Raichur: ಬ್ಯಾಂಕ್‌ಗೆ ಕನ್ನ ಹಾಕಿದ್ದ ಖತರ್ನಾಕ್ ಮ್ಯಾನೇಜರ್ ಅರೆಸ್ಟ್
ರಾಯಚೂರು ಏಪ್ರಿಲ್ 10: ಗ್ರಾಹಕರು ಬ್ಯಾಂಕ್‌ನಲ್ಲಿ ಇಟ್ಟಿದ್ದ 10 ಕೋಟಿ 92 ಲಕ್ಷ ಹಣವನ್ನು ವಂಚಿಸಿದ್ದ ಮ್ಯಾನೇಜರ್ ಅನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ. ಮ್ಯಾನೇಜರ್ ನರೇಂದ್ರರೆಡ್ಡಿ ಮತ್ತು ಅರುಣಾ ಎಂಬುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ರಾಯಚೂರು ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಮ್ಯಾನೇಜರ್ ಆಗಿ ನರೇಂದ್ರರೆಡ್ಡಿ ಕೆಲಸ ಮಾಡುತ್ತಿದ್ದರು. ಈತ ಕೆನರಾ ಬ್ಯಾಂಕ್‌ನ ಮಾಜಿ ಉದ್ಯೋಗಿ ಅರುಣಾ ಎಂಬಾಕೆಯೊಂದಿಗೆ ಸೇರಿಕೊಂಡು ಬ್ಯಾಂಕ್‌ಗೆ ಕನ್ನಾ ಹಾಕಿದ್ದಾನೆ. ಇದೀಗ ಈ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಬ್ಯಾಂಕ್‌ಗಳನ್ನು ನಂಬಿ ಜನ ಹಣ ಹಾಗೂ ಚಿನ್ನಾಭರಣಗಳನ್ನು ಖಾತೆಯಲ್ಲಿ ಇಡುತ್ತಾರೆ. ಆದರೆ ಇಲ್ಲೊಬ್ಬ ಮ್ಯಾನೇಜರ್ ಗ್ರಾಹಕರ ಹಣವನ್ನು ನುಂಗಿ ನೀರು ಕುಡಿದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ತಲೆ ಮರಿಸಿಕೊಂಡಿದ್ದ ಮ್ಯಾನೇಜರ್‌ನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಜೊತೆಗೆ ಕೊಳ್ಳೆ ಹೊಡೆದ ಹಣ ಏನಾಯ್ತು ಅನ್ನೋದರ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್‌ನಲ್ಲಿ ಜನ ಹಣ ಹಾಗೂ ಚಿನ್ನಾಭರಣಗಳನ್ನು ಖಾತೆಯಲ್ಲಿ ಇಟ್ಟಿದ್ದರು. ಕೆಲವರು ಚಿನ್ನಾಭರಣಗಳ ಮೇಲೆ ಸಾಲಗಳನ್ನು ಪಡೆದುಕೊಂಡಿದ್ದರು. ಇನ್ನೂ ಕೆಲವರು ವಾಹನಕ್ಕಾಗಿ ಸಾಲ ಪಡೆದುಕೊಂಡಿದ್ದಾರೆ. ಈ ಎಲ್ಲಾ ಗ್ರಾಹಕರ ಖಾತೆಯಿಂದ ಪ್ರತೀ ತಿಂಗಳು ಇಂತಿಷ್ಟು ಹಣ ಕಡಿತಗೊಳ್ಳುತ್ತಿತ್ತು.
ಆದರೆ ಕಳೆದ ತಿಂಗಳು ಖಾತೆಯಿಂದ ಪ್ರತಿ ತಿಂಗಳು ಕಡಿತಗೊಳ್ಳುವುದಕ್ಕಿಂತ ಹೆಚ್ಚು ಹಣ ಕಡಿತಗೊಂಡಿದೆ. ಇದರಿಂದ ಗಾಬರಿಗೊಂಡ ಗ್ರಾಹರು ಬ್ಯಾಂಕ್‌ಗೆ ಬಂದು ವಿಚಾರಿಸಿದಾಗ ಅನುಮಾನ ಬಂದಿದೆ. ಬ್ಯಾಂಕ್ ಸಿಬ್ಬಂದಿ ಇದರ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿ, ನಾವೂ ಕೂಡ ಇದಕ್ಕೆ ಸಹಾಯ ಮಾಡುತ್ತೇವೆ, ಇದು ಬ್ಯಾಂಕ್‌ನಿಂದ ಕಡಿತಗೊಂಡ ಹಣವಲ್ಲ ಎಂದು ಹೇಳಿದ್ದಾರೆ. ಆಗ ನಿಜವಾದ ಸತ್ಯ ಬಯಲಾಗಿದೆ.
ಈ ಬ್ಯಾಂಕ್ ಮ್ಯಾನೇಜರ್ ತನ್ನ ಮೊಬೈಲ್ ನಂಬರ್ ನೀಡಿ ಗ್ರಾಹಕರು ಪ್ರತಿ ತಿಂಗಳು ವರ್ಗಾಯಿಸುವ ಹಣವನ್ನು ಲೂಟಿ ಮಾಡಿದ್ದಾನೆ. ಅಲ್ಲದೆ ಬ್ಯಾಂಕ್ ಕಡೆಯಿಂದ ಬರುತ್ತಿದ್ದ ಎಲ್ಲಾ ನೋಟೀಸ್‌ಗಳು ತನ್ನ ಫೋನ್‌ಗೆ ಬರುವಂತೆ ಮಾಡಿಕೊಂಡಿದ್ದಾನೆ. ಇದೆಲ್ಲಾ ಗೊತ್ತಾಗಿ ಗ್ರಾಹರು ನೇರವಾಗಿ ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಪ್ರಕರಣ ಬೆಳಕಿಗೆ ಬಂದ ಬಳಿಕ ಮ್ಯಾನೇಜರ್ ನರೇಂದ್ರರೆಡ್ಡಿ ತಲೆ ಮರಿಸಿಕೊಂಡಿದ್ದ. ಇದೀಗ ಪೊಲೀಸರು ಖತರ್ನಾಕ್ ಮ್ಯಾನೇಜರ್ ಅನ್ನು ಅರೆಸ್ಟ್ ಮಾಡಿದ್ದಾರೆ. ಈತನೊಂದಿಗೆ ಮತ್ತೊಬ್ಬ ಬ್ಯಾಂಕ್‌ನ ಮಾಜಿ ಉದ್ಯೋಗಿ ಅರುಣಾ ಎಂಬಾಕೆಯನ್ನೂ ಬಂಧಿಸಲಾಗಿದೆ.
ಒಟ್ಟಿನಲ್ಲಿ ಜನ ಮನೆಯಲ್ಲಿ ಹಣ ಇಟ್ಟರೆ ಕಳ್ಳತನವಾಗುತ್ತೆ ಅಂತ ಜನ ಬ್ಯಾಂಕ್‌ನಲ್ಲಿ ಇಡುತ್ತಾರೆ. ಆದರೆ ಬ್ಯಾಂಕ್‌ನಲ್ಲಿ ಇಟ್ಟ ಹಣ ಈ ರೀತಿ ಕೊಳ್ಳೆ ಹೊಡೆದರೆ ಜನ ಯಾರನ್ನ ನಂಬೋದು ಅನ್ನೋ ಪ್ರಶ್ನೆ ಕಾಡೋದಂತು ಗ್ಯಾರಂಟಿ.












Click it and Unblock the Notifications