ಖೋಟಾ ನೋಟು ದಂಧೆಯಲ್ಲಿ ದೇವದುರ್ಗದ ಬಿಜೆಪಿ ಮುಖಂಡರು ಭಾಗಿ

ರಾಯಚೂರು, ಜುಲೈ.03: ಖೋಟಾ ನೋಟು ಚಲಾವಣೆ ದಂಧೆಯಲ್ಲಿ ದೇವದುರ್ಗದ ಬಿಜೆಪಿ ಮುಖಂಡರು ಭಾಗಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆರೋಪದ ಮೇಲೆ 7 ಜನ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ ಮುಖಂಡರಾದ ಬಸಾಪುರ ಕ್ಯಾಂಪಿನ ಟಿ.‌ ಶ್ರೀನಿವಾಸ, ಹುಸೇನನಗರದ ರಾಮಕೃಷ್ಣ, ತಳವಾರದೊಡ್ಡಿಯ ಅಯ್ಯಾಳಪ್ಪ, ಗದ್ವಾಲ್ ತಾಲೂಕಿನ ಹನುಮಂತ, ಜಾಲಹಳ್ಳಿಯ ಪ್ರಕಾಶ, ಚಿಕ್ಕಬೂದೂರಿನ ಬಸವರಾಜ ಮತ್ತು ರಾಮಲಿಂಗೇಶ್ವರ ಕಾಲೋನಿಯ ಸೈಯದ್ ಉಸ್ಮಾನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರು ಶಾಸಕ ಕೆ.ಶಿವನಗೌಡ ನಾಯಕ ಅವರ ಆಪ್ತ ವಲಯದವರು ಎನ್ನಲಾಗಿದೆ. ಚುನಾವಣೆ ವೇಳೆ ದೇವದುರ್ಗದಲ್ಲಿ ನಕಲಿ ನೋಟು ಪತ್ತೆಯಾಗಿದ್ದವು. ಆಗ ಬಂಧಿತರಿಂದ 4.52 ಲಕ್ಷ ರೂಪಾಯಿ ನಗದು, ನೋಟು ಮುದ್ರಣ ವಸ್ತುಗಳ ಜಪ್ತಿ ಮಾಡಲಾಗಿತ್ತು.

BJP leaders of Devadurga have been involved in the forged note

ಬಂಧಿತರು ಬೆಂಗಳೂರು ಮೂಲದ ಅಬ್ದುಲ್​ ರಹಮಾನ್​ ಎಂಬುವವನಿಂದ ಖೋಟಾ ನೋಟು ಮುದ್ರಣ ಸಾಮಗ್ರಿಯನ್ನು ಖರೀದಿಸಿದ್ದರು ಎಂದು ತಿಳಿದು ಬಂದಿದೆ.

ಖೋಟಾ ನೋಟು ದಂಧೆಕೋರರಿಗೆ ಅಂತರಾಜ್ಯದ ನಂಟಿರುವುದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+