ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಮಹಿಮೆ: ಐಐಟಿ ನಿರ್ದೇಶಕರಿಗೇ 19 ಲಕ್ಷ ಪಂಗನಾಮ

By Srinath
|
Google Oneindia Kannada News

Online Fraud- IIT-Kanpur former director Dhande duped of Rs 19 lakh in ICICI bank in Pune
ಪುಣೆ, ಸೆಪ್ಟೆಂಬರ್ 18: ಇದು ಮಾಹಿತಿ ತಂತ್ರಜ್ಞಾನದ ಕೊಡುಗೆ. ಆದರೆ ಇದು ಋಣಾತ್ಮಕ ರೂಪದಲ್ಲಿದೆ. ಏನಪ್ಪಾ ಅಂದರೆ ಇ-ಮೇಲ್, ಸಿಮ್ ಕಾರ್ಡ್ ಉಪಯೋಗಿಸಿ ವಂಚಕರು ಬೇರೊಬ್ಬರ ಬ್ಯಾಂಕ್ ಖಾತೆಯಿಂದ 19 ಲಕ್ಷ ರೂಪಾಯಿಯನ್ನು ಲಪಟಾಯಿಸಿದ್ದಾರೆ.

ಆದರೆ ಹೀಗೆ ಮೋದಹೋಗಿರುವವರು ಕಡಿಮೆ ವ್ಯಕ್ತಿಯೇನಲ್ಲ. ಅವರು IIT-Kanpurದ ಮಾಜಿ ನಿರ್ದೇಶಕರು, National Security Advisory Board ಸದಸ್ಯರು ಮತ್ತು ಪದ್ಮಶ್ರೀ ಪುರಸ್ಕೃತರು. ಹೆಸರು ಸಂಜಯ್ ಗೋವಿಂದ ಧಂಡೆ.

ಅಷ್ಟೇ ಅಲ್ಲ 65 ವರ್ಷದ ಧಂಡೆ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳವರು. ಅದು ಸರೀ ಬಿಡಿ. ಇಷ್ಟೆಲ್ಲಾ ಅನುಭವ/ಪರಿಣಿತಿ ಇರುವವರನ್ನು ಯಾಮಾರಿಸಬಾರದು ಎಂದೇನು ನಿಮಯವಿಲ್ಲ ಅಲ್ವಾ? ಹಾಗಂದೇ ಖದೀಮರು ಇವರ ಬ್ಯಾಂಕ್ ಖಾತಗೇ ಐಟಿ ರೂಪದಲ್ಲಿ ಕನ್ನ ಹಾಕಿ 19 ಲಕ್ಷ ರೂಪಾಯಿಯನ್ನು ದೋಚಿದ್ದಾರೆ.

ಈ ಸಂಬಂಧ ಚತುರ್ ಶ್ರುಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪರಿಚಿತರು ನನ್ನ ICICI bank ಖಾತೆಯಿಂದ 22 ಬಾರಿ ವ್ಯವಹಾರ ನಡೆಸಿದ್ದು 19 ಲಕ್ಷ ರೂಪಾಯಿಯನ್ನು ಎಗರಿಸಿದ್ದಾರೆ ಎಂದು ಅವಲತ್ತುಕೊಂಡಿದ್ದಾರೆ. ಮೊನ್ನೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಬ್ಯಾಂಕಿಗೆ ಮೂರು ದಿನ ರಜೆ ಇದ್ದಾಗ ಈ ವಂಚನೆ ನಡೆದಿದೆ.

ಇಷ್ಟೆಲ್ಲಾ ವ್ಯವಹಾರ ನಡೆದಿದ್ದರೂ ನನಗೆ ಇ-ಮೇಲ್ ಅಥವಾ ಮೊಬೈಲ್ ಮೂಲಕ ಸಂದೇಶ ರವಾನೆಯಾಗಲಿಲ್ಲ. ನನ್ನ ಇ-ಮೇಲ್ ಮತ್ತು ಸಿಮ್ ಕಾರ್ಡನ್ನು ಯಾರೋ ಹ್ಯಾಖ್ ಮಾಡಿ, ಈ ಕುಕೃತ್ಯವೆಸಗಿದ್ದಾರೆ ಎಂದು ಪುಣೆಯ ಔಂದ್ ನಿವಾಸಿ ಧಂಡೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮಿನಿಮಂ ಅಕೌಂಟ್ ಬ್ಯಾಲೆನ್ಸ್ 10 ಸಾವಿರಕ್ಕಿಂತ ಕಡಿಮೆಯಾಗುತ್ತಿದ್ದಂತೆ ICICI bank ಸಿಬ್ಬಂದಿ ಧಂಡೆ ಅವರನ್ನು ಎಚ್ಚರಿಸಿದಾಗಲೇ ಪ್ರಕರಣ ಬೆಳಕಿಗೆ ಬಂದಿರುವುದು.

English summary
Online Fraud- IIT-Kanpur former director Dhande duped of Rs 19 lakh in ICICI bank in Pune. The former IIT-Kanpur director Sanjay Govind Dhande was cheated of Rs19 lakh after his bank account, email and SIM card were compromised. Unidentified fraudsters made 22 transactions from his ICICI bank account over three days - on September 7, 8 and 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X