ರಾಯಚೂರು ಜಿಲ್ಲೆ ಅಭಿವೃದ್ಧಿಗೆ 3 ಸಾವಿರ ಕೋಟಿ ಕೊಟ್ಟ ಕುಮಾರಸ್ವಾಮಿ
ರಾಯಚೂರು, ಜೂನ್ 26: ರಾಯಚೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳಿಗಾಗಿ 3 ಸಾವಿರ ಕೋಟಿ ರೂ. ವೆಚ್ಚದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಿಳಿಸಿದರು.
ರಾಯಚೂರಿನ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಯಾಬಿನೆಟ್ ನಲ್ಲಿ ರಾಯಚೂರು ವಿವಿ ಕುರಿತು ಸುಗ್ರಿವಾಜ್ಷೆ ಮಾಡಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ವಿವರಣೆಯನ್ನು ರಾಜ್ಯಪಾಲರಿಗೆ ಕೇಳಿದ್ದು, ಆ ಕುರಿತು ಮನವೋಲಿಸಲಾಗುವುದು ಐಐಐಟಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ತುಂಗಭದ್ರಾ ಜಲಾಶಯದ 31 ಟಿಎಂಸಿ ಹೂಳು ತುಂಬಿಕೊಂಡಿದ್ದು, ಅದು ತೆಗೆಯುವುದು ಅಸಾಧ್ಯ ಎಂಬ ವರದಿ ಹಿನ್ನೆಲೆಯಲ್ಲಿ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಎಆರ್ ರೂಪಿಸುವುದಕ್ಕೆ ಸೂಚನೆ ನೀಡಲಾಗಿದೆ.
ಅಭಿವೃದ್ಧಿ ವಿಷಯದಲ್ಲ ನಮ್ಮ ಸರಕಾರ ಹಿಂಜರಿಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಗೆ ದುಡ್ಡಿನ ಕೊರತೆ ಇಲ್ಲ; ಸಾಲಮನ್ನಾಕ್ಕಾಗಿ ಹಣವನ್ನು ವಿವಿಧ ಇಲಾಖೆಗಳಿಗೆ ಹಣ ಕಡಿತಮಾಡಲಾಗಿದೆ ಎಂಬುದು ಸುಳ್ಳು. ಸಣ್ಣ ಮತ್ತು ಬೃಹತ್ ನೀರಾವರಿಗೆ ಈ ವರ್ಷ 19 ಸಾವಿರ ಕೋಟಿ ರೂ. ಒದಗಿಸಲಾಗಿದೆ.

ರಾಜ್ಯದ ಎಲ್ಲ ಜನರೂ ನನ್ನ ಸಹೋದರರು:ಎಚ್‌ಡಿಕೆ
ರಾಜ್ಯದ 6.5ಕೋಟಿ ಜನರು ನನ್ನ ಅಣ್ಣ ತಮ್ಮಂದಿರು ಅಕ್ಕ ತಂಗಿಯರಿದ್ದಾರೆ. ಬಿಜೆಪಿಯವರ ಹೆಸರು ಹೇಳಿಕೊಂಡು ಕೆಲಸ ಮಾಡುವ ಅಗತ್ಯ ನನಗಿಲ್ಲ. ಈ ಮುಂಚೆ ಅವರದೇ ಸರಕಾರವಿದ್ದಾಗ ಏನು ಮಾಡಿದ್ದರು...? ಎಂದು ಪ್ರಶ್ನಿಸಿದರು.
ದೇವದುರ್ಗ ತಾಲೂಕಿಗೆ ನೀರಾವರಿಯನ್ನು ಎಚ್.ಡಿ.ದೇವೇಗೌಡರು ಒದಗಿಸಿದ್ದ ಸಂದರ್ಭದಲ್ಲಿ ಆರೋಪ ಮಾಡುವ ವ್ಯಕ್ತಿ ಹುಟ್ಟಿದ್ದನೋ ಗೊತ್ತಿಲ್ಲ ಎಂದರು

ರಾಯಚೂರು ಜಿಲ್ಲೆ ಸಾಲಮನ್ನಾಕ್ಕೆ 182 ಕೋಟಿ ಬಿಡುಗಡೆ
ರಾಯಚೂರು ಜಿಲ್ಲೆಗೆ 182 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗಿದೆ, ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದು ಜನರಿಗೆ ಕಾಣುವುದಕ್ಕೆ ಇನ್ನೂ 4ತಿಂಗಳು ಬೇಕು ಎಂದು ಹೇಳಿದ ಅವರು, ಆರೋಪ ಮಾಡುವವರು ಸುಖಾಸುಮ್ಮನೆ ಆರೋಪ ಮಾಡಬಾರದು ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದಂತೆ ವಿನಾಕಾರಣ ಟೀಕೆ, ಆರೋಪಗಳು ಮಾಡುತ್ತಿದ್ದು, ಅವರನ್ನು ವಿಧಾನಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದರು.

61 ಯೋಜನೆಗಳ ಜಾರಿಗೆ ಕ್ರಮ
ವಿವಿಧ ಇಲಾಖೆಗಳ 61 ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಪಟ್ಟಿ ಪಡೆದುಕೊಳ್ಳಲಾಗಿದ್ದು, ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು, ಶಾಶ್ವತವಾದ ಕುಡಿಯುವ ನೀರಿನ ಯೋಜನೆಗಳು ಇಡೀ ರಾಜ್ಯಾದ್ಯಂತ ಆಗಬೇಕು ಎಂಬುದು ನಮ್ಮ ಬಯಕೆ ಎಂದರು.

'ಗ್ರಾಮ ವಾಸ್ತವ್ಯ ಮೈತ್ರಿ ಸರ್ಕಾರದ್ದು, ಪಕ್ಷದ್ದಲ್ಲ'
ಗ್ರಾಮವಾಸ್ತವ್ಯ ಕಾರ್ಯಕ್ರಮ ಮೈತ್ರಿ ಸರಕಾರದ್ದೇ ಹೊರತು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ ಎಂಬುದನ್ನು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಸಾ.ರ.ಮಹೇಶ, ವೆಂಕಟರಾವ ನಾಡಗೌಡ, ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಇದ್ದರು.












Click it and Unblock the Notifications