ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲನಾಡು ರಾಯಚೂರಿನಲ್ಲಿ ಕಮಲ ಅರಳುವುದೇ?

|
Google Oneindia Kannada News

Recommended Video

Lok Sabha Elections 2019: ಈ ಬಾರಿ ರಾಯಚೂರಿನಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಾ?

ರಾಯಚೂರು, ಏಪ್ರಿಲ್ 18 : ಬಿಸಿಲ ನಾಡು ರಾಯಚೂರು ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. 2009ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಮತ್ತೆ ಕ್ಷೇತ್ರ 'ಕೈ'ವಶವಾಗಿದೆ. ಈಗ ಮತ್ತೆ ಚುನಾವಣೆ ಎದುರಾಗಿದೆ.

ಏಪ್ರಿಲ್ 23ರಂದು ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಬಿ.ವಿ.ನಾಯಕ ಕಣದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ರಾಜಾ ಅಮರೇಶ ನಾಯಕ ಬಿಜೆಪಿ ಅಭ್ಯರ್ಥಿ.

ರಾಯಚೂರು ಕ್ಷೇತ್ರದ ಚುನಾವಣಾ ಪುಟ

ರಾಯಚೂರು ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ನಾಯಕ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. 16 ಚುನಾವಣೆಗಳಲ್ಲಿ 1967ರಲ್ಲಿ ಪಕ್ಷೇತರ, 1996ರಲ್ಲಿ ಜೆಡಿಎಸ್, 2009ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯ

ಕಾಂಗ್ರೆಸ್ ಕ್ಷೇತ್ರವನ್ನು ಸತತವಾಗಿ ಗೆಲ್ಲುತ್ತಾ ಬಂದಿದೆ. ಹಾಲಿ ಸಂಸದ ಬಿ.ವಿ.ನಾಯಕ ಅವರ ತಂದೆ ಎ.ವೆಂಕಟೇಶ ನಾಯಕ ನಾಲ್ಕು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ರಾಯಚೂರನ್ನು ಬಿಟ್ಟುಕೊಡುವಂತೆ ಜೆಡಿಎಸ್ ಬೇಡಿಕೆ ಇಟ್ಟಿತ್ತು. ಆದರೆ, ಕಾಂಗ್ರೆಸ್ ಕ್ಷೇತ್ರವನ್ನು ಉಳಿಸಿಕೊಂಡು ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟಿದೆ....

ವಿಧಾನಸಭೆ ಬಲಾಬಲ

ವಿಧಾನಸಭೆ ಬಲಾಬಲ

ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಯಚೂರು ಜಿಲ್ಲೆಯ 5 ಮತ್ತು ಯಾದಗಿರಿ ಜಿಲ್ಲೆಯ 3 ಕ್ಷೇತ್ರಗಳು ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ.

* ಬಿಜೆಪಿ - ರಾಯಚೂರು ನಗರ, ದೇವದುರ್ಗ, ಸುರಪುರ, ಯಾದಗಿರಿ
* ಕಾಂಗ್ರೆಸ್ - ರಾಯಚೂರು ಗ್ರಾಮೀಣ, ಲಿಂಗಸುಗೂರು, ಶಹಾಪುರ
* ಜೆಡಿಎಸ್ - ಮಾನ್ವಿ

ಬಿ.ವಿ.ನಾಯಕ ಪ್ಲಸ್ ಪಾಯಿಂಟ್

ಬಿ.ವಿ.ನಾಯಕ ಪ್ಲಸ್ ಪಾಯಿಂಟ್

ಹಾಲಿ ಸಂಸದ ಬಿ.ವಿ.ನಾಯಕ ಅವರು ರಾಯಚೂರಿಗೆ ಐಐಐಟಿ ತಂದಿದ್ದೇನೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಸಂಸದರ ಅನುದಾನವನ್ನು ಹೆಚ್ಚು ತಂದಿದ್ದೇನೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತರಲಾಗಿದೆ ಎಂಬ ವಿಚಾರ ಮುಂದಿಟ್ಟುಕೊಂಡು ಪ್ರಚಾರ ನಡೆಸಲಾಗುತ್ತಿದೆ.

ಕಾಂಗ್ರೆಸ್‌ನಿಂದ ಬಂದವರಿಗೆ ಟಿಕೆಟ್

ಕಾಂಗ್ರೆಸ್‌ನಿಂದ ಬಂದವರಿಗೆ ಟಿಕೆಟ್

ಮಾಜಿ ಶಾಸಕ, ಕಾಂಗ್ರೆಸ್ ನಾಯಕರಾಗಿದ್ದ ರಾಜಾ ಅಮರೇಶ ನಾಯಕ ಅವರು ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಪಕ್ಷದ ಅವರಿಗೆ ಲೋಕಸಭಾ ಚುನಾವಣೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನಲ್ಲಿನ ಗುಂಪುಗಾರಿಗೆ ಲಾಭ ಪಡೆದು ಗೆದ್ದು ಬರಲು ಅವರು ಪ್ರಯತ್ನ ನಡೆಸಿದ್ದಾರೆ.

2014ರ ಫಲಿತಾಂಶ

2014ರ ಫಲಿತಾಂಶ

2014ರ ಚುನಾವಣೆಯಲ್ಲಿ ಬಿ.ವಿ.ನಾಯಕ ಅವರು 443659 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವನಗೌಡ ನಾಯಕ ಅವರು 442160 ಮತ ಪಡೆದಿದ್ದರು. ಜೆಡಿಎಸ್‌ನ ಡಿ.ಬಿ.ನಾಯಕ ಅವರು 21,706 ಮತಗಳನ್ನು ಪಡೆದಿದ್ದರು.

English summary
Raichur lok sabha seat political picture. Sitting MP B.V.Nayak Congress-JD(S) candidate and Raja Amresh Nayak BJP candidate. Election will be held on April 23, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X