ಮಂತ್ರಾಲಯ ರಾಯರ ದರ್ಶನ ಭಾಗ್ಯ ಸದ್ಯಕ್ಕಿಲ್ಲ
ರಾಯಚೂರು, ಜುಲೈ 2: ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಮಂತ್ರಾಲಯ ರಾಯರ ದರ್ಶನಕ್ಕೆ ಸದ್ಯ ಅವಕಾಶ ಸಿಗುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ರಾಯರ ಮಠದ ಬಾಗಿಲು ತೆರೆಯುವುದಿಲ್ಲ ಎಂದು ತಿಳಿಸಿದ್ದು, ದರ್ಶನದ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ.
ಈ ಹಿಂದೆ ಇಂದಿನಿಂದ (ಜುಲೈ 2) ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ಮಂತ್ರಾಲಯ ಮಠ ಆಡಳಿತ ಮಂಡಳಿ ತಿಳಿಸಿತ್ತು. ಆದರೆ, ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 2 ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ಶ್ರೀಮಠದಿಂದ ನಿನ್ನೆ ಮತ್ತೊಂದು ಪ್ರಕಟಣೆ ಹೊರಡಿಸಿದೆ.
ಮಠದಲ್ಲಿ ಆನ್‌ಲೈನ್ ಸೇವೆಗಳು ದೊರೆಯಲಿದ್ದು, ಭಕ್ತರು ಆನ್‌ಲೈನ್ ಪೂಜೆ ಹಾಗು ಸೇವೆಗಳನ್ನು ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ನಡುವೆ ಶ್ರೀರಾಘವೇಂದ್ರ ಸ್ವಾಮಿಗಳ 349 ನೆಯ ಆರಾಧನಾ ಮಹೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಆಗಸ್ಟ್ 4 ರಂದು ಪೂರ್ವಾರಾಧನೆ, ಅಗಸ್ಟ 5 ರಂದು ಮಧ್ಯಾರಾಧನೆ, ಅಗಸ್ಟ್ 6 ರಂದು ಉತ್ತರಾಧನೆಗೆ ತಯಾರಿ ಹಾಗು ರಥೋತ್ಸವ ನಡೆಯಲಿದೆ
ಲಾಕ್‌ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಕೆಲವು ದೇವಲಯಗಳನ್ನು ತೆರೆಯಲಾಗಿತ್ತು. ಆದರೆ, ಮಂತ್ರಾಲಯದಲ್ಲಿ ಜುಲೈ 2 ರಿಂದ ದರ್ಶನಕ್ಕೆ ಅವಕಾಶ ಎಂದು ತಿಳಿಸಿದ್ದು, ಮತ್ತೆ ಮುಂದಕ್ಕೆ ಹೋಗಿದೆ. ರಾಯರ ದರ್ಶನಕ್ಕೆ ಅವಕಾಶ ಇಲ್ಲದ್ರಿಂದ ಕೋಟ್ಯಂತರ ಭಕ್ತಾದಿಗಳಲ್ಲಿ ನಿರಾಸೆ












Click it and Unblock the Notifications