ಸಂಪುಟ ವಿಸ್ತರಣೆಗೆ ಮುನ್ನವೇ ಚನ್ನಪಟ್ಟಣದಲ್ಲಿ ರಾರಾಜಿಸುತ್ತಿವೆ ಸಿಪಿವೈ ಪರ ಬ್ಯಾನರ್
ಚನ್ನಪಟ್ಟಣ, ಫೆಬ್ರವರಿ 05: ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ಒಂದು ದಿನ ಬಾಕಿ ಇದೆ. ಆದರೆ ಈ ಮೊದಲೇ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ಭಾವಚಿತ್ರ ಹಾಕಿ ನೂತನ ಸಚಿವರಿಗೆ ಶುಭಾಶಯಗಳು ಎಂಬ ಬ್ಯಾನರ್ ಗಳು ಪಟ್ಟಣದ ತುಂಬೆಲ್ಲಾ ರಾರಾಜಿಸುತ್ತಿವೆ.
ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ಫಿಕ್ಸ್ ಅನ್ನುತಿದ್ದಂತೆ ಸಿಪಿವೈ ಅಭಿಮಾನಿಗಳು ಭರ್ಜರಿ ಸೆಲೆಬ್ರೇಷನ್ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹೀಗಾಗೇ ನೂತನ ಸಚಿವರಿಗೆ ಅಭಿನಂದನೆ ಕೋರುವ ಬ್ಯಾನರ್ ಗಳು ನಗರದ ರಸ್ತೆಗಳಲ್ಲಿ ತುಂಬಿಕೊಂಡಿವೆ.

ಮತ್ತೊಂದೆಡೆ ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಲು ಮೂಲ ಬಿಜೆಪಿಗರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಿಪಿವೈಗೆ ಸಚಿವ ಸ್ಥಾನ ಇಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಗೊಂದಲದ ನಡುವೆಯೇ ಬೆಂಬಲಿಗರು ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.












Click it and Unblock the Notifications