ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ: ನಟಿ ಪೂಜಾ ಗಾಂಧಿ ಖುಲಾಸೆ

Posted By:
Subscribe to Oneindia Kannada

ರಾಯಚೂರು, ಡಿಸೆಂಬರ್ 23: 2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ ಖುಲಾಸೆಗೊಂಡಿದ್ದಾರೆ.

ರಾಯಚೂರು: ನಟಿ ಪೂಜಾ ಗಾಂಧಿಗೆ ಜಾಮೀನು ಮಂಜೂರು

ಪ್ರಕರಣಕ್ಕೆ ಸಾಕ್ಷಿಗಳ ಕೊರತೆಯಿಂದ ಪೂಜಾ ಗಾಂದಿ ಅವರನ್ನು ಖುಲಾಸೆಗೊಳಿಸಿ ರಾಯಚೂರು 2ನೇ ಜೆಎಮ್ಎಫ್ ಸಿ ನ್ಯಾಯಾಲಯ ತೀರ್ಪು ನೀಡಿ ಶನಿವಾರ ಆದೇಶ ಹೊರಡಿಸಿದೆ.ಇದರಿಂದ ಸಂತಸ ವ್ಯಕ್ತಪಡಿಸಿದ ಮಳೆ ಹುಡುಗಿ ಪೂಜಾ ಗಾಂಧಿ, ಆಗಾಗ ರಾಯಚೂರಿಗೆ ಬರುತ್ತೇನೆ ಎಂದರು.

Actress Pooja Gandhi acquitted in violation of the code of conduct case

ಚುನಾವಣೆಯಲ್ಲಿ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಕುರಿತಂತೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

2013ರ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರದಿಂದ ಬಿಎಸ್ ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಳೆ ಹುಡುಗಿ ಪೂಜಾ ಗಾಂಧಿ ಠೇವಣಿ ಕಳೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actress Pooja Gandhi has been acquitted by Raichur 2nd JMFC court today (December 23) in violation of the code of conduct in 2013 assembly election in Raichur. Pooja Gandhi lost her deposit in the 2013 assembly elections, was contested from the Raichur city constituency from BSR Congress.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ