ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೇಶನದ ಖಾತಾಗಾಗಿ 90 ರ ವೃದ್ಧೆ ಅಹೋರಾತ್ರಿ ಉಪವಾಸ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 14 : ವೃದ್ಧೆಯೊಬ್ಬರು ತಮ್ಮ ನಿವೇಶನದ ಖಾತಾ ಮಾಡಿಕೊಡುತ್ತಿಲ್ಲವೆಂದು ತನ್ನ ಮೊಮ್ಮಗನೊಂದಿಗೆ ಆಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮದ ವೃದ್ಧೆ ನಿಂಗಮ್ಮ ಸತ್ಯಾಗ್ರಹ ಆರಂಭಿಸಿದ್ದಾರೆ.

90 years old woman on day-night hunger strike

ಮತ್ತೀಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಲಿಂಗಯ್ಯ ಖಾತಾ ಮಾಡಿಕೊಡುವುದಾದರೆ ಲಂಚ ನೀಡುವಂತೆ ಒತ್ತಡ ಹಾಕುತ್ತಿದ್ದರು ಎಂದು ವೃದ್ಧೆ ನಿಂಗಮ್ಮ ಆರೋಪಿಸಿದರು.

1989ರಲ್ಲಿ ತಮ್ಮ ಪತಿ ಹೊನ್ನೇಗೌಡರಿಗೆ ಮಂಜೂರಾಗಿದ್ದ ನೀವೇಶನದ ಖಾತಾ ಮಾಡಿಕೊಡಲು ಕಳೆದ 19 ತಿಂಗಳ ಹಿಂದೆ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು.

ಇದೂವರೆಗೂ ಖಾತೆ ಮಾಡಿಕೊಡದೆ ಹಲವು ನೆಪವೊಡ್ಡಿ ಖಾತಾ ಮಾಡಿಕೊಡುತ್ತಿಲ್ಲ ಎಂದು ತಮ್ಮ ಮೊಮ್ಮಗ ಆಶೋಕ್ ಜೊತೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

90 years old woman on day-night hunger strike

ಕೇವಲ ಹಣದ ಆಶೆಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವಲಿಂಗಯ್ಯ ಖಾತಾ ಮಾಡಿಕೊಡದೇ ಸಬೂಬು ಹೇಳುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡು ತಮ್ಮ ನಿವೇಶನದ ಖಾತಾ ಮಾಡಿಕೊಡುವಂತೆ ಆಗ್ರಹಿಸಿದರು.

English summary
A 90-years-old woman from Channapatna in Ramanagara district, has resorted to hunger strike, along with her grand-son, for not giving khata for her own site. She has alleged that an panchayat development officer has demanded bribe to get the khata done. Who will help this old poor lady? Are party leaders reading this news?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X