ಹಟ್ಟಿ ಚಿನ್ನದ ಗಣಿ ಕ್ಯಾಂಪಿನಲ್ಲಿ ಆಫ್ರಿಕನ್ ಸ್ವೈನ್ ಫ್ಲೂ ಪತ್ತೆ: ನಿವಾಸಿಗಳಲ್ಲಿ ಆತಂಕ
ರಾಯಚೂರು, ಸೆಪ್ಟೆಂಬರ್ 30: ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಆತಂಕವನ್ನು ಮೂಡಿಸಿದೆ. ಬಿಸಿಲೂರು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದಗಣಿ ಕ್ಯಾಂಪ್‌ನಲ್ಲಿ ಹಂದಿಗಳಲ್ಲಿ ಈ ಜ್ವರ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಪ್ರಾಣಿಯಲ್ಲಿ ಕಾಣಿಸಿಕೊಂಡ ಈ ಜ್ವರವು ಮನುಷ್ಯರಿಗೆ ಹರಡುವುದಿಲ್ಲ. ಹೀಗಾಗಿ ಯಾವುದೇ ರೀತಿಯ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ ಒಂದು ತಿಂಗಳನಿಂದ ಹಟ್ಟಿಚಿನ್ನದ ಗಣಿಯಲ್ಲಿ 100ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ. ಇದರಿಂದಾಗಿ ಅಲ್ಲಿನ ನಿವಾಸಿಗಳನ್ನು ಭಯಭೀತಿಯನ್ನಗೊಳಿಸಿದೆ.

ಹಂದಿಗಳ ಸಾವಿನ ಹಿನ್ನೆಲೆಯಲ್ಲಿ, ಹಂದಿಗಳ ಮಾದರಿ ಪರೀಕ್ಷೆಗೆ ಮಾಡಿದಾಗ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದೆ. ಹಟ್ಟಿ ಚಿನ್ನದ ಗಣಿಯ ಕ್ಯಾಂಪ್‌ನಲ್ಲಿ ಹೆಚ್ಚು ಹಂದಿಗಳು ಸಾವನ್ನಪ್ಪಿವೆ. ದುರುಗಪ್ಪ ಎಂಬವರ ಖಾಸಗಿ ಹಂದಿ ಸಾಗಾಣಿಕೆ ಕೇಂದ್ರದಲ್ಲಿನ ಒಂದು ಹಂದಿಗೆ ಆಫ್ರಿಕನ್ ಸ್ವೈನ್ ಫ್ಲೂ ಇರುವುದು ಖಾತರಿಯಾಗಿದೆ. ಹೀಗಾಗಿ ಹಂದಿ ಸಾಗಾಣಿಕೆ ಕೇಂದ್ರದ ಸುತ್ತ ಹಟ್ಟಿ ಪಟ್ಟಣದ ಕಿಲೋ ಮೀಟರ್ ವ್ಯಾಪ್ತಿಯನ್ನು ರೋಗಪೀಡಿತ ವಲಯ ಎಂದು ಘೋಷಿಸಲಾಗಿದೆ.
10 ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಣೆ ಮಾಡಲಾಗಿದೆ. ಹಂದಿ ಸಾಗಾಣಿಕೆ ಕೇಂದ್ರದವರು ಮತ್ತು ನಾಗರಿಕರು ಮುಂಜಾಗ್ರತೆಯನ್ನು ತೆಗೆದುಬೇಕೆಂದು ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.

ಹಂದಿಗಳ ಸಾವಿನ ಸಂಖ್ಯೆ ಹೆಚ್ಚಾಗಿ ಕಂಡು ಬಂದಿರುವುದ್ದರಿಂದ ಸಾರ್ವಜನಿಕರು ಸಹ ಭಯಭೀತರಾಗಿದ್ದಾರೆ. ಹಟ್ಟಿ ಸೇರಿದಂತೆ ಜಿಲ್ಲೆಯ ನಾನಾ ಕಡೆಗಳಲ್ಲಿ ಭಯ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಜಿಲ್ಲಾ ಆರೋಗ್ಯಧಿಕಾರಿ ಡಾ.ಸುರೇಂದ್ರಬಾಬು, ಆಫ್ರಿಕನ್ ಹಂದಿ ಜ್ವರ ಕೇವಲ ಹಂದಿಗಳಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ. ಮನುಷ್ಯರಿಗೆ ಹರಡುವುದಿಲ್ಲ. ಜನ ಯಾವುದೇ ರೀತಿಯಲ್ಲಿ ಆತಂಕ ಪಡುವುದುಬೇಡ ಎಂದಿದ್ದಾರೆ.
ಜನರು ತಾವು ವಾಸಿಸುವ ಹಾಗೂ ಸುತ್ತಮುತ್ತಲಿನ ವಾತಾವರಣವನ್ನ ಶುಚಿಯಾಗಿಡುವುದರ ಕಡೆ ಗಮನ ಹರಿಸಬೇಕು. ಜೊತೆಗೆ ಮನುಷ್ಯರಿಗೆ ಆಫ್ರಿಕನ್ ಹಂದಿ ಜ್ವರ ಬಂದಿರುವ ಹರಡಿರುವುದು ಇಲ್ಲಿಯವರೆಗೆ ಎಲ್ಲಿ ವರದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ನಿಫಾ ಹೆಚ್ಚಳ: ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ
ಈಗಾಗಲೇ ಕೇರಳದಲ್ಲಿ ನಿಫಾ ಜ್ವರ ಹೆಚ್ಚಾಗಿರುವುದರಿಂದ ಕೇರಳದೊಂದಿಗೆ ನಿಕಟ ಸಂಪರ್ಕ ಹೊಂದಿರುವ ರಾಜ್ಯದ 4 ಜಿಲ್ಲೆಗಳಲ್ಲಿ ಅಕ್ಟೋಬರ್ 10ರವರೆಗೆ ರಾಜ್ಯ ಸರ್ಕಾರ ಹೈ ಅಲರ್ಟ್ ಘೋಷಿಸಿತ್ತು. ಈ ಬಗ್ಗೆ ಮಂಗಳೂರಲ್ಲಿ ಇತ್ತೀಚಿಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಮೈಸೂರು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದರು.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳು ಕೇರಳದ ಸಮೀಪದಲ್ಲಿರುವುದರಿಂದ ಎಲ್ಲಾದರೂ ನಿಫಾ ಪ್ರಕರಣಗಳು ಕಂಡುಬಂದರೆ ಎಂದು ಮುಂಜಾಗ್ರತೆ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಕ್ವಾರಂಟೈನ್, ಬೆಡ್‌ಗಳ ವ್ಯವಸ್ಥೆ ಸೇರಿದಂತೆ ಎಲ್ಲವೂ ಇದೆ. ಖಾಸಗಿ ಆಸ್ಪತ್ರೆ ಸೇರಿದಂತೆ ಕೇರಳದ ಗಡಿ ಭಾಗಗಳಲ್ಲಿ ತಪಾಸಣೆ ಸೇರಿದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications