ಜಮೀನು ವ್ಯಾಜ್ಯ; ಕನಕಪುರದಲ್ಲಿ ಸಂಬಂಧಿಗಳ ಕೊಲೆ ಮಾಡಿದ ಯುವಕ
ಕನಕಪುರ, ಸೆಪ್ಟೆಂಬರ್ 5: ಜಮೀನಿಗೆ ಸಂಬಂಧಿಸಿದ ವಿಚಾರವಾಗಿ ಯುವಕನೊಬ್ಬ ತನ್ನ ದೊಡ್ಡಮ್ಮ ಹಾಗೂ ದೊಡ್ಡಮ್ಮನ ಮಗಳನ್ನು ಕೊಲೆ ಮಾಡಿರುವ ಘಟನೆ ಕನಕಪುರದಲ್ಲಿ ನಡೆದಿದೆ.
ಕನಕಪುರ ತಾಲ್ಲೂಕಿನ ಸೊಂಟೇನಹಳ್ಳಿ ಗ್ರಾಮದಲ್ಲಿ ಕೊಲೆ ನಡೆದಿದ್ದು, ಅದೇ ಗ್ರಾಮದ ನಾಗ (ಬುಲೆಟ್ ನಾಗ) ಎಂಬುವವನು ಕೊಲೆ ಮಾಡಿದ ಯುವಕ. ಕೊಲೆ ಮಾಡಿದ ನಂತರ ತನ್ನ ದೊಡ್ಡಮ್ಮ ಮಂಗಮ್ಮ ಹಾಗೂ ಅವರ ಮಗಳು ನಾಗರತ್ನಾಳನ್ನು ತಾನೇ ಕೊಲೆ ಮಾಡಿರುವುದಾಗಿ ಹಾರೋಹಳ್ಳಿ ಪೋಲಿಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಮಂಗಮ್ಮನ ಪತಿ ಆರು ತಿಂಗಳ ಹಿಂದೆ ತೀರಿ ಹೋಗಿದ್ದರು. ಮಂಗಮ್ಮ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಲವು ವರ್ಷಗಳಿಂದ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯ ನಡೆಯುತ್ತಿದ್ದುದಾಗಿ ತಿಳಿದುಬಂದಿದೆ.

ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಸಮಯದಲ್ಲಿ ಮಂಗಮ್ಮ ಅವರ ಮನೆಗೆ ಹೋಗಿ ಅವರನ್ನು ಹಾಗೂ ಮಗಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications