ರಾಯಚೂರಿನ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೂರೆಂಟು ಸಮಸ್ಯೆ!
ರಾಯಚೂರು ಡಿಸೆಂಬರ್ 2: ಕವಿತಾಳ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೀರು, ಆಟದ ಮೈದಾನ, ಹಾಸಿಗೆ, ಹೊದಿಕೆ ಕೊರತೆ ಸೇರಿ ವಿವಿಧ ಸಮಸ್ಯೆಗಳಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.
2019-20 ನೇ ಸಾಲಿನಲ್ಲಿ 14 ಕೋಟಿ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ಮತ್ತು ವಸತಿ ನಿಲಯ ನಿರ್ಮಿಸಲಾಗಿದೆ. ತರಗತಿ ಕೊಠಡಿಗಳಲ್ಲಿ ಕುಳಿತುಕೊಳ್ಳಲು ಮಕ್ಕಳಿಗೆ ಆಸನದ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳು ನೆಲದ ಮೇಲೆ ಕುಳಿತು ಅಭ್ಯಾಸ ಮಾಡುತ್ತಾರೆ ಅದೇ ರೀತಿ ವಸತಿ ನಿಲಯದಲ್ಲಿ ಮಂಚಗಳಿಲ್ಲದೆ ನೆಲದ ಮೇಲೆಯೆ ಮಲಗಬೇಕಾದ ಪರಿಸ್ಥಿತಿ ಇದೆ.

ಎರಡು ಕೊಳವೆಭಾವಿಗಳಿದ್ದರೂ ಅಂತರ್ಜಲ ಕುಸಿದ ಪರಿಣಾಮ ನೀರಿನ ಕೊರತೆ ಉಂಟಾಗಿದೆ, ಅಂತರ್ಜಲ ಕುಸಿತದಿಂದ ಕೊಳವೆಭಾವಿಗಳನ್ನು ಸತತ ಬಳಸುವುದರಿಂದ ವರ್ಷಕ್ಕೆ 80 ಸಾವಿರ ವಿದ್ಯತ್ ಬಿಲ್ ಬಂದಿದೆ ಆದರೂ ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ ಎನ್ನಲಾಗಿದೆ. ಪಟ್ಟಣ ಪಂಚಾಯಿತಿ ವತಿಯಿಂದ ಅಳವಡಿಸಿದ ನಲ್ಲಿಯಲ್ಲಿ ಕೆರೆ ನೀರು ಸಮಪರ್ಕವಾಗಿ ಪೂರೈಕೆಯಗದ ಕಾರಣ ನಿತ್ಯ ನೀರಿನ ಸಮಸ್ಯೆ ಕಾಡುತ್ತಿದೆ ಮಕ್ಕಳಿಗೆ ಸ್ನಾನ ಮಾಡಲು ಮತ್ತು ಶೌಚಾಲಯ ಬಳಕೆಗೆ ತೊಂದರೆಯಾಗಿದೆ ಹೀಗಾಗಿ ತುರ್ತಾಗಿ ಒಂದು ಹೊಸ ಕೊಳವೆಬಾವಿ ಕೊರೆಯಸಬೇಕು ಎಂದು ಮುಖ್ಯ ಶಿಕ್ಷಕರಾದ ಅಂದಪ್ಪ ಹೇಳಿದರು.
ಕಳೆದ ಒಂದು ವರ್ಷದಿಂದ ಮಕ್ಕಳಿಗೆ ಹಾಸಿಗೆ, ದಿಂಬು, ಹೊದಿಕೆ, ಬೆಡ್ ಶೀಟ್ ವಿತರಣೆ ಮಾಡಸ್ಟ್, ಬ್ರಶ್, ಕೊಬ್ಬರಿ ಎಣ್ಣೆ, ಸಾಬೂನು ಮತ್ತು ಪೌಡರ್ ಸೇರಿದಂತೆ ಅಗತ್ಯ ವಸ್ತುಗಳ ಶುಚಿ ಸಂಭ್ರಮ ಕಿಟ್ ಸಹಿತ ಮಕ್ಕಳಿಗೆ ವಿತರಣೆ ಮಾಡಿಲ್ಲ ಈಚೆಗೆ ಗಾದೆಗಳು ಪೂರೈಕೆಯಾಗಿವೆ ಆದರೆ ಅದರ ಮೇಲೆ ಹಾಸಿಕೊಳ್ಳಲು ಬೆಡ್ ಶಿಟ್ ಇಲ್ಲದ ಕಾರಣ ಗಲೀಜಾಗುತ್ತವೆ ಎಂದು ಗಾದೆಗಳನ್ನು ವಿತರಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಕಾಂಪೌಂಡ್ ಗೋಡೆ ಕಿರಿದಾಗಿದ್ದು ಮಕ್ಕಳು ಆಗಾಗ ಜಿಗಿದು ಹೊರಗೆ ಹೋಗುತ್ತಾರೆ ಅದೇ ರೀತಿ ಮೇಳಿನ ಮಹಡಿಯ ತಡೆಗೋಡೆ ಕಿರಿದಾಗಿದ ಪರಿಣಾಮ ಮಕ್ಕಳು ಅಪಾಯದಲ್ಲಿ ಓಡಾಡುವಂತಾಗಿದೆ ಸ್ವಲ್ಪ ಆಯತಪ್ಪಿದರೂ ಕೆಳಗೆ ಭೀಳು ಭಯ ಮಕ್ಕಳನ್ನು ಕಾಡುತ್ತಿದ್ದು ಸುರಕ್ಷತೆ ಭಯ ಕಾಡುತ್ತಿದೆ.
ತರಗತಿಗಳಲ್ಲಿ ಕುಳಿತು ಕೊಳ್ಳಲು ಬೆಂಚ್ ಗಳು, ವಸತಿ ನಿಲಯದಲ್ಲಿ ಮಂಚಗಳು ಮತ್ತು ಬಟ್ಟೆ ಮತ್ತಿತರ ಸಾಮಾನು ಇಟ್ಟುಕೊಳ್ಳಲು ಕಬೋರ್ಡ್ ವಿತರಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಾರೆ. 13 ಶಿಕ್ಷಕರ ಹುದ್ದೆಗಳ ಮಂಜೂರಾತಿ ಇದೆ ೯ ಜನ ಕಾಯಂ ಶೀಕ್ಷಕರಿದ್ದು ನಾಲ್ವರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಸಮಾಜ ವಿಜ್ಞಾನ ವಿಷಯದ ಶಿಕ್ಷಕರ ಅಗತ್ಯವಿದೆ ಎಂದು ಮಕ್ಕಳು ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಬೆಂಚ್, ಟ್ರಂಕ್, ಮತ್ತು ಮಂಚ ವಿತರಿಸಬೇಕು, ಶುಚಿ ಸಂಭ್ರಮ ಕಿಟ್ ವಿತರಿಸಬೇಕು, ಎಂದು ಪಾಲಕರು ಆಗ್ರಹಿಸಿದರು.
ಕುಡಿಯುವ ನೀರಿನ ಶುದ್ಧೀಕರಣ ಘಟಕದ ಇದೆ ಹೀಗಾಗಿ ಮಕ್ಕಳಿಗೆ ಶುದ್ದ ನೀರು ಲಭ್ಯವಿದೆ ಆದರೆ ಕೊಳವೆಬಾವಿಯಲ್ಲಿ ನೀರಿನ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ ತಕ್ಷಣ ನೀರಿನ ವ್ಯವಸ್ಥೆಗೆ ಹೊಸದಾಗಿ ಒಂದು ಕೊಳವೆಬಾವಿ ಕೊರೆಯಿಸುವ ಅಗತ್ಯವಿದೆ , ಉಳಿದಂತೆ ಮಕ್ಕಳಿಗೆ ಶುಚಿ ಕಿಟ್, ಬೆಂಚು, ಮಂಚ ಮತ್ತು ಸೌಲಭ್ಯಗಳ ಕೊರತೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಮುಖ್ಯ ಗುರು ಅಂದಪ್ಪ ತಿಳಿಸಿದರು.












Click it and Unblock the Notifications