2022ರ ಹಿನ್ನೋಟ: ಸಿಹಿಗಿಂತ ಕಹಿ ಘಟನೆಗಳಿಗೆ ಸಾಕ್ಷಿಯಾದ ರಾಯಚೂರು
ರಾಯಚೂರು ಡಿಸೆಂಬರ್31: ಓಮಿಕ್ರಾನ್ ಆತಂಕದಲ್ಲಿಯೇ ಆರಂಭಗೊಡಿದ್ದ 2022ನೇ ಇಸವಿ ಮತ್ತೆ ಕೊರೊನಾ ಭೀತಿಯಲ್ಲಿಯೇ ಕೊನೆಗೊಂಡಿದೆ. ಇಡೀ ವರ್ಷ ರಾಯಚೂರು ಜಿಲ್ಲೆಯ ಜನರಿಗೆ ಸಿಹಿಗಿಂತಲೂ ಕಹಿ ಅನುಭವನ್ನೇ ಉಣಬಡಿಸುವುದರ ಜೊತೆಗೆ ಅದೇ ಮಂಪರಿನಲ್ಲಿಯೇ ಮುಗಿದಿದ್ದು ಹೊಸ ವರ್ಷದೆಲ್ಲಾದರೂ ಜಿಲ್ಲೆ ಪ್ರಗತಿ ಹೊಂದಲಿ ಎನ್ನುವ ನಿರೀಕ್ಷೆಗಳನ್ನು ನಾಗರಿಕರು ಹೊಂದಿದ್ದಾರೆ.
ವರ್ಷದ ಆರಂಭದಲ್ಲಿ ಕೋವಿಡ್ ಲಸಿಕೆ ಅಭಿಯಾನ, ಒಮಿಕ್ರಾನ್ ಸೋಂಕು ವ್ಯಾಪಿಸದಂತೆ ವಾರಾಂತ್ಯ ಕರ್ಫ್ಯೂ ಜಾರಿ. ಜನವರಿ 26 ರಂದು ಜಿಲ್ಲಾ ನ್ಯಾಯಲಯ ಸಂಕೀರ್ಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನ್ಯಾಯಾಧೀಶರು ಅಪಮಾನ ಮಾಡಿದ್ದಾರೆ ಎನ್ನುವ ಆರೋಪದ ಘಟನೆಯೂ ಎಲ್ಲೆಡೆ ಹಬ್ಬಿತ್ತು.
ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ, ಶ್ರೀರಾಮ ಸೇನೆ ಮುಖಂಡನ ಪ್ರಮೋಚದನಕಾರಿ ಭಾಷಣೆ ಮಾಡಿದ ಶ್ರೀರಾಮಸೇನೆ ಮುಖಂಡನ ಬಂಧನ, ನಗರಸಭೆ ಕಲುಷಿತ ನೀರು ಕುಡಿದು ನಿವಾಸಿಗಳ ಸಾವುವು, ಕುರುಕುಂದಾದಲ್ಲಿ ವಾಲ್ಮೀಕಿ ಫುತ್ಥಳಿ ಅನಾವರಣಕ್ಕೆ ಕಿಚ್ಚ ಸುದೀಪ್ ಆಗಮಿಸಿದ್ದು, ಏಮ್ಸ್‌ಗಾಗಿ ಅನಿರ್ದಿಷ್ಟಾವಧಿ ಹೋರಾಟ ಆರಂಭ, ವಾಡಿಕೆಗಿಂತ ಹೆಚ್ಚು ಮಳೆ, ನದಿ ಪಾತ್ರಗಳಲ್ಲಿ ಪದೇ ಪದೆ ಪ್ರವಾಹ ಭೀತಿ, ಮಳೆ ಹಾನಿ, ರಾಜಕೀಯ ಪಕ್ಷಗಳಿಂದ ಚುನಾವಣೆ ಚಟುವಟಿಕೆಗಳ ಆರಂಭ, ಭಾರತ್ ಜೋಡೋ ಯಾತ್ರೆ, ಅಪಘಾತಗಳಲ್ಲಿ ಸಾವು ನೋವು , ರಾಜ್ಯದಲ್ಲಿಯೇ ಮೊದಲ ಝೀಕಾ ವೈರಸ್ ಪತ್ತೆ . ಹೀಗೆ ಹತ್ತು ಹಲವು ವಿಶೇಷತೆಗಳಿಗೆ 2022 ಸಾಕ್ಷಿಯಾಗಿತ್ತು.

2022 ವರ್ಷದ ಪ್ರಮುಖ ಘಟನೆಗಳು
ಜನವರಿ 26 ರಂದು ರಾಯಚೂರು ನಗರದ ಜಿಲ್ಲಾ ನ್ಯಾಯಲಯ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಡಾ.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ್ದನ್ನು ಖಂಡಿಸಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಫೆಬ್ರವರಿ 26ರಂದು ರಾಯಚೂರು ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆ 371 ಜೆ ಮೀಸಲಾತಿಯಡಿ ಸೀಟು ಹಂಚಿಕೆ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ವಿರೋಧ , ಪ್ರತಿಭಟನೆ ನಡೆಸಲಾಯಿತು.
ಮಾರ್ಚ್ 4ರಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ರಾಯರ 401ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಧರ್ಮ ಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ನಟ ಸುದೀಪ್ ಕೂಡ ಆಗಮಿಸಿ ರಾಯರ ದರ್ಶನ ಪಡೆದರು.
ಮಾರ್ಚ್ 14 ರಂದು ನಗರಸಭೆ ಅಧ್ಯಕ್ಷ ವಿನಯ ಕುಮಾರ್ ವಿರುದ್ಧ ಅವಿಶ್ವಾಸ ಮಂಡನೆ.
ಏಪ್ರಿಲ್ 17 ರಂದು ಪ್ರಚೋದನಕಾರಿ ಹೇಳಿಕೆ ಶ್ರೀರಾಮಸೇನೆ ಮುಖಂಡರ ಬಂಧನ ಮಾಡಲಾಗಿತ್ತು.

ಏಪ್ರಿಲ್ 27 ರಂದು ಕುರುಕುಂದ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ವೀರಮದಕರಿ ನಾಯಕರ ಪ್ರತಿಮೆ ಅನಾವರಣ ಮಾಡಲು ನಟ ಕಿಚ್ಚ ಸುದೀಪ್ ಆಗಮಿಸಿದ್ದರು.
ಮೇ 16 ರಂದು ರಾಯಚೂರು ಏಮ್ಸ್ ಹೋರಾಟ ಸಮಿತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿತ್ತು.
ಮೇ 30 ರಂದು ಕಲುಷಿತ ನೀರು ಸೇವಿಸಿ ರಾಯಚೂರು ನಗರದ ಮಲ್ಲಮ್ಮನ ಸಆವಿನ ಪ್ರಕರಣದಲ್ಲಿ ಒಟ್ಟು ಏಳು ಜನರು ಸಾವನ್ನಪ್ಪಿದ ದುರ್ಘಟನೆ ನಡೆದಿತ್ತು.
ಜುಲೈ 2 ರಂದು ಮಾನ್ವಿ ತಾಲೂಕಿನ ವಲ್ಕಂದಿನ್ನಿ ಮತ್ತು ಜೂಕೂರ ಗ್ರಾಮಗಳಲ್ಲಿ ಕಲಷಿತ ನೀರು ಸೇವಿಸಿ 40 ಜನರಿಗೆ ವಾಂತಿಭೇದಿಯಿಂದ ಬಳಲಿದ್ದರು.
ಜುಲೈ 7 ರಂದು ರಾಯಚೂರು ಜಿಪಂ ಸಿಇಒ ಹುದ್ದೆಗೆ ನೂರ್‌ಜಹಾರ್‌ಖಾನಂ ಅವರನ್ನು ನೇಮಕ ಆದೇಶವನ್ನು ಕೆಎಟಿ ರದ್ದುಗೊಳಿಸಿ ಆದೇಶ.
ಆಗಸ್ಟ್ 10 ರಂದು ಮಂತ್ರಾಲಯದಲ್ಲಿ ಕೋವಿಡ್ ಬಳಿಕ ಅದ್ಧೂರಿಯಾಗಿ ಆರಾಧನಾ ಮಹೋತ್ಸವ ಆರಂಭವಾಗಿತ್ತು.
ಆಗಸ್ಟ್ 25ರಂದು ತುಮಕೂರಿನ ಕಳ್ಳಂಬೆಳ್ಳ ಹತ್ತಿರ ಸಂಭವಿಸಿದ ಅಪಘಾತದಲ್ಲಿ ರಾಯಚೂರಿನ ಒಂಭತ್ತು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದರು.

ಆಗಸ್ಟ್ 27ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಯಚೂರು ಕೃಷಿ ವಿವಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಪ್ಟೆಂಬರ್ 6 ರಂದು ರಾಯಚೂರು ಜಿಲ್ಲೆಯಾದ್ಯಂತ ಸುರಿದ ನಿರಂತರ ಮಳೆಯಿಂದಾಗಿ ೭೧ ಕೋಟಿ ರೂಪಾಯಿ ಹಾನಿಯಾನಿಯಾಗಿತ್ತು.
ಸಪ್ಟೆಂಬರ್ 19 ರಂದು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಟಿಎಲ್‌ಬಿಸಿ ಕಾಲುವೆಯಲ್ಲಿ ಬಿದ್ದು ರಾಯಚೂರು ನಗರದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು.
ಸಪ್ಟೆಂಬರ್ 27ರಂದು ರಾಯಚೂರು ನಗರದಲ್ಲಿ ಪಿಎಫ್‌ಐ ಮುಖಂಡರಿಬ್ಬರ ಬಂಧನ, ಗಲಾಟೆ.
ಸಪ್ಟೆಂಬರ್ 30ರಂದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರಿನಲ್ಲಿ ಜೆಡಿಎಸ್ ಸಮಾವೇಶ.
ಅಕ್ಟೋಬರ್ 11ರಂದು ರಾಯಚೂರು ತಾಲ್ಲೂಕಿನ ಗಿಲ್ಲೇಸೂಗೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಚಾಲನೆ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಸಚಿವರು, ಸಂಸದರು, ಶಾಸಕರು ಭಾಗಿಯಾಗಿದ್ದರು.
ಅಕ್ಟೋಬರ್ 15 ರಂದು ಅರಕೇರಾ ಗ್ರಾಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಗ್ರಾಮವಾಸ್ತವ್ಯ , ಅರಕೇರಾ ಗ್ರಾಮ ತಾಲೂಕು ಘೋಷಣೆ, ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ, ಜನರಿಂದ ಅಹವಾಲು ಸ್ವೀಕಾರ.
ಅಕ್ಟೋಬರ್ 17ರಂದು ಆರ್‌ಟಿಪಿಎಸ್ ಗುತ್ತಿಗೆ ಕಾರ್ಮಿಕ ಸಣ್ಣ ಸೂಗಪ್ಪ ಅವರಿಂದ ಚಿಮಣಿ ಮೇಲತ್ತಿ ಆತ್ಮಹತ್ಯೆ ಬೆದರಿಕೆ, ಲೈವ್ ವಿಡಿಯೋ
ಅಕ್ಟೋಬರ್ 21 ರಿಂದ 23 ರವರೆಗೆ ರಾಯಚೂರಿನಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಿತು. ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನಂತರ ತುಂಗಭದ್ರಾ ನದಿ ದಾಟಿ ಕರ್ನಾಟಕ ಪ್ರವೇಶ್, ಗಿಲ್ಲೇಸೂಗೂರು, ರಾಯಚೂರು ನಗರದಲ್ಲಿ ಬಹಿರಂಗ ಸಭೆ, ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭಾಗಿ ಜನಸ್ತೋಮ ಕಂಡು ಎಲ್ಲರೂ ಅಚ್ಚರಿ, ಜೋಡಿ ಯಾತ್ರೆಗೆ ಅದ್ಧೂರಿಯಾಗಿ ಬೀಳ್ಕೂಡಲಾಯಿತು.
ಅಕ್ಟೋಬರ್ 23 ರಂದು ಮಾಜಿ ಸಚಿವ ಸುಧಿಂದ್ರ ರಾವ್ ಕಸಬೆ ನಿಧನ
ಅಕ್ಟೋಬರ್ 24ರಂದು ಸಾರಿಗೆ ಬಸ್ ಚಲಾಯಿಸುವಾಗ ಹೃದಯಘಾತವಾಗಿ ರಾಜಹಂಸ ಬಸ್ ಚಾಲಕ ನಾರಾಯಣಗೌಡ ಸಾವು, ಲಿಂಗಸೂಗೂರು ತಾಲ್ಲೂಕಿನ ಬೆಳಗಾಂ -ರಾಯಚೂರು ಹೆದ್ದಾರಿಯ ಚಿಕ್ಕಹೆಸರೂರು ಗ್ರಾಮದಲ್ಲಿ ಸಮೀಪ ನಡೆದ ಘಟನೆ, 34 ಪ್ರಯಾಣಿಕರಿದ್ದ ಬಸ್ಸಿನಲ್ಲಿ 14 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು.
ಅಕ್ಟೋಬರ್ 29ರಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿಯನ್ನಾಗಿ ಡಾ.ಎಂ.ಹನುಮತಪ್ಪ ಅವರ ನೇಮಕ.
ನವೆಂಬರ್ 12ರಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಪಾದಯಾತ್ರೆ , ಧರ್ಮಸಭೆ
ನವೆಂಬರ್ 21 ರಂದು ದೇವದುರ್ಗ ಪಟ್ಟಣ ಸೇರಿದಂತೆ ತಾಲ್ಲೂಕಿನ ನಾಲ್ಕು ಕಡೆ ಅನಧಿಕೃತವಾಗಿ ಕಸಾಯಿ ಖಾನೆಗಳಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ, 7 ಜನರ ಬಂಧನ 3 ವಾಹನ ವಶಕ್ಕೆ ಪಡೆದುಕೊಂಡು 58 ಜಾನುವಾರುಗಳ ರಕ್ಷಣೆ ಮಾಡಿದ ಪೊಲೀಸರು.
ನವೆಂಬರ್ 21 ರಂದು ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ತೃತೀಯ ಲಿಂಗಿ ಅಶ್ವತ್ಥಾಮ ಶಿಕ್ಷಕರಾಗಿ ಆಯ್ಕೆ
ನವೆಂಬರ್ 28 ರಂದು ರಾಯಚೂರು ನಗರದಲ್ಲಿ ಹೂಡಿರುವ ಏಮ್ಸ್ ಹೋರಾಟಕ್ಕೆ 200ನೇ ದಿನ, ಬೃಹತ್ ಪ್ರತಿಭಟನಾ ಮೆರವಣಿಗೆ
ಡಿಸೆಂಬರ್ 3 ರಂದು ರಾಯಚೂರಿಗೆ ಇದೇ ಮೊದಲ ಬಾರಿಗೆ ಚಿತ್ರನಟ ಡಾ.ಶಿವರಾಜಕುಮಾರ ಆಗಮನ, ಮಂತ್ರಾಲಯಕ್ಕೆ ಭೇಟಿ ರಾಯರ ದರ್ಶನ ವೇದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಡಿಸೆಂಬರ್ 3 ರಂದು ಸಿರವಾರ ಮಹಿಳಾ ಪಿಎಸ್‌ಐ ಕಿರುಕುಳ ತಾಳಲಾರದೇ ಡೆತ್ ನೋಟ್ ಬರೆದಿಟ್ಟು ತಾಯಣ್ಣ ನೀಲಗಲ್ ಎಂಬ ಯುವಕ ನಾಪತ್ತೆ , ಎರಡು ದಿನಗಳ ಬಳಿಕ ಬಳ್ಳಾರಿಯಲ್ಲಿ ಪತ್ತೆ , ಯುವಕನ ದೂರನ್ನಾಧರಿಸಿ ಪಿಎಸ್‌ಐರನ್ನು (ಡಿ.18 ರಂದು) ಅಮಾನತುಗೊಳಿಸಲಾಯಿತು.
ಡಿಸೆಂಬರ್ 12 ರಂದು ಮಾನ್ವಿ ತಾಲೂಕಿನ ಕೋಳಿ ಕ್ಯಾಂಪಿನ ಸಣ್ಣಹಳ್ಳಿಯಲ್ಲಿ 5 ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು ರಾಜ್ಯದಲ್ಲಿಯೇ ಇದು ಮೊದಲ ಝೀಕಾ ವೈರಸ್ ಪ್ರಕರಣ ಕೇಂದ್ರ ವೈದ್ಯರ ತಂಡ ದೌಡು, ಎಲ್ಲೆಡೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಯಿತು.
ಡಿಸೆಂಬರ್ 15 ರಂದು ಲಿಂಗಸೂಗೂರು ತಾಲೂಕಿನ ಹೂನೂರು ಗ್ರಾಮದಲ್ಲಿ 5 ರೂಪಾಯಿ ತಿಂಡಿ ಪ್ಯಾಕೇಟ್‌ನಲ್ಲಿ 500 ರೂಪಾಯಿ ಪತ್ತೆ ಇಡೀ ರಾಜ್ಯಮಟ್ಟದ ಗಮನ ಸೆಳೆದ ಯಾಗಿದೆ.












Click it and Unblock the Notifications