• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿನ್ನದಂಗಿ ತೊಟ್ಟಿದ್ದ ಪುಣೆಯ ಫುಗೆ ಬರ್ಬರ ಹತ್ಯೆ

By Mahesh
|
Google Oneindia Kannada News

ಪುಣೆ, ಜುಲೈ 15: ಮೈಮೇಲೆ 1.27 ಕೋಟಿ ರೂ. ಮೌಲ್ಯದ ಚಿನ್ನದ ಅಂಗಿ ತೊಟ್ಟು ಪೋಸ್ ಕೊಟ್ಟು ಓಡಾಡುತ್ತಿದ್ದ 'ಗೋಲ್ಡ್ ಮ್ಯಾನ್' ದತ್ತಾತ್ರೇಯ ಫುಗೆ ಅವರನ್ನು ಗುರುವಾರ ತಡ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಫುಗೆ ಅವರ ಮೇಲೆ ಕಲು ಎಸೆದು ನಂತರ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿದೆ. ಈ ಘಟನೆ ಸಂಬಂಧಿಸಿದಂತೆ ನಾಲ್ವರು ಈಗಾಗಲೇ ಬಂಧಿಸಲಾಗಿದೆ.[ಮುಂಬೈ: ಚಿನ್ನದ ಅಂಗಿ ತೊಟ್ಟ ಉದ್ಯಮಿ ಪಂಕಜ]

ಸದಾ 1.27 ಕೋಟಿ ರೂ. ಮೌಲ್ಯದ ಚಿನ್ನದ ಅಂಗಿ ತೊಟ್ಟು, ಕೈ ಮತ್ತು ಕೊರಳ ತುಂಬಾ ಚಿನ್ನಾಭರಣಗಳನ್ನು ಧರಿಸುತ್ತಿದ್ದ ಫುಗೆ ಸಾಮಾಜಿಕ ತಾಣಗಳಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು. ಪುಣೆಯಲ್ಲಿ ಚಿಟ್ ಫಂಡ್ ನಡೆಸುತ್ತಿದ್ದ ಫುಗೆ ಅವರು ಪ್ರತಿನಿತ್ಯ ಸಾವಿರಾರು ಗ್ರಾಹಕರಿಂದ ಹಣ ಸಂಗ್ರಹಿಸುತ್ತಿದ್ದು, ಜೊತೆಗೆ ಕೆಲ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು.

ಫುಗೆ ಅವರ ಹತ್ಯೆಗೆ ಹಣಕಾಸು ಅವ್ಯವಹಾರವೇ ಮುಖ್ಯ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೂಡಿಕೆದಾರರಿಗೆ ಫುಗೆ ಅವರು ಸಮರ್ಪಕವಾಗಿ ಹಣ ಪಾವತಿ ಮಾಡುತ್ತಿರಲಿಲ್ಲ ಎಂಬ ಆರೋಪವಿದೆ.

ರಾಜಕೀಯದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಈತ, ಕಳೆದ ಲೋಕಸಭೆ ಚುನಾವಣೆಯಲ್ಲಿ ಎಸ್ ಸಿಪಿ ಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

ಪತ್ನಿ ಹೇಳಿಕೆ: ಬೋಸಾರಿಯಲ್ಲಿರುವ ನಮ್ಮ ಮನೆಗೆ ನಿನ್ನೆ ರಾತ್ರಿ ಕೆಲ ದುಷ್ಕರ್ಮಿಗಳು ಆಗಮಿಸಿ ಫುಗೆಯನ್ನು ತಮ್ಮ ಜೊತೆ ಕರೆದೊಯ್ದು ಈ ಹತ್ಯೆ ಮಾಡಿದ್ದಾರೆ ಎಂದು ಫುಗೆ ಅವರ ಪತ್ನಿ ಸೀಮಾ ಪೊಲೀಸರಿಗೆ ತಿಳಿಸಿದ್ದಾರೆ. ದಿಘಿಯ ಭರತ್ ಮಾತಾ ನಗರ ಪ್ರದೇಶದಲ್ಲಿ ಫುಗೆ ಮೃತದೇಹ ಪತ್ತೆಯಾಗಿದೆ.

ಫುಗೆ ಪತ್ನಿ ಸೀಮಾ ಮಾಜಿ ಪಾಲಿಕೆ ಸದಸ್ಯರಾಗಿದ್ದು, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿಯನ್ನು ಪ್ರತಿನಿಧಿಸುತ್ತಿದ್ದರು. ಆದರೆ, ಚುನಾವಣೆ ಸಂದರ್ಭದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ಆಕೆಯನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು

English summary
44-year-old Dattatray Phuge, who had hit the headlines for making a Rs 1.27 crore gold shirt, was stoned to death in Dighi near the city early on Thursday(Jul 14) late night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X