ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ರಾಯಚೂರಿನ ಗ್ರಾಮ ಲೆಕ್ಕಾಧಿಕಾರಿ

Subscribe to Oneindia Kannada

ರಾಯಚೂರು, ನವೆಂಬರ್ 19: ಹೊಲ ಹಂಚಿಕೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುವಾಗ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ರಾಮನಗರದಲ್ಲಿ ಎಸಿಬಿ ದಾಳಿ, ಇಬ್ಬರು ಬಲೆಗೆ

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಗ್ರಾಮ ಪಂಚಾಯಿತಿ ಗ್ರಾಮ ಲೆಕ್ಕಾಧಿಕಾರಿ ಮೆಹಬೂಬ್ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದ ಅಧಿಕಾರಿಯಾಗಿದ್ದಾರೆ.

Raichur: Village accountant caught in bribery

ಪರಿಶಿಷ್ಟ ವರ್ಗದ ಮಂಜುನಾಥ್ ಎಂಬವರಿಗೆ ಹೊಲ ಹಂಚಿಕೆ ಮಾಡಲು 30 ಸಾವಿರ ರೂ. ಲಂಚಕ್ಕೆ ಗ್ರಾಮ ಲೆಕ್ಕಾಧಿಕಾರಿ ಮೆಹಬೂಬ್ ಬೇಡಿಕೆ ಇಟ್ಟಿದ್ದರು. ಇದರಂತೆ ಮೊದಲ ಕಂತು 10 ಸಾವಿರ ರೂ. ಪಡೆದುಕೊಂಡಿದ್ದರು.

ಎರಡನೇ ಬಾರಿ 20 ಸಾವಿರ ರೂ. ಪಡೆಯುವಾಗ ಮಾನ್ವಿಯಲ್ಲಿ ದಾಳಿ‌ ನಡೆಸಿದ ಎಸಿಬಿ ಅಧಿಕಾರಿಗಳು
ಮೆಹಬೂಬ್ ರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಮೆಹಬೂಬ್ ವಿರುದ್ಧ ಪ್ರತಿಬಂಧಕ ಕಾಯ್ದೆ-1988ರ ಅಡಿಯಲ್ಲಿ ರಾಯಚೂರು ಜಿಲ್ಲಾ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತೆಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A village accountant has been trapped by ACB when receiving a bribe. Malladagudda village accountant Mehboob in Manvi Taluk, Raichur District, was caught when he received a bribe.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ