ಆತ್ಮರಕ್ಷಣೆಗೆ ಬಂದೂಕು ಕೊಡಿ: ಸಿಎಂ ಸಿದ್ದರಾಮಯ್ಯಗೆ ರಾಯಚೂರು ಜಿಲ್ಲೆ ಕುರಿಗಾರರ ಮನವಿ
ರಾಯಚೂರು, ಆಗಸ್ಟ್, 4: ಕಾಡು, ಗುಡ್ಡ, ಬೆಟ್ಟಗಳು ಹಾಗೂ ಅಡವಿಯಲ್ಲಿ ಕುರಿ ಕಾಯುವ ಸಂಚಾರಿ ಕುರಿಗಾರರಿಗೆ ಮತ್ತು ಒಂಟಿಯಾಗಿ ಕುರಿ ಕಾಯುವವರಿಗೆ ಕುರಿ ಕಳವು ಮಾಡುವವರಿಂದ ಪ್ರಾಣ ಭಯವಿದ್ದು, ಆತ್ಮರಕ್ಷಣೆಗೆ ಬಂದೂಕು ನೀಡುವಂತೆ ರಾಜ್ಯದ ಸಂಚಾರಿ ಕುರಿಗಾರರು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಬೇಡಿಕೆ ಇಟ್ಟಿದ್ದಾರೆ.
ಎಡೆದೊರೆ ನಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಸಾಕಣೆ ಮಾಡುತ್ತಿದ್ದು, ಇಲ್ಲಿ ಜನಸಂಖ್ಯೆಯೂ ಜಾಸ್ತಿಯಿದೆ. ಕುರಿ ಸಾಕಣೆಯಿಂದಲೇ ಇಲ್ಲಿನ ಬಹುತೇಕರು ಬದುಕು ಕಟ್ಟಿಕೊಂಡಿದ್ದಾರೆ. ಇವರು ಹಗಲು ರಾತ್ರಿ ಎನ್ನದೆ ಕಾಡು, ಗುಡ್ಡ, ಬೆಟ್ಟ, ಅಡವಿಯಲ್ಲಿ ಕುರಿಮಂದೆ ಹಾಕಿ ಜೀವನ ಸಾಗಿಸುತ್ತಿದ್ದಾರೆ. ರಾತ್ರಿ ಕಾಡುಪ್ರಾಣಿಗಳು, ಕಳ್ಳರ ಭಯವಿರುವ ಹಿನ್ನೆಲೆ ಇವರು ಜೀವ ರಕ್ಷಿಸಿಕೊಳ್ಳುವುದೇ ಒಂದು ಸವಾಲಾಗಿದೆ.
ಕೊಡಗು, ಮಡಿಕೇರಿಗಳಲ್ಲಿ ರೈತರ ರಕ್ಷಣೆ ಹಾಗೂ ಆತ್ಮರಕ್ಷಣೆಗೆ ಕೋವಿಯನ್ನು (ಬಂದೂಕು) ಸರ್ಕಾರದಿಂದ ತರಬೇತಿ ನೀಡಿ ಕಾನೂನಿನಡಿ ನೀಡಲಾಗುತ್ತದೆ. ಹಾಗೆಯೇ ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ಕುರಿಗಾರರಿಗೆ ಬಂದೂಕು ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸಂಚಾರಿ ಕುರಿಗಾಹಿಗಳಿಗೆ ಸರ್ಕಾರ ಆರ್ಥಿಕ ಸಹಾಯ ಮಾಡಬೇಕು. ತೆಲಂಗಾಣದಲ್ಲಿ ಸಂಚಾರಿ ಕುರಿಗಾಹಿಗಳಿಗೆ ಶೇಕಡಾ 90ರಷ್ಟು ಸಹಾಯ ಧನ ನೀಡಲಾಗುತ್ತದೆ. ಆದರೆ ರಾಜ್ಯದಲ್ಲಿ ಶೇಕಡ 25ರಷ್ಟು ನೆರವು ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಬಿಜೆಪಿ ಸರ್ಕಾರ ಅನುಗ್ರಹ ಯೋಜನೆ ಕಡಿತಗೊಳಿಸಿದೆ. ಅದರ ಬಗ್ಗೆಯೂ ಪುನರ್ ಪರಿಶೀಲಿಸಿ ಜಾರಿ ಮಾಡುವಂತೆ ಕುರಿಗಾಹಿಗಳು ಮನವಿ ಮಾಡಿದ್ದಾರೆ. ದಲ್ಲಾಳಿಗಳ ಕಾಟ ತಪ್ಪಿಸಲು ಕೆಎಂಎಫ್ ಮಾದರಿಯಲ್ಲಿ ಕುರಿ ಮಾಂಸ ಮಾರಾಟಕ್ಕೆ ಸರ್ಕಾರ ಮುಂದಾದರೆ ಕುರಿಗಾಹಿಗಳ ಬದುಕು ಹಸನಾಗಲಿದೆ. ಇದರಿಂದ ಸರ್ಕಾರಕ್ಕೂ ಆದಾಯ ಬರಲಿದೆ ಎಂದಿದ್ದಾರೆ.
ಕೆಎಂಎಫ್ ಉತ್ಪನ್ನ ಮಾರಿದಂತೆ ಮಾಂಸ ಮಾರಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕುರಿಗಾರರ ಬದುಕಿಗೆ ಪೂರಕವಾಗುವಂತೆ ಸರ್ಕಾರ ಯೋಜನೆ ರೂಪಿಸುವಂತೆ ಕುರಿಗಾರರು ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಹಿಂದೆ ಕುರಿ ಕಾಯಲು ಹೋದ ಸಂಚಾರಿ ಕುರಿಗಾಹಿ ಲಕ್ಷ್ಮಿ ಎಂಬ ಮಹಿಳೆ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಗಿತ್ತು. ಹೀಗಾಗಿ ಸರ್ಕಾರ ಸಂಚಾರಿ ಕುರಿಗಾಹಿಗಳ ಹಿತ ಕಾಪಾಡಲು ಚಿಂತನೆ ನಡೆಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಕುರಿಮಂದೆ ನಿರ್ವಹಿಸುವ ಕುಟುಂಬಗಳಿಗೆ ಸರ್ಕಾರದಿಂದ ಟಾರ್ಚ್‌ಗಳು, ಉಣ್ಣೆಯ ಶ್ವಟರ್, ರೇನ್ ಕೋಟ್‌ಗಳು, ಕುರಿಗಳ ಆರೋಗ್ಯಕ್ಕಾಗಿ ಔಷಧ ಒದಗಿಸಲಾಗುತ್ತಿತ್ತು. ಆದರೆ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೌಲಭ್ಯಗಳು ಸಿಗುತ್ತಿಲ್ಲ ಎನ್ನಲಾಗಿದೆ. ಅಲ್ಲದೇ ಕುರಿಗಳು ಅಕಸ್ಮಿಕವಾಗಿ ಮೃತಪಟ್ಟರೆ ಸರ್ಕಾರದಿಂದ 6,000 ರೂಪಾಯಿ ನೀಡಲಾಗುತ್ತಿದೆ. ಆದರೆ ಬಹುತೇಕ ಕುರಿಮಂದೆ ಮಾಲೀಕರಿಗೆ ಸೌಲಭ್ಯಗಳ ಅರಿವಿಲ್ಲದಂತಾಗಿದೆ.
ರಾಜ್ಯದಲ್ಲೀಗ ಕುರುಬ ಸಮುದಾಯದ ಬಂದೂಕು ಬೇಡಿಕೆ ಹಳೆಯದಾಗಿದ್ದು, ಇದು ಅನುಷ್ಠಾನಕ್ಕೆ ಬಾರದ ಹಿನ್ನೆಲೆ ಈಗ ಮತ್ತೊಮ್ಮೆ ಕುರಿಗಾರರು ಬೇಡಿಕೆ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಹಸ್ರಾರು ಸಂಚಾರಿ ಕುರಿಗಾರರು ತಮ್ಮ ಹೆಂಡತಿ, ಚಿಕ್ಕ ಮಕ್ಕಳೊಂದಿಗೆ ಸಾವಿರಾರು ಕುರಿಗಳ ಸಮೇತ ಊರೂರು, ಬೆಟ್ಟ ಗುಡ್ಡ ಸುತ್ತಿ ಕುರಿ ಮೇಯಿಸುವುದು, ಹೈನು ಉತ್ಪಾದನೆ ಮಾಡುವುದು, ಕರಿಮರಿ ಉತ್ಪಾದನೆ ಮಾಡಿ ಮಾಂಸಹಾರ ಉತ್ಪಾದಿಸುತ್ತ ಕುರಿಗಳ ಸಾಕಣೆಯಲ್ಲಿಯೇ ಜೀವನ ನಿರ್ವಹಿಸುತ್ತಿದ್ದಾರೆ.
ಅಲ್ಲದೆ ಸಂಚಾರಿ ಕುರಿಗಾಹಿಗಳ ಮೇಲೆ ಕುರಿಗಳ್ಳರಿಂದ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಜೊತೆಗೆ ಕುರಿಗಳು ಕಳುವಾಗಿವೆ. ಹಲ್ಲೆ ಮಾಡಿ ಚಿಲ್ಲರೆ ದುಡ್ಡು, ಸಾಮಾನು ಕದ್ದಿರುವ ನಿದರ್ಶನಗಳಿವೆ. ಆದ್ದರಿಂದ ಕುರಿಗಾಯಿಗರರ ರಕ್ಷಣೆಗೆ ಸರ್ಕಾರ ಬಂದೂಕು ಯೋಜನೆ ಜಾರಿಗೆ ತರಬೇಕಿದೆ. ಅರಣ್ಯ ಪ್ರದೇಶದಲ್ಲಿ ದುರುಳರ ಅಟ್ಟಹಾಸಕ್ಕೆ ಸಂಚಾರಿ ಕುರಿಗಾರರು ಒಳಗಾಗಿದ್ದಾರೆ. ಇಷ್ಟಲ್ಲದೇ ಸಾವು, ನೋವು ಕಂಡಿದ್ದಾರೆ.
ಸಾಕಷ್ಟು ಸಂಕಷ್ಟ ಅನುಭವಿಸಿರುವ ಕುರುಬ ಸಮುದಾಯದವರು ಸಿಎಂ ಸಿದ್ಧರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದ ವೇಳೆ ಖುದ್ದು ಭೇಟಿ ನೀಡಿ ಬಂದೂಕು ನೀಡುವಂತೆ ಮನವಿ ಮಾಡಿದ್ದರು. ಆದರೆ ಬಂದೂಕು ನೀಡುವ ಯೋಜನೆ ನೆನೆಗುದಿಗೆ ಬಿತ್ತು. ರಾಜ್ಯದಲ್ಲೀಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದು, ಸಂಚಾರಿ ಕುರಿಗಾಹಿಗಳ ಬೇಡಿಕೆಗೆ ಅನುಗುಣವಾಗಿ ಕಾನೂನಿನ ಪ್ರಕ್ರಿಯೆಯಡಿ ಬಂದೂಕು ನೀಡಬೇಕು ಎನ್ನುವ ಕೂಗುಗಳು ಎದ್ದಿವೆ.
ಜಿಲ್ಲೆ, ರಾಜ್ಯದ ಕುರಿಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಂಚಾರಿ ಕುರಿಗಾರರ ಆತ್ಮರಕ್ಷಣೆಗೆ ಬಂದೂಕು ಕೊಡಬೇಕು. ಕೊಡಗು, ಮಡಿಕೇರಿಯಲ್ಲಿ ರೈತರಿಗೆ ಕೋವಿ ನೀಡಿದಂತೆ ಕಾಡುಪ್ರಾಣಿಗಳು, ಕಳ್ಳರಿಂದ ಜೀವ ರಕ್ಷಿಸಿಕೊಳ್ಳಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಮೋಘ ಸಿದ್ಧೇಶ್ವರ ಕುರಿಸಂಗೋಪನೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಒತ್ತಾಯಿಸಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications