ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡದಿಯಲ್ಲಿ ಉರುಳುವ ಸ್ಥಿತಿಯಲ್ಲಿ 90 ವರ್ಷದ ಬೃಹತ್ ಮರ; ಜೀವಭಯದಲ್ಲಿರುವ ಸಾರ್ವಜನಿಕರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್‌ 08: ಬಿಡದಿ ಪಟ್ಟಣ ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಬೃಹತ್ ಅರಳಿ ಮರ ಧರೆಗೂರುಳುವ ಸ್ಥತಿಯಲ್ಲಿದೆ. ಆದ್ದರಿಂದ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡುದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಬಿಡದಿ ಪಟ್ಟಣದ ರೈಲ್ವೇ ನಿಲ್ದಾಣದ ರಸ್ತೆಯ ಪ್ರಾರಂಭದಲ್ಲೇ 90 ವರ್ಷಗಳಷ್ಟು ಹಳೆಯದಾದ ಅರಳಿ ಮರ ಇದೆ. ಈ ಮರ ಈಗಾಗಲೇ ರಸ್ತೆ ಕಡೆ ವಾಲಿದ್ದು, ಮುಂದಿನ ದಿನಗಳಲ್ಲಿ ಅಪಾಯ ತಂದೊಡ್ಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.

ಅರಳಿ ಮರ ತೆರವುಗೊಳಸಿ ಅಪಾಯ ತಪ್ಪಿಸಿಬೇಕಾದ ಪುರಸಭೆ ಕೂಡ ಇದೇ ರಸ್ತೆಯಲ್ಲಿದೆ. ಈ ರಸ್ತೆಯಲ್ಲಿ ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಓಡಾಡುತ್ತಿರುತ್ತಾರೆ. ಆದರೂ ಲಮಾಡುತ್ತಿರುವ ಅರಳಿ ಮರ ಕಂಡರು ಕಾಣದಂತೆ ವರ್ತಿಸುತ್ತಿದ್ದಾರೆ. ಉರುಳಿ ಬೀಳು ಹಂತದಲ್ಲಿರುವ ಮರವನ್ನು ತೆರವು ಮಾಡಲು ಮುಂದಾಗಿಲ್ಲ. ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ಪ್ರಾಣ ಬೀತಿಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ರಾಮನಗರದಲ್ಲಿ ಅಬ್ಬರಿಸುತ್ತಿರುವ ವರುಣ, ಸಾರ್ವಜನಿಕರಿಗೆ ಮತ್ತೆ ಜಲಾಘಾತದ ಭೀತಿರಾಮನಗರದಲ್ಲಿ ಅಬ್ಬರಿಸುತ್ತಿರುವ ವರುಣ, ಸಾರ್ವಜನಿಕರಿಗೆ ಮತ್ತೆ ಜಲಾಘಾತದ ಭೀತಿ

ಜನರಲ್ಲಿ ಆತಂಕ ಮೂಡಿಸಿದ 90 ವರ್ಷದ ಮರ

ಪಟ್ಟಣದ ಹಿರಿಯರು ಹೇಳುವಂತೆ ಈ ಅರಳಿ ಮರ ಸುಮಾರು 90 ವರ್ಷಗಳಷ್ಟು ಹಳೆಯದ್ದಾಗಿದೆ. ಮರದ ಸುತ್ತಲೂ ಜನರು ವಿಶ್ರಾಂತಿ ಪಡೆಯಲಿ ಎನ್ನುವ ಉದ್ದೇಶದಿಂದ ಇಲ್ಲಿ ಕಟ್ಟೆಯನ್ನು ನಿರ್ಮಾಣ ಮಾಡಿದ್ದಾರೆ. ಪಟ್ಟಣಕ್ಕೆ ಬರುವ ಸಾರ್ವಜನಿಕರು ಸ್ವಲ್ಪ ಸಮಯ ಈ ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆದು ಹೋಗುತ್ತಾರೆ. ಅಲ್ಲದೇ ಈ ಮರದ ಕೆಳಗೆ ಬೀದಿ ಬದಿ ವ್ಯಾಪಾರಿಗಳು ಪ್ರತಿನಿತ್ಯ ವ್ಯಾಪಾರ ಮಾಡುತ್ತಾರೆ. ವ್ಯಾಪಾರದ ಜಾಗ ಅಂದ ಮೇಲೆ ಜನರು ಬಂದೇ ಬರುತ್ತಾರೆ. ಬೃಹತ್ ಅರಳಿ ಮರದ ಕೆಳಗೆ ಹತ್ತಾರು ವಾಣಿಜ್ಯ ಮಳಿಗಿಗೆಗಳು ತಲೆ ಎತ್ತಿವೆ. ಹಲವು ಅಂಗಡಿಗಳ ಮೇಲೆ ಮರದ ಕೊಂಬೆಗಳು ಚಾಚಿಕೊಂಡಿವೆ. ಅಂಗಡಿ ಮಳಿಗೆಗಳ ಮಾಲೀಕರು ಹಾಗೂ ಅಂಗಡಿ ಬಾಡಿಗೆ ಪಡೆದಿರುವ ಜನರು ಇದೀಗ ಮರ ಎಲ್ಲಿ ಬಿದ್ದುಬಿಡುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ.

Bidadis 90 Year Old Huge Tree in Danger Of Falling Down Stirring Panic to Locals

ಮಳೆಗೆ ಸಡಿಲವಾದ ಮರದ ಬುಡ

ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಬೃಹತ್ ಅರಳಿ ಮರ ರಸ್ತೆ ಭಾಗಕ್ಕೆ ಸ್ವಲ್ಪ ಮಟ್ಟಿಗೆ ವಾಲಿದೆ. ಅಲ್ಲದೇ ರಸ್ತೆ ಕಡೆಗೆ ಬೃಹತ್ ಗಾತ್ರದ ರೊಂಬೆ ಇದ್ದು, ಇದು ಯಾವ ಸಮಯದಲ್ಲಿ ಬೇಕಾದರೂ ಮುರಿದುಕೊಂಡು ರಸ್ತೆಗೆ ಬೀಳುವ ಸ್ಥಿತಿಯಲ್ಲಿದೆ. ಮರದ ಸುತ್ತ ಕಲ್ಲಿನ ಕಟ್ಟೆಯನ್ನ ಕಟ್ಟಲಾಗಿದೆ. ಮರ ದಪ್ಪವಾದಂತೆ ಕಲ್ಲಿನ ಕಟ್ಟಡ ಅಲ್ಲಲ್ಲಿ ಬಿರುಕು ಬಿಡುತ್ತಲೇ ಇದೆ. ಅಲ್ಲದೇ ಕಲ್ಲಿನ ಸಂದಿಗಳಲ್ಲಿ ಮರದ ಬೇರುಗಳು ಸಹ ಹೊರ ಬಂದಿವೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಲಿ ಎಂಬುದು ಸ್ಥಳೀಯ ನಾಗರೀಕರ ಒತ್ತಾಯ ಆಗಿದೆ.

Bidadis 90 Year Old Huge Tree in Danger Of Falling Down Stirring Panic to Locals

ಮರದ ಕೊಂಬೆ ಕಡಿಯುವಂತೆ ಸ್ಥಳೀಯರ ಆಗ್ರಹ

ಇನ್ನೂ ಪಟ್ಟಣದ ನಿವಾಸಿ ಹಾಗೂ ಸಾಮಾಜಿಕ ಹೋರಾಟಗಾರ ಮುತ್ತಣ್ಣ ಈ ಬಗ್ಗೆ ಮಾತನಾಡಿ, ನಮ್ಮ ಬಿಡದಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ನಡೆಯುವ ಜಾಗ ಅಂದರೆ ಅದು ರೈಲ್ವೇ ನಿಲ್ದಾಣದ ರಸ್ತೆ. ಅಲ್ಲದೇ ಬೀಳುವ ಹಂತದಲ್ಲಿರುವ ಮರದ ಕೆಳೆಗೆ ಬೀದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಬೃಹತ್ ಅರಳಿ ಮರ ತುಂಬಾ ಹಳೆಯದಾಗಿದೆ. ಮರದ ದಪ್ಪ ಕೊಂಬೆ ರಸ್ತೆ ಕಡೆಗೆ ಬಂದಿದ್ದು, ಇದು ಅಪಾಯದ ಮುನ್ಸೂಚನೆ ನೀಡುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಮರ ಕಡಿಯದಿದ್ದರೂ ಪರವಾಗಿಲ್ಲ, ರಸ್ತೆ ಕಡೆಗೆ ವಾಲಿರುವ ಬೃಹತ್ ಕೊಂಬೆಯನ್ನಾದರೂ ಕಡಿದು ಸಾರ್ವಜನಿಕರು ಹಾಗೂ ವಾಹನ ಸವಾರರ ಓಡಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ.

English summary
A 90 year old huge tree in Bidadi is in danger of falling down. Locals who passes through the road where this tree is located, are worried of safety. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X