ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯಲ್ಲಿ ಗೋಡೆ ಕುಸಿದು 15 ಮಂದಿಯ ದಾರುಣ ಸಾವು

|
Google Oneindia Kannada News

ಪುಣೆ, ಜೂನ್ 29:ಮಹಾರಾಷ್ಟ್ರದ ಪುಣೆಯಲ್ಲಿ ಗೋಡೆ ಕುಸಿದು 15 ಮಂದಿ ಮೃತಪಟ್ಟಿದ್ದಾರೆ.

ಶನಿವಾರ ಬೆಳಗಿನ ಜಾವ ನಡೆದ ಈ ದುರ್ಘಟನೆಯಲ್ಲಿ ಇನ್ನೆಷ್ಟು ಜನ ಸಿಲುಕಿಕೊಂಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಪುಣೆಯ ಕೋಂಧ್ವಾ ವಲಯದಲ್ಲಿನ ಹೌಸಿಂಗ್ ಸೊಸೈಟಿಯ ಗೋಡೆಯೊಂದು ಪಕ್ಕದ ಸ್ಲಂನಲ್ಲಿರುವ ಮನೆಗಳ ಮೇಲೆ ಬಿದ್ದಿದೆ.

wall collapsed in Kondhwa 15 have died

ಗೋಡೆಯ ಜೊತೆಗೆ ಅಲ್ಲೇ ನೆಲೆಸಿದ್ದ ಕಾರುಗಳೂ ಕೂಡ ಮನೆಗಳ ಮೇಲೆ ಬಿದ್ದಿವೆ. ಸ್ಲಂ ನಿವಾಸಿಗಳು ಮಲಗಿದ್ದ ವೇಳೆ ಈ ಘಟನೆ ನಡೆದಿದ್ದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ತೀವ್ರ ಮಳೆಯ ಕಾರಣದಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, 16 ಮೃತಪಟ್ಟಿರುವುದು ಹಾಗೂ ಇಬ್ಬರು ಗಾಯಗೊಂಡಿರುವುದನ್ನು ಖಾತ್ರಿಪಡಿಸಿದೆ. ಆದರೆ ಅವಶೇಷಗಳಡಿಯಲ್ಲಿ ಇನ್ನೆಷ್ಟು ಜನರಿದ್ದಾರೆ ಎನ್ನುವ ಬಗ್ಗೆ ನಿಖರ ಮಾಹಿತಿ ಸಿಗುತ್ತಿಲ್ಲ.

ಪುಣೆಯಲ್ಲಿ ಮೃತರ ಕುಟುಂಬಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲಾ 50 ಸಾವಿರ ರೂ ಪರಿಹಾರ ಘೋಷಿಸಿದ್ದಾರೆ. ಮೃತರಲ್ಲಿ 5 ಮಂದಿ ಮಕ್ಕಳಿದ್ದರು ಎಂದು ತಿಳಿದುಬಂದಿದೆ.

English summary
15 have died and 2 are injured after a wall collapsed in Kondhwa. Rescue operations are underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X