ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು: ಮಂದಿರ, ಮಸೀದಿ ತೆರವು, ಬಿಗುವಿನ ವಾತಾವರಣ

By Manjunatha
|
Google Oneindia Kannada News

ರಾಯಚೂರು, ಫೆಬ್ರವರಿ 22: ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167) ಅಗಲೀಕರಣ ಕಾಮಗಾರಿಯಲ್ಲಿ ಅಡ್ಡಲಾಗಿದ್ದ ನಗರದ ರಾಮಮಂದಿರ ಹಾಗೂ ಅಂಬೇಡ್ಕರ್ ವೃತ್ತ ಪಕ್ಕದ ಮಸೀದಿ ಎರಡನ್ನೂ ಬುಧವಾರ ಮಧ್ಯರಾತ್ರಿ ನಗರಸಭೆ ಅಧಿಕಾರಿಗಳು ತೆರವು ಮಾಡಿದ್ದಾರೆ. ಗಲಭೆ ಆಗಬಾರದೆಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

ಮಂದಿರ ಹಾಗೂ ಮಸೀದಿಯ ಸುಮಾರು ಆರು ಅಡಿಗಳಷ್ಟು ಭಾಗವನ್ನು ಒಡೆದು ಹಾಕಲಾಗಿದೆ. ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸರು ರಾತ್ರಿಯಿಂದಲೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ರಿಸರ್ವ್‌ ವಾಹನ ಬೀಡು ಬಿಟ್ಟಿದೆ. ಈ ಹಿಂದೆ ಅನೇಕ ಸಲ ತೆರವು ಕಾರ್ಯಾಚರಣೆ ಮಾಡುವಾಗ ಆಯಾ ಧರ್ಮದ ಜನರು ಅಡ್ಡಿಪಡಿಸಿದ್ದರು. ಹಾಗಾಗಿ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಈ ಮುಂಚೆ ತಾವೇ ತೆರವು ಮಾಡಿಕೊಡುತ್ತೇವೆ ಎನ್ನುವ ವಾಗ್ದಾನವನ್ನು ಮಂದಿರ ಹಾಗೂ ಮಸೀದಿ ಮಂಡಳಿ ಕಡೆಯವರು ನೀಡಿದ್ದರು ಆದರೆ ಗಡುವು ಮೀರಿದ್ದರೂ ತೆರವು ಮಾಡಿಕೊಡದ ಕಾರಣ, ಈ ಬಾರಿ ಯಾವುದೇ ಮನ್ಸೂಚನೆಯನ್ನು ಅಧಿಕಾರಿಗಳು ನೀಡದೆ ಮಸೀದಿ ಹಾಗೂ ಮಂದಿರ ಕಟ್ಟಡಗಳ ಭಾಗವನ್ನು ಜೆಸಿಬಿ ಯಂತ್ರದಿಂದ ಒಡೆದು ಹಾಕಲಾಗಿದೆ. ಕಟ್ಟಡಗಳ ಅವಶೇಷ ಇನ್ನೂ ಎತ್ತಿ ಹಾಕಿಲ್ಲ.

Temple and masjid demolished in Raichur for road construction

ಮೊದಲು ರಾಮಮಂದಿರ ತೆರವುಗೊಳಿಸಿ, ಮೊದಲು ಮಸೀದಿ ತೆರವುಗೊಳಿಸಿ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಿಕೊಂಡು ಬರಲಾಗಿತ್ತು. ಇದೀಗ ಯಾವ ಅಡ್ಡಿ ಇಲ್ಲದೆ ಕಟ್ಟಡ ತೆರವುಗೊಳಿಸಲಾಗಿದೆ.

Temple and masjid demolished in Raichur for road construction

ಸರ್ಕಾರಿ ಐ.ಬಿ. ಯಿಂದ ಬಸವೇಶ್ವರ ವೃತ್ತದವರೆಗೂ 2 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಸಿಸಿ ರಸ್ತೆ ಮಾಡಲಾಗಿದೆ. ಇದೇ ಮಾರ್ಗದಲ್ಲಿರುವ ರಾಮಮಂದಿರ ಹಾಗೂ ಮಸೀದಿ ಇರುವ ಕಡೆ ಸಿಸಿ ರಸ್ತೆಗೆ ಹೊಂದಿಕೊಂಡು ಚರಂಡಿ ಹಾಗೂ ಪಾದರಸ್ತೆ ನಿರ್ಮಾಣ ಬಾಕಿ ಉಳಿದಿತ್ತು.

English summary
In Raichur a temple and a Masjid both demolished by government officers for road construction. Hindu and Muslim communities were first opposed to demolition. so Police were alert in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X