ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು ಜಿಲ್ಲೆಯಲ್ಲಿ ಮೈಕೊರೆಯುವ ಚಳಿ: ಜನರ ಉಪಾಯಗಳೇನು?

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ನವೆಂಬರ್‌, 23: ಜಿಲ್ಲೆಯಲ್ಲಿ ತಾಪಮಾನವು ದಿನದಿಂದ ದಿನಕ್ಕೆ ಕುಸಿತವಾಗುತ್ತಿದ್ದು, ಕೊರೆಯುವ ಚಳಿ ಆವರಿಸಿಕೊಳ್ಳುತ್ತಿರುವುದರಿಂದ ಜನರು ಮನೆಯಿಂದ ಹೊರಬರದಂತಾಗಿದೆ.

ಪ್ರತಿದಿನ ಬೆಳಗಿನ ಜಾವ ಹಾಗೂ ಸಂಜೆ ಅಗುತ್ತಿದ್ದಂತೆ ವಾಯು ವಿಹಾರ, ಸೈಕಲ್‌ ಸವಾರಿ, ವ್ಯಾಯಾಮ ಮಾಡಲು ಹಾಗೂ ಮಕ್ಕಳನ್ನು ಆಟವಾಡಿಸಲು ಉದ್ಯಾನಗಳಲ್ಲಿ ಸೇರುತ್ತಿದ್ದ ಜನರು ಇದ್ದಕ್ಕಿದ್ದಂತೆ ಚಳಿ ಹೆಚ್ಚಾದ ಕಾರಣ ದಿನಚರಿ ಬದಲಿಸಿಕೊಂಡಿದ್ದಾರೆ. ಉದ್ಯಾನಗಳಲ್ಲಿ ತಲೆಗೆ ಸ್ಕಾರ್ಪ್‌ ಸುತ್ತಿಕೊಂಡು ಅಥವಾ ಉಲನ್‌ ಕ್ಯಾಪ್‌ ಧರಿಸಿದ ಬೆರಳೆಣಿಕೆಯಷ್ಟು ಜನರು ಮಾತ್ರ ಕಾಣಿಸುತ್ತಿದ್ದಾರೆ. ನಗರದ ಸಾರ್ವಜನಿಕ ಉದ್ಯಾನ, ಜಿಲ್ಲಾ ಕ್ರೀಡಾಂಗಣ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಆಶಾಪುರ ಮಾರ್ಗದ ಕೃಷ್ಣಗಿರಿ ಬೆಟ್ಟ, ಬೊಳಮಾನದೊಡ್ಡಿ ಮಾರ್ಗ, ವಾಸವಿ ನಗರ ಉದ್ಯಾನ, ನಿಜಲಿಂಗಪ್ಪ ಕಾಲೊನಿ ಉದ್ಯಾನ, ದೇವರಕಾಲೊನಿ ಉದ್ಯಾನಗಳಲ್ಲಿ ಬೆಳಗಿನ ವೇಳೆ ಹೆಜ್ಜೆಹಾಕುತ್ತಾ ಸಾಗುವ ವಾಯುವಿಹಾರಿಗಳು ಕಾಣಿಸುತ್ತಿದ್ದರು. ಈಗ ಎಲ್ಲೆಡೆ ಚಳಿ ಆವರಿಸುತ್ತಿರುವುದರಿಂದ ಜನರು ಮನೆಯಿಂದ ಹೊರಗೆ ಬರಲು ಯೋಚನೆ ಮಾಡುತ್ತಿದ್ದಾರೆ.

ರಾಯಚೂರು: ಐಸಿಸಿ ಸಭೆಯತ್ತ ಅನ್ನದಾತರ ಚಿತ್ತ; 2ನೇ ಬೆಳೆಯ ಭವಿಷ್ಯ ನಿರ್ಧಾರರಾಯಚೂರು: ಐಸಿಸಿ ಸಭೆಯತ್ತ ಅನ್ನದಾತರ ಚಿತ್ತ; 2ನೇ ಬೆಳೆಯ ಭವಿಷ್ಯ ನಿರ್ಧಾರ

ನ. 3ನೇ ವಾರದ ಗರಿಷ್ಠ ತಾಪಮಾನ

ಹವಾಮಾನ ಇಲಾಖೆ ಅಂಕಿಅಂಶಗಳ ಪ್ರಕಾರ ಪ್ರಸ್ತುತ ನವೆಂಬರ್‌ ಮೂರನೇ ವಾರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರೆ, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್‌ ಇದೆ. ದಿನಕಳೆದಂತೆ ತಾಪಮಾನ ಕುಸಿತವಾಗುತ್ತಲೇ ಇದೆ. ಚಳಿ ಹೆಚ್ಚಾಗಿರುವುದರಿಂದ ಬೆಳಗಿನ ವೇಳೆ ಜನ ಸಂಚಾರ ಮತ್ತು ವಾಹನಗಳ ಸಂಚಾರ ಎಂದಿನಂತೆ ಕಾಣಿಸುತ್ತಿಲ್ಲ. ಸೂರ್ಯೋದಯವಾಗಿ ಬಿಸಿಲಿನ ದರ್ಶನವಾದ ಬಳಿಕವೇ ರಸ್ತೆಗಳಲ್ಲಿ ಸಂಚಾರ ಶುರುವಾಗುತ್ತದೆ. ಕಳೆದ ಮೂರು ದಿನಗಳಿಂದ ದಿನವಿಡೀ ಚುಮುಚುಮು ಚಳಿ ಅನುಭವ ಮುಂದುವರಿದಿದೆ. ಗರಿಷ್ಠ ತಾಪಮಾನ ಕೂಡ ಕಡಿಮೆ ಇರುವುದರಿಂದ ಜನರು ಮನೆಯಿಂದ ಆಚೆ ಕಾಲಿಡಲು ಕೂಡ ಹಿಂಜರಿಯುತ್ತಿದ್ದಾರೆ.

Winter in Raichr district: What are people ideas?

ಬೆಂಕಿ ಮೊರೆ ಹೋಗುತ್ತಿರುವ ಜನರು

ಮೈ ಕೊರೆಯುವ ಚಳಿಗೆ ಜನರು ಬೆಂಕಿ ಕಾಯಿಸುವುದು, ತಲೆತುಂಬ ಉಲನ್‌ ಟೋಪಿ ಧರಿಸುವುದು, ತಲೆಗೆ ಟವಲ್‌ ಸುತ್ತಿಕೊಳ್ಳುವುದು, ಸ್ವೆಟ್ಟರ್‌, ಜಾಕೆಟ್‌ ಧರಿಸುವುದು, ಮೈತುಂಬ ಶಾಲ್‌ ಹೊದಿಸಿಕೊಳ್ಳುವುದು ಸೇರಿದಂತೆ ಇತ್ಯಾದಿ ದೃಶ್ಯಗಳನ್ನು ಕಾಣಬಹುದಾಗಿದೆ. ಇನ್ನು ವಯೋವೃದ್ಧರು, ಮಕ್ಕಳು ಬೆಳಗಿನ ವೇಳೆ ಮನೆಗಳಿಂದ ಹೊರಬರುವುದೇ ಇಲ್ಲ. ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳು ಸಮವಸ್ತ್ರದ ಮೇಲೆ ಸ್ವೆಟ್ಟರ್‌ ಧರಿಸುತ್ತಿದ್ದಾರೆ. ಎಲ್ಲೆಡೆಯೂ ಚಳಿ ಆವರಿಸಿರುವುದರಿಂದ, ಶೀತ, ನೆಗಡಿಯಂತಹ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ರಾಯಚೂರು ಜಿಲ್ಲೆಯ ಹಮಾಲರು: ಬದುಕು ದುಸ್ತರಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ರಾಯಚೂರು ಜಿಲ್ಲೆಯ ಹಮಾಲರು: ಬದುಕು ದುಸ್ತರ

ಜಿಲ್ಲೆಯಲ್ಲಿ ದಾಖಲಾದ ಚಳಿಯ ಪ್ರಮಾಣ

2015ರಿಂದ 2022ರವರೆಗೂ ನವೆಂಬರ್‌ ತಿಂಗಳಲ್ಲಿ ದಾಖಲಾದ ತಾಪಮಾನದ ಕನಿಷ್ಠ ಮಟ್ಟದ ಪ್ರಮಾಣಗಳಿಗೆ ಹೋಲಿಸಿದರೆ, ಈ ವರ್ಷವೇ 14 ಡಿಗ್ರಿ ಸೆಲ್ಸಿಯಸ್‌ ಇದೆ. ಇದು ಏಳು ವರ್ಷಗಳ ಹಿಂದಿನ ದಾಖಲೆಗೆ ಮತ್ತೆ ಹಿಂತಿರುಗಿದಂತಿದೆ. 2014 ನವೆಂಬರ್‌ 21ರಂದು ಕನಿಷ್ಠ ತಾಪಮಾನ 13.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈ ವರ್ಷ ಕೂಡ ತಾಪಮಾನವು ಇನ್ನೂ ಕುಸಿತವಾಗುವ ಸಾಧ್ಯತೆ ಇದ್ದು, ಹೊಸ ದಾಖಲೆ ಆಗಬಹುದು ಎನ್ನುವ ಮಾಹಿತಿ ಹೊರಬಿದ್ದಿದೆ.

English summary
Heavy Cold weather in Raichur district, people are getting sick due to cold, know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X