ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಬಿಡಿ, ಕಲ್ಯಾಣ ಕರ್ನಾಟಕದಲ್ಲೇ ರಾಯಚೂರಿಗೆ ತಾರತಮ್ಯ!

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಸೆಪ್ಟೆಂಬರ್‌, 20: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ರಾಜ್ಯ ಸರ್ಕಾರವು ಸಾವಿರಾರು ಕೋಟಿ ಹಣವನ್ನು ನೀಡುತ್ತಿದೆ. ಈ ಅನುದಾನದಿಂದಾಗಿ ಕಲಬುರಗಿ ಜಿಲ್ಲೆಯು ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಆದರೆ ರಾಯಚೂರು ಜಿಲ್ಲೆ ಮಾತ್ರ ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಲೇ ಇದೆ.

ಕಲಬುರಗಿಗೆ ಹೋಲಿಸಿದರೆ ಹೇರಳವಾಗಿ ನೈಸರ್ಗಿಕ ಸಂಪನ್ಮೂಲ, ವಿದ್ಯುತ್‌, ಚಿನ್ನ ಉತ್ಪಾದಿಸುವ ಹಾಗೂ ಭತ್ತ, ಹತ್ತಿ ಬೆಳೆಯುವ ನಾಡು ಅಂತಲೇ ಪ್ರಸಿದ್ಧಿ ಆಗಿದೆ. ಮತ್ತೊಂದೆಡೆ ನೋಡಿದರೆ ಎರಡು ನದಿಗಳ ಬೀಡು ಅಂತಲೂ ಕರೆಯುತ್ತಾರೆ. ಹೀಗೆ ರಾಯಚೂರು ಜಿಲ್ಲೆ ಅನೇಕ ಖ್ಯಾತಿಗಳನ್ನು ಹೊಂದಿದೆ. ಆದರೆ ಮೂಲಸೌಕರ್ಯಗಳ ವಿಷಯಕ್ಕೆ ಬಂದಾಗ ಕಲಬುರಗಿಗಿಂತ ಎರಡು ದಶಕಗಳಷ್ಟು ರಾಯಚೂರು ಹಿಂದುಳಿದಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.

ಕೋಲಾರ, ಹಾಸನ, ರಾಯಚೂರಿನಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಕೋಲಾರ, ಹಾಸನ, ರಾಯಚೂರಿನಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ

ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಸುಧಾರಣೆಗೆ ಅಗತ್ಯ ಅನುದಾನ ಒದಗಿಸುತ್ತಿರುವ ಕೆಕೆಆರ್‌ಡಿಬಿ ರಾಯಚೂರು ಜಿಲ್ಲೆಗೆ ಕಾಮಧೇನು ಆಗಿದೆ. ಆದರೆ ಅನುದಾನವನ್ನು ಸಮರ್ಪಕವಾಗಿ ಬಳಸಿ ಸಮಗ್ರ ಅಭಿವೃದ್ಧಿಯ ಹಾದಿಯಲ್ಲಿ ಜಿಲ್ಲೆಯನ್ನು ಕೊಂಡೊಯ್ಯಬೇಕಿತ್ತು. ಆಡಳಿತ ಯಂತ್ರ, ರಾಜಕೀಯ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಕೆಕೆಆರ್‌ಡಿಬಿ ಕೂಡ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಇನ್ನುಳಿದ ಸರ್ಕಾರಿ ಯೋಜನೆಗಳ ರೀತಿಯಲ್ಲೇ ಕೆಕೆಆರ್‌ಡಿಬಿ ಕಾಮಗಾರಿಗಳು ಕೂಡ ಕುಂಟುತ್ತಾ ಸಾಗಿವೆ.

 ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿಗಳು

ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿಗಳು

ಶಾಲಾ, ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದರೂ ಕೂಡ, ಶಿಕ್ಷಕರಿಗೆ ವೇತನ ನೀಡುವುದಕ್ಕೆ ಕೆಕೆಆರ್‌ಡಿಬಿ ಮುಂದಾಗಿಲ್ಲ. ಹೀಗಾಗಿ ಅನೇಕ ಕಡೆಗಳಲ್ಲಿ ಹೊಸ ಕಟ್ಟಡಗಳು ವ್ಯರ್ಥ ಆಗುತ್ತಿವೆ. ಜಿಲ್ಲೆಯ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸುವ ರಾಯಚೂರು ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಅನುದಾನಕ್ಕಾಗಿ ಕೆಕೆಆರ್‌ಡಿಬಿ ಎದುರು ಅಂಗಲಾಚುತ್ತಾ ಬಂದಿದೆ. ಆದರೂ ಇದುವರೆಗೂ ಯಾವುದೇ ಸ್ಪಂದನೆಗಳು ಸಿಕ್ಕಿಲ್ಲ.
ಜಿಲ್ಲೆಯ ಕೆಲವು ಶಾಸಕರು ಅನುದಾನ ಮಂಜೂರು ಮಾಡಿಸುವ ವಿಷಯದಲ್ಲಿ ಮಧ್ಯವರ್ತಿಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರು ಅಧಿಕಾರಿಗಳ ಜೊತೆಗೆ ಮೊದಲೇ ಪರ್ಸೆಂಟೇಜ್‌ ಲೆಕ್ಕಾಚಾರಕ್ಕೆ ಇಳಿಯುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ರಾಯಚೂರಿನಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಎಪಿಎಂಸಿ ಜಾಗ ಬಳಕೆ, ಭುಗಿಲೆದ್ದ ಆಕ್ರೋರಾಯಚೂರಿನಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಎಪಿಎಂಸಿ ಜಾಗ ಬಳಕೆ, ಭುಗಿಲೆದ್ದ ಆಕ್ರೋ

 ಜಿಲ್ಲೆಗೆ 250 ಕೋಟಿ ರೂ. ಅನುದಾನ ಹಂಚಿಕೆ

ಜಿಲ್ಲೆಗೆ 250 ಕೋಟಿ ರೂ. ಅನುದಾನ ಹಂಚಿಕೆ

ಶೇಕಡಾ 40ರಷ್ಟು ಬಿಟ್ಟು ಕೊಡುವುದಕ್ಕೆ ತಯಾರಿದ್ದರೆ ಮಾತ್ರ ಅನುದಾನ ಮಂಜೂರು ಮಾಡಿಸುತ್ತೇವೆ ಎಂದು ಬೇಡಿಕೆ ಇಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. 2022-23ನೇ ಸಾಲಿನಲ್ಲಿ 250 ಕೋಟಿ ರೂಪಾಯಿ ಅನುದಾನ ರಾಯಚೂರು ಜಿಲ್ಲೆಗೆ ಹಂಚಿಕೆ ಆಗಿದೆ. ಅದರಲ್ಲಿ 219 ಕಾಮಗಾರಿಗಳಿಗೆ ಕ್ರಿಯಾಯೋಜನೆ ಮಾಡಿದ್ದು, ಇದುವರೆಗೂ ಕೇವಲ 68 ಕಾಮಗಾರಿಗಳು ಆರಂಭ ಆಗಿವೆ. ದೇವದುರ್ಗ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಉಂಟಾಗಿದೆ. ಆದ್ದರಿಂದ ತಾಲೂಕಿನ ಕೊತ್ತ ದೊಡ್ಡಿಯಲ್ಲಿ ಕೆಕೆಆರ್‌ಡಿಬಿ 1.80 ಕೋಟಿ ರೂಪಾಯಿ ಅನುದಾನ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವು ಉದ್ಘಾಟನೆ ಆಗಿಲ್ಲ.

 ಉರ್ದು ಶಾಲಾ ಕಟ್ಟಡದಲ್ಲಿ ಪಾಠ

ಉರ್ದು ಶಾಲಾ ಕಟ್ಟಡದಲ್ಲಿ ಪಾಠ

ಶಾಲೆಯ ನೂತನ ಕಟ್ಟಡ ಉದ್ಘಾಟನೆ ಆಗಿಲ್ಲ. ಪರಿಣಾಮ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಗ್ರಾಮದ ಉರ್ದು ಕಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಮತ್ತು 8ನೇ ತರಗತಿ ಮಕ್ಕಳು ಪ್ರೌಢಶಾಲಾ ಶಾಲಾ ಕಟ್ಟಡದಲ್ಲಿ ವಿದ್ಯಾಭ್ಯಾಸ ನಡೆಸುವ ಸ್ಥಿತಿ ನಿರ್ಮಾಣ ಆಗಿದೆ. ಎರಡು ವರ್ಷದ ಹಿಂದೆ ಗ್ರಾಮಕ್ಕೆ ಮಂಜೂರಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಸಹ ಉರ್ದು ಕಟ್ಟಡದಲ್ಲಿಯೇ ನಡೆಯುತ್ತಿದೆ. ಗ್ರಾಮದ ಉರ್ದು ಶಾಲೆಯಲ್ಲಿ ಕೇವಲ 5 ಕೊಠಡಿಗಳಲ್ಲಿ ಕನ್ನಡ ಮಾಧ್ಯಮದ 1ರಿಂದ 8ನೇ ತರಗತಿವರೆಗಿನ 592 ಮಕ್ಕಳು, ಉರ್ದು ಶಾಲೆಯ 60 ಮಕ್ಕಳು ಮತ್ತು ಇಂಗ್ಲಿಷ್ ಮಾಧ್ಯಮದ ಎಲ್‌ಕೆಜಿ , 50 ಜನ ಯುಕೆಜಿ ಮಕ್ಕಳು ಸೇರಿದಂತೆ ಒಟ್ಟು 702 ಮಕ್ಕಳು ಪ್ರಸಕ್ತ ವರ್ಷದಲ್ಲಿ ದಾಖಲೆ ಪಡೆದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯ ಮಂಡಳಿಯ ಅನುದಾನದಲ್ಲಿ ಪ್ರತಿ ವರ್ಷ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಆದರೆ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದರೂ ಉದ್ಘಾಟನೆ ಅಗದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಪಟ್ಟಣದ ಬಾಷುಮಿಯಾ ಸಾಹುಕಾರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2019-20ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆರು ತರಗತಿ ಕೊಠಡಿಗಳ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದೇ ನಿರುಪಯುಕ್ತ ಆಗಿಯೇ ಉಳಿದಿದೆ.

 ಸಾರ್ವಜನಿಕರ ಬಳಕೆಗೆ ಲಭ್ಯವಾಗದ ಕಟ್ಟಡ

ಸಾರ್ವಜನಿಕರ ಬಳಕೆಗೆ ಲಭ್ಯವಾಗದ ಕಟ್ಟಡ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 1ಕೋಟಿ ರೂಪಾಯಿ ಅನುದಾನದಲ್ಲಿ ಟೌನ್‌ಹಾಲ್ ಕಟ್ಟಡ ನಿರ್ಮಾಣ ಆಗಿದೆ. ಇದನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದ್ದು, ವರ್ಷ ಸಮೀಪಿಸಿದರೂ ಸಾರ್ವಜನಿಕರ ಬಳಕೆಗೆ ಇನ್ನೂ ಲಭ್ಯವಾಗಿಲ್ಲ. ಪ್ರದೇಶಾಭಿವೃದ್ಧಿ ಮಂಡಳಿಯ 1 ಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಾಣ ಆಗಬೇಕಿದ್ದ ಸರ್ಕಿಟ್ ಹೌಸ್ ಕಾಮಗಾರಿ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಸಿರವಾರ ಪಟ್ಟಣಕ್ಕೆ ಅಗತ್ಯವಿರುವ ಪದವಿ ಕಾಲೇಜಿಗೆ ಮಂಜೂರಾಗಿರುವ ನೂತನ ಕಟ್ಟಡ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಟ್ಟಡದ ಗುಣಮಟ್ಟ ಸಂಪೂರ್ಣ ಮರೀಚಿಕೆ ಆಗಿದೆ. 2020ರಲ್ಲಿ ಕೆಆರ್‌ಐಡಿಎಲ್ ಸಂಸ್ಥೆಯಿಂದ 2 ಕೋಟಿ ರೂಪಾಯಿ ವೆಚ್ಚದ ಕಾಲೇಜು ಕಟ್ಟಡ ಪ್ರಾರಂಭಿಸಿದ್ದರು. ಇದು ಮೂರು ವರ್ಷ ಕಳೆದರೂ ಪೂರ್ಣ ಆಗದಿರುವುದು ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಪಟ್ಟಣದಿಂದ ಎರಡು ಕಿಲೋ ಮೀಟರ್‌ ದೂರದಲ್ಲಿ ಸರ್ಕಾರಿ ಮರಂ ಕೊರೆಯಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಸಮರ್ಪಕವಾಗಿ ಬುನಾದಿ ಹಾಕದೇ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡದ ಸುತ್ತಲೂ ಗುಡ್ಡವಿದ್ದು, ಮುಂಭಾಗದಲ್ಲಿ ದೊಡ್ಡ ದೊಡ್ಡ ತಗ್ಗುಗಳಿವೆ. ಮಳೆ ಬಂದರೆ ಸಾಕು ಇಲ್ಲಿ ಸಂಪೂರ್ಣವಾಗಿ ನೀರು ನಿಂತುಬಿಡುತ್ತದೆ. 2013ರಿಂದ 2022ರವರೆಗೂ ಕೆಕೆಆರ್‌ಡಿಬಿಯಿಂದ ಕಲಬುರಗಿ ಜಿಲ್ಲೆಯ ಏಳು ತಾಲ್ಲೂಕುಗಳಿಗೆ 3,253 ರೂಪಾಯಿ ಅನುದಾನ ಹಂಚಿಕೆ ಆಗಿದೆ. ಇದೇ ಅವಧಿಯಲ್ಲಿ ರಾಯಚೂರು ಜಿಲ್ಲೆಯ ಎಲ್ಲ ಐದು ತಾಲೂಕುಗಳಿಗೆ 1,480 ಕೋಟಿ ಅನುದಾನ ಹಂಚಿಕೆ ಆಗಿದೆ.

English summary
Kalaburagi district is development, only Raichur district is lagging behind development. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X