• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಣೆ ಹೆದ್ದಾರಿಯಲ್ಲಿ ಅಪಘಾತ: 9 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು

|

ಮುಂಬೈ, ಜುಲೈ 20: ಪುಣೆ -ಸೊಲ್ಲಾಪುರ ಹೆದ್ದಾರಿಯಲ್ಲಿ ಟ್ರಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ 9 ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ನಡೆದಿದೆ.

ಶನಿವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಪುಣೆ-ಸೋಲ್ಲಾಪುರ ಹೆದ್ದಾರಿಯ ಕದಮ್‍ವಾಕ್ ವಸ್ತಿ ಗ್ರಾಮದ ಬಳಿ ನಡೆದಿದೆ.

ಮೋದಿ ಸರ್ಕಾರ್ 2.0: ಹೆದ್ದಾರಿ 'ಟೋಲ್' ವ್ಯವಸ್ಥೆಯಲ್ಲಿ ನೋ 'ಚೇಂಜ್'

ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ 9 ವಿದ್ಯಾರ್ಥಿಗಳೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಪುಣೆಯ ಯವತ್ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಪುಣೆಯಿಂದ ರಾಯ್‍ಗಢ್‍ಗೆ ತೆರಳಿದ್ದು, ಬಳಿಕ ತಡರಾತ್ರಿ ಪುಣೆಗೆ ಹಿಂದಿರುಗುತ್ತಿದ್ದರು. ಕದಮ್‍ವಾಕ್ ವಸ್ತಿ ಗ್ರಾಮದ ಬಳಿ ಬರುತ್ತಿದ್ದಂತೆಯೇ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ವೇಗವಾಗಿ ಹೋಗಿ ಡಿಕ್ಕಿ ಹೊಡೆದಿದೆ.

ಮೃತರು ಅಕ್ಷಯ್ ಭರತ್ ವಾಯ್‌ಕರ್, ವಿಶಾಲ್ ಸುಭಾಷ್ ಯಾದವ್, ನಿಖಿಲ್ ಚಂದ್ರಕಾಂತ್, ನೂರ್ ಮೊಹಮ್ಮದ್, ಪರ್ವೇಜ್ ಅತ್ತಾರ್, ಶುಭಂ, ಅಕ್ಷಯ್ ಚಂದ್ರಕಾಂತ್, ದತ್ತ ಗಣೇಶ್, ಜುಬೇರ್ ಅಜೀಜ್ ಎಂದು ತಿಳಿದುಬಂದಿದೆ.

English summary
Pune-Solapur highway accident 9 People Dead on spot, There were 9 people in the car and all of them died on the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X