ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಗೆ ಮರ್ಯಾದೆ ಕೊಡೋದು ಹೀಗೇನಾ? ಎಚ್‌ಡಿಕೆ ವಿರುದ್ಧ ಬಿಜೆಪಿ ಮಹಿಳಾ ನಗರಸಭೆ ಸದಸ್ಯರ ಆಕ್ರೋಶ

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ, ಆಗಸ್ಟ್‌ 17: ಮಂಗಳವಾರ ನಗರದ ನಗರಸಭೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ವಾಹನಗಳ ಲೋಕಾರ್ಪಣೆ ಕಾರ್ಯಕ್ರಮ ವಿರೋಧಿಸಿ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ನಿಮ್ಮ ನಾಟಕ ನನ್ನ ಮುಂದೆ ನಡೆಯುವುದಿಲ್ಲ ಎಂಬ ಹೇಳಿಕೆಯನ್ನು ಬಿಜೆಪಿ ಮಹಿಳಾ ಸದಸ್ಯರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆಯ ಬಿಜೆಪಿ ಮಹಿಳಾ ಸದಸ್ಯ ಸುಮಾ ರವೀಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , "ಏನ್ ನಾಟಕ ಮಾಡ್ತೀರಾ.. ಡ್ರಾಮಾ ಕಂಪನಿಯವರ" ಎಂದು ಕುಮಾರಸ್ವಾಮಿ ಯವರು ಹೇಳಿರುವುದು ನಮಗೆ ತುಂಬಾ ನೋವು ತಂದಿದೆ. ಮುಖ್ಯಮಂತ್ರಿಗಳಾಗಿದ್ದವರು ಹೆಣ್ಣುಮಕ್ಕಳಿಗೆ ಮರ್ಯಾದೆ ಕೊಡೂ ರೀತಿ ಇದೆನಾ" ಎಂದು ತಮ್ಮ ಆಕ್ರೋಶ ಹೊರಹಾಕಿದರು.

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಸಾವರ್ಕರ್ ಅಪ್ರತಿಮ ದೇಶ ಭಕ್ತ: ಅಶ್ವಥ್ ನಾರಾಯಣ್ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಸಾವರ್ಕರ್ ಅಪ್ರತಿಮ ದೇಶ ಭಕ್ತ: ಅಶ್ವಥ್ ನಾರಾಯಣ್

ನಗರಸಭೆಯ ಅಧಿಕಾರಿಗಳು ಹಾಗೂ ಅಧ್ಯಕ್ಷರು ಬಿಜೆಪಿ ನಗರಸಭಾ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ನಮ್ಮ ಸಮಸ್ಯೆ ಹೇಳಿಕೊಂಡು ಹೋಗಿದ್ದೆ ತಪ್ಪಾಯ್ತಾ, ಅವರು ಆ ರೀತಿ ಮಾತನಾಡಿದ್ದು ಸರಿನಾ? ಎಂದು ಪ್ರಶ್ನೆ ಮಾಡಿದರು.

BJP women members of CMC outrage against HD Kumaraswamy

ಅಲ್ಲದೇ ನಗರಸಭೆಯ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದೆ. ಜೆಡಿಎಸ್ ಸದಸ್ಯರ ವಾರ್ಡ್ ಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಆದರೆ ಬಿಜೆಪಿ ಸದಸ್ಯರು ಪ್ರತಿನಿಧಿಸುವ ವಾರ್ಡಗಳಿಗೆ ಮಾತ್ರ ಅನುದಾನ ಹಂಚಿಕೆ ಮಾಡಿಲ್ಲ. ಬಿಜೆಪಿ ಸದಸ್ಯರಿರುವ ವಾರ್ಡಗಳಲ್ಲಿ ಕುಮಾರಸ್ವಾಮಿಗೆ ಜನರು ಮತ ನೀಡಿಲ್ಲವೇ‌, ಬಿಜೆಪಿ ಸರಕಾರ ನೀಡಿರುವ ನಗರಾಭಿವೃದ್ಧಿ ಅನುದಾನದಲ್ಲಿ ತಾರತಮ್ಯ ಮಾಡುವುದು ಎಷ್ಟು ಸರಿ? ಎಂದು ಬಿಜೆಪಿ ಸದಸ್ಯರು ಪ್ರಶ್ನೆಮಾಡಿದರು.

ಮಹಿಳೆಯ ಸದಸ್ಯರೊಂದಿಗೆ ಸೌಜನ್ಯದಿಂದ ವರ್ತಿಸಿದ ಇವರ ಪತ್ನಿ ಸಹ ಶಾಸಕಿಯಾಗಿದ್ದಾರೆ. ಈ ರೀತಿ ಮಾತಾಡೋದು ಸರಿಯಲ್ಲಾ. ಮಂಡ್ಯದಲ್ಲಿ ಲೋಕಸಭೆ ಎಲೆಕ್ಷನ್ ನಲ್ಲೂ ಸುಮಲತಾ ಅವರನ್ನ ಅವಮಾನಿಸಿದ್ದರು ಎಂದು ನಗರದ 15ನೇ ವಾರ್ಡ್ ಬಿಜೆಪಿ ಸದಸ್ಯೆ ಸುಮಾ ರವೀಶ್ ಎಚ್‌ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಿಎಂ ಎಚ್‌ಡಿಕೆ ಪ್ರತಿಕ್ರಿಯೆ

ಸ್ವಚ್ಚತಾ ವಾಹನಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಎಂದು ಕೆಲವು ಸದಸ್ಯರು ಪ್ರಶ್ನೆಮಾಡಿದರು. ಈ ಬಗ್ಗೆ ಅಧಿಕಾರಿಗಳು ಹಾಗೂ ನಗರಸಭೆಯ ಅಧ್ಯಕ್ಷರನ್ನು ವಿಚಾರಿಸಿದ್ದೇನೆ. ಕಾರ್ಯಕ್ರಮಕ್ಕೆ ಯಾವುದೇ ಆಮಂತ್ರಣ ಪತ್ರ ಮುದ್ರಿಸಿಲ್ಲ, ಕೇವಲ ಪೋನ್ ಮೂಲಕ ಶಿಷ್ಟಾಚಾರದಂತೆ ಎಲ್ಲರಿಗೂ ಮಾಹಿತಿ ನೀಡಿದ್ದೇವೆ. ಅಲ್ಲದೇ ಎಲ್ಲಾ ಸದಸ್ಯರಿಗೆ ಮೆಸೇಜ್ ಕೂಡ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

BJP women members of CMC outrage against HD Kumaraswamy

ಅನುದಾನ ಹಂಚಿಕೆಯಲ್ಲಿ ಏನೇ ತಾರತಮ್ಯ ನಡೆದಿದ್ದರೆ, ಇದೇ 20 ರಂದು‌ ಸಭೆ ನಡೆಸಿ ಸರಿಪಡಿಸುವುದಾಗಿ ಭರವಸೆ ನೀಡಿದ್ದೇನೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಕಾರ್ಯಕ್ರಮದಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಅವರಿಗೆ ಮಾಜಿ ಶಾಸಕರು ಎತ್ತಿಕ್ಕಿದ್ದಾರೋ ನನಗೆ ಗೊತ್ತಿಲ್ಲ ಅಥವಾ ಅವರಿಗೆ ಮಾಹಿತಿ ಇಲ್ಲದೇ ಇರಬಹುದು, ಮಾಜಿ ಶಾಸಕರನ್ನು ಮೆಚ್ಚಿಸಲು ಇವರು ಇಂತಹ ಕೆಲಸಕ್ಕೆ ಕೈ ಹಾಕಿರಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

Recommended Video

ಗಣೇಶ ಹಬ್ಬದಲ್ಲೂ Dr Puneeth Rajkumarಗೆ ಫುಲ್ ಡಿಮ್ಯಾಂಡ್ | Ganesha Festival 2022 | Oneindia Kannada

English summary
BJP women members of Channapatna Municipal Council outrage against former CM HD Kumaraswamy for he called bjp members are drama artist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X