ರಾಯಚೂರು: ಅಧ್ಯಕ್ಷರಿಲ್ಲದೆ ಬಡವಾದ ಜಿಲ್ಲಾ ಕಾಂಗ್ರೆಸ್ ಸಮಿತಿ
ರಾಯಚೂರು, ಜೂನ್ 5- ರಾಜ್ಯದಲ್ಲಿ ಹೊಸದಾಗಿ ರಚನೆಗೊಂಡಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದಾಗಿ ಎಲ್ಲೆಡೆ ಪಕ್ಷದ ಸಚಿವರು, ಶಾಸಕರು, ಕಾರ್ಯಕರ್ತರು, ಮುಖಂಡರು ನೂತನ ಹುಮ್ಮಸ್ಸಿನೊಂದಿಗಿದ್ದರೆ ರಾಯಚೂರು ಜಿಲ್ಲೆಯಲ್ಲಿ ಮಾತ್ರ ಪಕ್ಷದ ಪರಿಸ್ಥಿತಿ ವಿಭಿನ್ನವಾಗಿದೆ.
ಗುಂಪುಗಾರಿಕೆ, ಆಚಿತರಿಕ ಸಂಘರ್ಷ, ಪರಸ್ಪರ ಕಾಲೆಳೆಯುವ ವಾತಾವರಣದಿಂದಾಗಿ ಆಧ್ಯಕ್ಷರಿಲ್ಲದೇ ಜಿಲ್ಲಾ ಕಾಂಗ್ರೆಸ್ ಸಮಿತಿಯು ಬಡವಾಗಿ ಹೋಗಿದೆ. ಇದೀಗ ಒಬ್ಬರು ಸಚಿವರು, ನಾಲ್ವರು ಶಾಸಕರು, ಮತ್ತೊಬ್ಬರು ವಿಧಾನ ಪರಿಷತ್ ಸದಸ್ಯರು ಪಕ್ಷದಿಂದ ಪ್ರತಿನಿಧಿಸುತ್ತಿದ್ದರು ಸಹ ಜಿಲ್ಲಾ ಕಾಂಗ್ರೆಸ್ ಸಮಿತಿಗೆ (ಡಿಸಿಸಿ) ಅಧ್ಯಕ್ಷರಿಲ್ಲದ ಕಾರಣಕ್ಕೆ ಪಕ್ಷವನ್ನು ಮುನ್ನೆಡೆಸಿಕೊಂಡು ಹೋಗಲು ಯಾರು ಇಲ್ಲದಕ್ಕೆ ಅನಾಥವಾಗಿದೆ.

ಈಚೆಗೆ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಡಿಸಿಸಿ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕ ಅವರು ಎಲ್ಲರಿಗೂ ಶಾಕ್ ನೀಡಿ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ವಿರುದ್ಧ ಸೋತಿದ್ದಾರೆ. ಬಿ.ವಿ.ನಾಯಕ ರಾಜೀನಾಮೆಯಿಂದ ತೆರವಾಗಿ ತಿಂಗಳು ಕಳೆಯುತ್ತಿದ್ದರು ಡಿಸಿಸಿ ಸ್ಥಾನಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿರುವ್ಯದರಿಂದ ನಿಷ್ಠಾವಚಿತ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಮುಂಚೆಯಿಂದಲೂ ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿ ಬಣ ರಾಜಕೀಯ ಆಂತರೀಕ ಸಂಘರ್ಷವಿತ್ತು. ಇದೀಗ ಡಿಸಿಸಿಗೆ ಅಧ್ಯಕ್ಷರಿಲ್ಲದ ಕಾರಣಕ್ಕೆ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟದಂತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸುವ ಷಡ್ಯಂತ್ರ , ಕಾಂಗ್ರೆಸ್ ಪಕ್ಷದವರೆ ತನ್ನ ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸುವ ಪ್ರಯತ್ನ ನಡೆಸಿರುವುದು ಹಾಗೂ ಸ್ವಪಕ್ಷದವರನ್ನು ಸೋಲಿಸಲು ಹುನ್ನಾರ ಹೂಡಿರುವುದು ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ಪಾಲ್ಗೊಳ್ಳದೆಯೇ ದೂರ ಸರಿದಿರುವುದು ಏಕಾಏಕಿ ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು. ಸಚಿವ ಸ್ಥಾನ ನೀಡುವಚಿತೆ ಶಾಸಕರ ಪರವಾಗಿ ಲಾಬಿ ನಡೆಸಿರುವುದು, ಸಚಿವರಾದವರಿಗೆ ಪಕ್ಷದ ಅನುಮತಿಯಿಲ್ಲದೆಯೇ ಅಭಿನ ಂದನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮುಖಾಂತರ ಪಕ್ಷದಲ್ಲಿ ಏನು ಸರಿಯಿಲ್ಲ ಎನ್ನುವ ಸಂದೇಶವನ್ನು ರವಾನಿಸುತ್ತಿದ್ದಾರೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಸಮಯದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಮನಸ್ಸಿಗೆ ಬಂದ ಹಾಗೆ ರವಾನಿಸುತ್ತಿದ್ದಾರೆ ಎನ್ನುವುದು ಪಕ್ಷದ ಕೆಲ ಮುಖಂಡರ ಆರೋಪಿಸುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರದ ಸಚಿವ ಸಂಪುಟದಲ್ಲಿ ಜಿಲ್ಲೆಯ ಹಿರಿಯ ಮುಖಂಡ ಎನ್.ಎಸ್.ಬೋಸರಾಜುಗೆ ಸ್ಥಾನವನ್ನು ನೀಡಲಾಗಿದೆ.

ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣದಿಂದ ಬಸನಗೌಡ ದದ್ದಲ್, ಮಾನ್ವಿಯಿಂದ ಜಿ.ಹಂಪ ಯ್ಯ ನಾಯಕ, ಸಿಂಧನೂರಿನಿಂದ ಹಂಪನಗೌಡ ಬಾದರ್ಲಿ ಮತ್ತು ಮಸ್ಕಿಯಿಂದ ಆರ್.ಬಸನಗೌಡ ತುರ್ವಿಹಾಳ ಅವರು ಹಾಗೂ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ ಅವರುಗಳು ಪಕ್ಷದಿಂದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರು ಸಹ ಜಿಲ್ಲಾ ಸಮಿತಿಗೆ ಅಧ್ಯಕ್ಷರ ನೇಮಕ ಮಾಡುವಲ್ಲಿ ಮಾತ್ರ ಹೆಚ್ಚಿನ ಆಸಕ್ತಿಯನ್ನು ತೋರದಿರುವುದು ಪಕ್ಷದಲ್ಲಿ ಸ್ನೇಹ ಪೂರ್ವಕ ವಾತಾವರಣವಿಲ್ಲ ಎನ್ನುವುದನ್ನು ಸಾಕ್ಷಿಕರಿಸುತ್ತಿದೆ.
ಇದೀಗ ರಾಯಚೂರು ನಗರಸಭೆ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಆಡಳಿತ ಅವಧಿ ಪೂರ್ಣಗೊಂಡಿದೆ. ಮತ್ತೆ ಅಧಿಕಾರವನ್ನು ತಮ್ಮದಾಗಿಸಿಕೊಳ್ಳಲು ಕೈ ಕಷ್ಟಪಡಬೇಕಾಗಿದೆ. ಶೀಘ್ರದಲ್ಲಿಯೇ ಜಿಪಂ ತಾಪಂ ಚುನಾವಣೆ ಘೋಷಣೆಯಾಗಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆಯು ನಡೆಯಲಿದೆ. ಇಂತಹ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಸಮರ್ಥರನ್ನು ನೇಮಕ ಮಾಡುವ ಜರೂರಿಯಿದೆ. ಆದರೆ ಪಕ್ಷದ ಅಚಿತರಿಕ ಸಮಸ್ಯಗಳಿಂದಾಗಿ ಡಿಸಿಸಿ ಹೊಸ ನಾಯಕರನ್ನು ಹುಡುಕುವುದೇ ಪಕ್ಷದ ವರಿಷ್ಠರಿಗೆ ಸವಾಲಾಗಿ ಮಾರ್ಪಟ್ಟಿದೆ.












Click it and Unblock the Notifications