ರಾಯಚೂರು: ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರುಗಳು ಯಾರ್‍ಯಾರು?

ರಾಯಚೂರು, ಜೂನ್.06: ರಾಜ್ಯದಲ್ಲಿ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರ ರಚನೆಗೆ ಸಿದ್ಧತೆ ನಡೆಯುತ್ತಿರುವಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಜಿಲ್ಲಾ ಹಾಗೂ ಮೀಸಲು ಕೋಟಾದಡಿ ರಾಯಚೂರು ಜಿಲ್ಲೆಯ ಶಾಸಕರು ಲಾಭಿ ನಡೆಸಿದ್ದಾರೆ.

ಜೆಡಿಎಸ್​ಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆಯಿದೆ. ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ಬಳಿಕ ಎಲ್ಲರ ದೃಷ್ಟಿ ಸರ್ಕಾರ ರಚನೆ ಕಡೆಗೆ ನೆಟ್ಟಿತ್ತು. ಅತಿ ಹೆಚ್ಚು ಸ್ಥಾನಗಳನ್ನ ಗೆದ್ದಿದ್ದ ಬಿಜೆಪಿಯು ಸರ್ಕಾರ ರಚಿಸಿದ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್​.ಯಡಿಯೂರಪ್ಪ ರಾಜೀನಾಮೆ ಕೂಡ ನೀಡಿದ್ದಾರೆ.

ಇದೀಗ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರ ರಚನೆಗೆ ಈಗಾಗಲೇ ಸಿದ್ಧತೆ ಮುಗಿದಿದೆ. ಹೀಗಾಗಿ ರಾಯಚೂರು ಜಿಲ್ಲೆಯ ಶಾಸಕರು ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

MLAs from Raichur have benefited from reservation quota for ministerial posts

ನೂತನ ಸರ್ಕಾರದ ಮಂತ್ರಿ ಮಂಡಲಕ್ಕೆ ರಾಯಚೂರು ಜಿಲ್ಲೆಯಿಂದ ಸಿಂಧನೂರು ಶಾಸಕ ವೆಂಕಟರಾವ್​ ನಾಡಗೌಡ ಸೇರುವ ಸಾಧ್ಯತೆಯಿದೆ. ಜೆಡಿಎಸ್​ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವೆಂಕಟರಾವ್​ ನಾಡಗೌಡ, ಹೆಚ್​​.ಡಿ.ಕುಮಾರಸ್ವಾಮಿಗೆ ಆಪ್ತರು. ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್​ ಸಂಘಟನೆಯಲ್ಲಿ ತೊಡಗಿಸಿಕೊಂಡವರು.

ಹೀಗಾಗಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಸಿಂಧನೂರಿನ ಜೆಡಿಎಸ್​ ಶಾಸಕ ವೆಂಕಟರಾವ್​​ ನಾಡಗೌಡಗೆ ಮಂತ್ರಿಗಿರಿ ಒಲಿಯುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಜೆಡಿಎಸ್​​ ಮುಖಂಡರು ಪ್ರಯತ್ನ ನಡೆಸಿದ್ದಾರೆ.

MLAs from Raichur have benefited from reservation quota for ministerial posts

ಇನ್ನು ಹ್ಯಾಟ್ರಿಕ್​ ಗೆಲುವು ಸಾಧಿಸಿರುವ ಮಸ್ಕಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ಪ್ರತಾಪಗೌಡ ಪಾಟೀಲ್​ ಕೂಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಮಸ್ಕಿಯಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಬಿಜೆಪಿ ಯತ್ನಿಸಿದ್ದ ಆಪರೇಷನ್​ ಕಮಲದಲ್ಲಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್​ ಹೆಸರು ಕೇಳಿ ಬಂದಿತ್ತು.

ಕೊನೆಗೆ ಕಾಂಗ್ರೆಸ್​ ಜೊತೆ ಸೇರಿಕೊಂಡಿದ್ದರು. ಜಿಲ್ಲಾ ಪ್ರಾಧಿನಿತ್ಯ ಹಾಗೂ ಎಸ್​ಟಿ ಕೋಟಾದಡಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೇ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಗೆ ಸಚಿವ ಸ್ಥಾನ ಸಿಕ್ಕಿಲ್ಲ. ಬೇರೆ ಬೇರೆ ಜಿಲ್ಲೆಗಳ ಸಚಿವರೇ ಉಸ್ತುವಾರಿಗಳಾಗಿದ್ದರು.

ಹಾಗಾಗಿ ಈ ಬಾರಿ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನದ ಜೊತೆಗೆ ಉಸ್ತುವಾರಿ ನೀಡಿದ್ರೆ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬುದು ಜಿಲ್ಲೆಯ ಜನರ ಆಶಯ.

ಕಾಂಗ್ರೆಸ್​ ಹಾಗೂ ಬಿಜೆಪಿ ತಮ್ಮ ಐದು ವರ್ಷಗಳ ಅವಧಿಯಲ್ಲಿ ರಾಯಚೂರು ಜಿಲ್ಲೆಗೆ ಮಂತ್ರಿಗಿರಿ ನೀಡಿಲ್ಲ ಎಂಬ ನೋವಿದೆ. ಅಲ್ಲದೇ ಐದು ವರ್ಷಗಳಲ್ಲಿ ಮೂವರು ಮೂವರು ಉಸ್ತುವಾರಿ ಸಚಿವರು ಬಂದು ಹೋಗಿದ್ದಾರೆ.

ಅವರಿಂದ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಬೇಡಿಕೆಗೆ ಈ ಬಾರಿಯ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ. ಇದಕ್ಕೆ ಕಾಲವೇ ಉತ್ತರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+