• search
  • Live TV
ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಯಚೂರು ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆ ವಿತರಣೆ: ಆಕ್ರೋಶ

|

ಬೆಂಗಳೂರು, ಅಕ್ಟೋಬರ್ 12: ಮಕ್ಕಳ ಅಪೌಷ್ಠಿಕತೆಯನ್ನು ದೂರಮಾಡಿ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು.

ಅಂಗನವಾಡಿ ಮಕ್ಕಳಿಗೂ ಸಿಗುತ್ತೆ ಸಮವಸ್ತ್ರ, ಶೂ, ಕೊಡೆ!

ಆದರೆ ಆ ಪುಟ್ಟ ಮಕ್ಕಳಿಗೆ ಕೊಳೆತ ಮೊಟ್ಟಯನ್ನು ಕೊಟ್ಟಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಯಚೂರು ಸಿರಿವಾರ ತಾಲೂಕಿನ ಮಲ್ಲಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪೌಷ್ಠಿಕತೆ ನಿವಾರಿಸಲು ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಇತ್ತು. ಪೌಷ್ಠಿಕ ಆಹಾರದ ಬದಲು ಕೊಳೆತ, ಕಳಪೆ ಮೊಟ್ಟೆ ವಿತರಣೆ ಮಾಡಲಾಗಿದೆ. ಶುಕ್ರವಾರ ಊಟದ ಜತೆಗೆ ಮಕ್ಕಳಿಗೆ ಮೊಟ್ಟಯನ್ನು ವಿತರಿಸಬೇಕಿತ್ತು.

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

ಮೊಟ್ಟೆಯನ್ನು ನೋಡಿದಾಗ ಅದು ಕೊಳೆತ ಸ್ಥಿತಿಯಲ್ಲಿತ್ತು, ದುರ್ನಾತ ಮತ್ತು ಹುಳುಗಳಿಂದ ತುಂಬಿತ್ತು, ಅಂಗನವಾಡಿ ಸಹಾಯಕರ ವಿರುದ್ಧ ಪೋಕರು ಆಕ್ರೋಶ ಹೊರಹಾಕಿದ್ದಾರೆ. ಇಂತಹ ಪ್ರಕರಣ ಬಂದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ ಎಂದು ಆರೋಪಿಸಲಾಗಿದೆ. ಹಳ್ಳಿಗಳಲ್ಲಿ ಸಾಕಷ್ಟು ಮಂದಿ ಬಡ ಮಕ್ಕಳಿರುತ್ತಾರೆ ಅಂತಹ ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ನರಳುವಂತಾಗಬಾರದು ಎಂಬ ಉದ್ದೇಶದಿಂದ ಮೊಟ್ಟೆಯನ್ನು ವಿತರಿಸಲಾಗುತ್ತಿದೆ.

English summary
It is alleged that putrid eggs were distributed to children at Anganawadi of Mallata village in Sirivara taluk of Raichur district on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X