Karnataka assembly election 2023: ರಾಮನಗರದಲ್ಲಿ ರಂಗೇರಿದ "ಗಿಫ್ಟ್‌ ಪಾಲಿಟಿಕ್ಸ್", ಮತದಾರನ ಮನ ಗೆಲ್ಲಲು ಉಡುಗೊರೆ ಆಮಿಷ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು, ರಾಜಕಾರಣಿಗಳು ಉಡುಗೊರೆಗಳನ್ನು ಕೊಟ್ಟು ಮತದಾರರನ್ನು ತಮ್ಮ ಕಡೆಗೆ ಸೆಳೆಯಲು ಭಾರಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ರಾಮನಗರದಲ್ಲೂ ಕೂಡ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ರಾಮನಗರ, ಫೆಬ್ರವರಿ, 20: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರಿದ್ದು, ಈಗಾಗಲೇ ಮೂರು ಪಕ್ಷಗಳ ರಾಜಕಾರಣಿಗಳು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಹಾಗೆಯೇ ಮತದಾರರಿಗೆ ಉಡುಗೊರೆಗಳನ್ನು ಕೊಟ್ಟು ಅವರನ್ನು ತಮ್ಮ ಕಡೆಗೆ ಸೆಳೆಯಲು ಭಾರಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಇದೇ ರೀತಿಯಲ್ಲಿ ರಾಮನಗರದಲ್ಲೂ ಕೂಡ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

2023ರ ಸಾರ್ವತ್ರಿಕ ಚುನಾವಣೆಯ ದಿನಾಂಕ ಘೋಷಣೆಗೆ ಮೊದಲೇ ಸಕ್ರಿಯವಾಗಿರುವ ಅಭ್ಯರ್ಥಿಗಳು ಮತದಾರನ ಮನಸ್ಸು ಗೆಲ್ಲಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ವಿವಿಧ ಉಡುಗೊರೆಗಳನ್ನು ನೀಡುವ ಮೂಲಕ ಅಮಿಷಗಳನ್ನು ಒಡ್ಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಿನಿಂದಲೇ ಚುನಾವಣಾ ಕಣ ರಂಗೇರುತ್ತಿದ್ದು, ಈ ಸಂದರ್ಬದಲ್ಲಿ ನಡೆಯುವ ಹಬ್ಬ, ಜಾತ್ರೆ , ನಾಟಕ, ದಾರ್ಮಿಕ ಸ್ಥಳಗಳ ಯಾತ್ರೆಗಳಿಗೆ ಅಭ್ಯರ್ಥಿಗಳು ಉದಾರ ಧನ ಸಹಾಯ ನೀಡುತ್ತಿದ್ದಾರೆ. ಅಲ್ಲದೇ ಸಂಭಾವ್ಯ ಅಭ್ಯರ್ಥಿಗಳು ಪೈಪೋಟಿ ಮೇಲೆ ಉಡುಗೊರೆ ನೀಡುವ ಮೂಲಕ ಮತದಾರ ಸೆಳೆಯಲು ಕಸರತ್ತು ನಡೆಸಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಾದ ಜೆಡಿಎಸ್ ಪಕ್ಷದ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ ಇಕ್ಬಾಲ್ ಹುಸೇನ್ ಇಬ್ಬರು ಅಭ್ಯರ್ಥಿಗಳು ಧರ್ಮ ಯಾತ್ರೆ, ಹಾಗೂ ಪುಣ್ಯ ಯಾತ್ರೆ ಮಾಡಿಸುವ ಮೂಲಕ ಮತದಾರನ ಮನ ಗೆಲ್ಲಲು ಕಸರತ್ತು ನಡೆಸಿದ್ದಾರೆ. ರಾಮನಗರದ ಕ್ಷೇತದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪುತ್ರನಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿಯವರನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು. ಆ ಕ್ಷಣದಿಂದ ಸಕ್ರಿಯವಾಗಿರುವ ನಿಖಿಲ್ ಕುಮಾರಸ್ವಾಮಿ ಸುಮಾರು 20 ಬಸ್‌ಗಳನ್ನು ನಿಯೋಜನೆ ಮಾಡಿ ವ್ಯವಸ್ಥಿತವಾಗಿ ಧರ್ಮಸ್ಥಳ ಧರ್ಮಯಾತ್ರೆ ಮಾಡಿಸುತ್ತಿದ್ದಾರೆ.

 ಉಡುಗೊರೆಗಳನ್ನ ನೀಡುತ್ತಿರುವ ರಾಜಕಾರಣಿಗಳು

ಉಡುಗೊರೆಗಳನ್ನ ನೀಡುತ್ತಿರುವ ರಾಜಕಾರಣಿಗಳು

ರಾಮನಗರ ಕ್ಷೇತ್ರದ ಮತದಾರರಿಗೆ ಪುಣ್ಯಯಾತ್ರೆ ಹೆಸರಿನಲ್ಲಿ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಇಕ್ಬಾಲ್ ಹುಸೇನ್ ಕೂಡ ಧರ್ಮಸ್ಥಳ ಯಾತ್ರೆಯನ್ನು ಸಹ ಮಾಡಿಸುತ್ತಿದ್ದಾರೆ. ಅಲ್ಲದೇ ಈಗಾಗಲೇ ಕ್ಷೇತ್ರದ ಪ್ರತಿ ಮನೆಗೂ "ನಾನ್ ಸ್ಟಿಕ್ ತವಾ" ಉಡುಗೊರೆಯಾಗಿ ಹಂಚಿಕೆ ಮಾಡಿರುವ ಇಕ್ಬಾಲ್ ಹುಸೇನ್ ಎರಡನೇ ಸುತ್ತಿನಲ್ಲಿ ಪ್ರತಿ ಮನೆಗೂ "ಡಿನ್ನರ್ ಸೆಟ್" ವಿತರಣೆಗೆ ಮುಂದಾಗಿದ್ದಾರೆ. ಹೀಗೆ ಉಡುಗೊರೆಗಳ ಮೂಲಕ ಮತದಾರರನ ಮನವೊಲಿಸಲು ಮುಂದಾಗಿದ್ದಾರೆ.

 ಪ್ರತಿ ಮನೆಗೂ ತೆರಳಿ ಉಡುಗೊರೆ ಹಂಚಿಕೆ

ಪ್ರತಿ ಮನೆಗೂ ತೆರಳಿ ಉಡುಗೊರೆ ಹಂಚಿಕೆ

ಇನ್ನು ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎದರು ಸೋತ ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಸ್ವಾಭಿಮಾನಿ ಸಂಕಲ್ಪ ನಡಿಗೆ ಹೆಸರಿನಲ್ಲಿ ಪ್ರತಿ ಮತದಾರನ ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ. ಮಹಿಳೆಯರಿಗೆ ಆಕರ್ಷಕವಾದ ರೇಷ್ಮೆ ಸೀರೆಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.

 ಮತದಾರರನ್ನು ಸೆಳೆಯಲು ಶತ ಪ್ರಯತ್ನ

ಮತದಾರರನ್ನು ಸೆಳೆಯಲು ಶತ ಪ್ರಯತ್ನ

ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ‌ ಸೀರೆ ಮೂಲಕ ಮತದಾರರನ್ನು ಸೆಳೆದು ಮಾಜಿ‌ ಸಿಎಂ ಎಚ್‌.ಡಿ.ಕೆಗೆ ಟಕ್ಕರ್ ನೀಡಲು ಸಿ.ಪಿ.ವೈ ಮುಂದಾಗಿದ್ದಾರೆ.

 ಉಡುಗೊರೆ ಬಾಕ್ಸ್‌ಗಳ ಮೇಲೆ ಇದ್ದಿದ್ದೇನು?

ಉಡುಗೊರೆ ಬಾಕ್ಸ್‌ಗಳ ಮೇಲೆ ಇದ್ದಿದ್ದೇನು?

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಯುಗಾದಿ ಹಬ್ಬದ ನೆಪದಲ್ಲಿ ತಮ್ಮ ಕಾರ್ಯಕರ್ತರಿಂದ ಸೀರೆ ಹಂಚಿಸುತ್ತಿದ್ದಾರೆ. ಕ್ಷೇತ್ರದ ಮನೆ -ಮನೆಗೂ ಸೀರೆ ಹಂಚಲಾಗುತ್ತಿದ್ದು, ಸೀರೆಗಳ ಮೇಲೆ ಯುಗಾದಿ ಹಬ್ಬದ ಶುಭಾಶಯದ ಜೊತೆಗೆ, ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಸ್ಟಿಕ್ಕರ್ ಅಂಟಿಸಲಾಗಿದೆ. ಯೋಗೇಶ್ವರ್ ಮಹಿಳಾ ಮತದಾರರಿಗೆ ನೀಡುತ್ತಿರುವ ಸೀರೆ, ಗಿಫ್ಟ್ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+