ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಯಚೂರು: ಮತದಾನ ಬಹಿಷ್ಕಾರ ಮಾಡಿ ತಹಶೀಲ್ದಾರ್‌ ಕಾರು ಅಡ್ಡಗಟ್ಟಿದ ಗ್ರಾಮಸ್ಥರು

By Manjunatha
|
Google Oneindia Kannada News

ರಾಯಚೂರು, ಮೇ 12: ರಾಯಚೂರಿನ ಲಿಂಗಸಗೂರು ತಾಲ್ಲೂಕಿನ ಕೃಷ್ಣಾ ನದಿ ನಡುಗಡ್ಡೆ ಪ್ರದೇಶದ ಕದಡದರಗಡ್ಡೆಯ ಜನ ಮತದಾನ ಬಹಿಷ್ಕಾರ ಮಾಡಿದ್ದಾರೆ. ಅವರ ಮನವೊಲಿಸಲು ಬಂದ ತಹಶೀಲ್ದಾರ್ ಅವರ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದ್ದಾರೆ.

ಮತದಾನ ಬಹಿಷ್ಕಾರ ವಿಷಯ ತಿಳಿದು ತಹಶೀಲ್ದಾರ್ ಅವರು ಗ್ರಾಮಕ್ಕೆ ಬಂದು ಮನವೊಲಿಸಲು ಮುಂದಾಗಿದ್ದಾರೆ ಹಾಗಾಗಿ ಮೂರು ಜನ ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ ಚಲಾಯಿಸಿದರು ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ತಹಶೀಲ್ದಾರ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

LIVE: ಹಸೆಮಣೆಗೆಗೂ ಮುನ್ನ ಮತಗಟ್ಟೆಗೆ, ಆದರ್ಶ ಮೆರೆದ ವಧುLIVE: ಹಸೆಮಣೆಗೆಗೂ ಮುನ್ನ ಮತಗಟ್ಟೆಗೆ, ಆದರ್ಶ ಮೆರೆದ ವಧು

ತೀವ್ರ ಪ್ರತಿಭಟನೆ ಮಾಡುತ್ತಿರುವ ಗ್ರಾಮಸ್ಥರು ಬೆಳಿಗ್ಗೆ 9 ರಿಂದ ಅವರಿಗೆ ಘೇರಾವ್ ಹಾಕಿದ್ದಾರೆ. ಮಧ್ಯಾಹ್ನ 12 ಗಂಟೆಯಾದರೂ ಅದೇ ಪರಿಸ್ಥಿತಿ ಮುಂದುವರಿದಿದೆ.

Raichurs Kadadadara Gadde village people boycott voting

ರಸ್ತೆಗೆ ಮುಳ್ಳಿನ ಬೇಲಿ ಹಾಕಿ, ಸಂಚಾರ ಸ್ಥಗಿತಗೊಳಿಸಿದ್ದಾರೆ. ಗ್ರಾಮಸ್ಥರ ನಿರ್ಧಾರದ ವಿರುದ್ಧ ಹೇಗೆ ಮತದಾನ ಮಾಡಿಸಿದ್ದೀರಿ? ನದಿಗೆ ಸೇತುವೆ ನಿರ್ಮಾಣದ ಬೇಡಿಕೆ ಬಗ್ಗೆ ಅನೇಕ ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಜನರು ವಾಗ್ವಾದ ಮಾಡುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ತಕರಾರು: ಮತದಾನ ಸ್ಥಗಿತಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ತಕರಾರು: ಮತದಾನ ಸ್ಥಗಿತ

English summary
Raichur district Lingasaguru Talluk's Kadadadara Gadde village people boycott voting. they stoped Tahashildhar's vehicle who came to village to persuade them for voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X