Vegetables Price: ಕಡಿಮೆ ಹಣದಲ್ಲಿ ಬ್ಯಾಗ್ ತುಂಬಾ ತರಕಾರಿ ತನ್ನಿ... ಯಾಕೆಂದರೆ....
ರಾಯಚೂರು ಜನವರಿ 30: ಸಂಕ್ರಮಣದ ಸಂದರ್ಭದಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಸದ್ಯ ಒಂದು ತಿಂಗಳುವರೆಗೆ ಯಾವುದೇ ಹಬ್ಬ ಇಲ್ಲದ ಕಾರಣ ಸಹಜವಾಗಿಯೇ ತರಕಾರಿಗಳ ಬೆಲೆ ಇಳಿದಿದೆ. ಬಿಸಿಲು ಗರಿ ಬಿಚ್ಚಿಕೊಳ್ಳುವ ಮೊದಲೇ ಗ್ರಾಹಕರು ತಮಗೆ ಇಷ್ಟವಾದ ತರಕಾರಿಗಳನ್ನು ಕೈಗೆಟಕುವ ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಹೌದು... ಆಗಾಗ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸುವ ಈರುಳ್ಳಿ ಬೆಲೆ ಸ್ಥಿರವಾಗಿದೆ. ರೋಗ ನಿರೋಧಕ ಶಕ್ತಿ ಹಾಗೂ ಊಟದ ಸ್ವಾದ ಹೆಚ್ಚಿಸುವ ಬೆಳ್ಳುಳ್ಳಿ ಬೆಲೆ ಮಾತ್ರ ಸದ್ಯ ಇಳಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹದಿನೈದು ದಿನಗಳಿಂದ ಬೆಳ್ಳುಳ್ಳಿ ಬೆಲೆ ಪ್ರತಿ ಕೆಜಿಗೆ ₹300 ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿದೆ.

ಗ್ರಾಹಕರು ಹೆಚ್ಚು ಇಷ್ಟಪಡುವ ಆಲೂಗಡ್ಡೆ, ಗಜ್ಜರಿ, ಬೀಟ್‌ರೂಟ್, ಬೀನ್ಸ್, ಎಲೆಕೋಸು, ಹೂಕೋಸು, ಟೊಮೆಟೊ, ಬದನೆಕಾಯಿ, ಹಿರೇಕಾಯಿ, ಬೆಂಡೆಕಾಯಿ ಹಾಗೂ ಮೆಣಸಿನಕಾಯಿ ಗ್ರಾಹಕರಿಗೆ ಸುಲಭ ಬೆಲೆಯಲ್ಲಿ ದೊರೆಯುತ್ತಿದೆ.
ನೆರೆಯ ಆಂಧ್ರಪ್ರದೇಶ, ತೆಲಂಗಾಣದ ಜಿಲ್ಲೆಗಳಿಂದ ಹೀರೆಕಾಯಿ, ಗಜ್ಜರಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಹಾಗೂ ಸೊಪ್ಪು, ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಹಾಗು ಈರುಳ್ಳಿ ಸೊಪ್ಪು ಮಾರುಕಟ್ಟೆಗೆ ಬಂದಿದೆ.
'ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಮುಂದಿನ ಒಂದು ತಿಂಗಳು ಸ್ಥಿರವಾಗಿರುವ ಸಾಧ್ಯತೆ ಇದೆ' ಎಂದು ತರಕಾರಿ ವ್ಯಾಪಾರಿ ಕೆ.ಶಶಿಕುಮಾರ ಹೇಳುತ್ತಾರೆ.
ಸಾಮಾನ್ಯವಾಗಿ ಹಬ್ಬಗಳ ಸಂದರ್ಭಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿರುತ್ತದೆ. ಬೇಸಿಗೆ ಕಾಲ ಆರಂಭವಾದಗಲೂ ತರಕಾರಿ ಬೆಲೆ ಕೇಳುವ ಹಾಗೇ ಇಲ್ಲ. ಒಂದು ನೂರು ರೂಪಾಯಿಯಲ್ಲಿ ಒಂದೆರೆದು ತರಕಾರಿ ಬಂದರೆ ಹೆಚ್ಚು. ಹೀಗಾಗಿ ಸದ್ಯ ಚಳಿಗಾಲದಿಂದ ಬೇಸಿಗೆ ಕಾಲದೆಡೆಗೆ ನಾವು ಹೆಜ್ಜೆ ಇಡುತ್ತಿದ್ದೇವೆ. ಈ ನಡುವೆ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕೂಡ ಕೆಗೆಟಕುವಂತಿದೆ. ಹಾಗಾದರೆ ಯಾವ ತರಕಾರಿ ಬೆಲೆ ಹೇಗಿದೆ ಎನ್ನುವುದುನ್ನು ತಿಳಿಯೋಣ.

ತರಕಾರಿ ಬೆಲೆ:
| ಕ್ರಮ ಸಂಖ್ಯೆ | ತರಕಾರಿ | ಕಳೆದ ವಾರ (ಕೆಜಿಗೆ ₹ಗಳಲ್ಲಿ) | ಈ ವಾರ (ಕೆಜಿಗೆ ₹ಗಳಲ್ಲಿ) |
| 1 | ಈರುಳ್ಳಿ | 25–30 | 20–30 |
| 2 | ಬೆಳ್ಳುಳ್ಳಿ | 320–350 | 350–370 |
| 3 | ಆಲೂಗಡ್ಡೆ | 30–40 | 25–30 |
| 4 | ಮೆಣಸಿನಕಾಯಿ | 55–60 | 40–50 |
| 5 | ಎಲೆಕೋಸು | 30–40 | 30–40 |
| 6 | ಹೂಕೋಸು | 30–40 | 30–40 |
| 7 | ಗಜ್ಜರಿ | 70–80 | 50–60 |
| 8 | ಬೀಟ್‌ರೂಟ್ | 60–80 | 55–60 |
| 9 | ಬೀನ್ಸ್ | 60–80 | 55–60 |
| 10 | ಟೊಮೆಟೊ | 25–30 | 20–25 |
| 11 | ಬದನೆಕಾಯಿ | 30–30 | 20 –20 |
| 12 | ಹಿರೇಕಾಯಿ | 70–80 | 55–60 |
| 13 | ಬೆಂಡೆಕಾಯಿ | 60–80 | 50–60 |
| 14 | ತೊಂಡೆಕಾಯಿ | 60–70 | 40–50 |
| 15 | ಡೊಣಮೆಣಸಿನಕಾಯಿ | 70–80 | 40–50 |
| 16 | ತುಪ್ಪದ ಹಿರೇಕಾಯಿ | 55–60 | 40–60 |
| 17 | ಚವಳೆಕಾಯಿ | 75–80 | 55–60 |
| 18 | ಸೋರೆಕಾಯಿ | 25–30 | 20–20 |
| 19 | ಕುಂಬಳಕಾಯಿ | 70–80 | 50–60 |
| 20 | ಬಟಾಣಿ | 70–80 | 60–60 |
| 21 | ಸೌತೆಕಾಯಿ | 75–80 | 50–60 |
| 22 | ಹಾಗಲಕಾಯಿ | 70–80 | 55–60 |
| 23 | ಅವರೆಕಾಯಿ | 50–60 | 50–50 |
| 24 | ನುಗ್ಗೆಕಾಯಿ | 75–80 | 55–60 |
ಸೊಪ್ಪು ಬೆಲೆ:
| ಕ್ರಮ ಸಂಖ್ಯೆ | ಸೊಪ್ಪು | ಕಳೆದ ವಾರ (ಒಂದು ಕಟ್ಟು) | ಈ ವಾರ (ಒಂದು ಕಟ್ಟು) |
| 1 | ಸಬ್ಬಸಗಿ | 20 | 10 |
| 2 | ಮೆಂತೆ | 10 | 10 |
| 3 | ಕೊತ್ತಂಬರಿ | 10 | 10 |
| 4 | ಪಾಲಕ್ | 10 | 10 |












Click it and Unblock the Notifications