು ಮುಖ್ಯ ಕಾರ್ಯದರ್ಶಿದರ್ಶಿಗಳಿಗೆ ಆದೇಶ ನೀಡಿ ನನ್ನ ಕ್ಷೇತ್ರ ರಾಮನಗರ ಹಾಗೂ ತುಮಕೂರು ಭಾಗಳಲ್ಲೂ ಈ ಅವಕಾಶ ಕಲ್ಪಿಸಿಕೊಡಬೇಕು ಇಂದು ನಾನು ನಿಮಗೆ ಒತ್ತಾಯ ಪೂರ್ವಕವಾಗಿ ವಿನಂತಿ ಮಾಡುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+