ಲೈಂಗಿಕ ಕಿರುಕುಳ ಕೇಸಿನಲ್ಲಿ ನಟ, ನಿರ್ದೇಶಕ ಕುಲಕರ್ಣಿ ಬಂಧನ

ಪುಣೆ, ಆಗಸ್ಟ್ 29: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 24 ವರ್ಷ ವಯಸ್ಸಿನ ಮರಾಠಿ ನಟ, ನಿರ್ದೇಶಕ ಮಂದಾರ್ ಕುಲಕರ್ಣಿಯನ್ನು ಒಲೀಸರು ಬಂಧಿಸಿದ್ದಾರೆ.

ಚಿತ್ರವೊಂದಕ್ಕೆ ಸಂಬಂಧಿಸಿದಂತೆ ಫೋಟೋಶೂಟ್ ನಡೆಸುವ ವೇಳೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಡೆಕ್ಕನ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಾಟಕರಂಗದಿಂದ ಚಿತ್ರರಂಗಕ್ಕೆ ಕಾಲಿರಿಸಿರುವ ಮಂದಾರ್, ಹಲವು ರಂಗ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದಾರೆ. ಆಗಸ್ಟ್ 16 ರಂದು 17 ವರ್ಷದ ಅಪ್ರಾಪ್ತೆಯನ್ನು ತನ್ನ ಅಪಾರ್ಟ್ ಮೆಂಟಿಗೆ ಇದೇ ಉದ್ದೇಶದಿಂದ ಕರೆಸಿಕೊಂಡಿದ್ದಾರೆ.

Recommended Video

      ಸಿದ್ದರಾಮಯ್ಯ ಹೇಳಿದಂತೆ ನಾವು ಮಾಡಿದ್ದೇವೆ ಅಂದ್ರು ಅತೃಪ್ತರು..? | Shivaram Hebbar | Oneindia Kannada
      Marathi TV actor Mandar Kulkarni arrested for sexual harassment during photo shoot

      "ಆಕೆಗೆ ನಟನೆ ಬಗ್ಗೆ ಪಾಠ ಹಾಗೂ ನಾಟಕ/ಚಿತ್ರದಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ತಾನು ತಂದಿದ್ದ ಕೆಲವು ಬಟ್ಟೆಗಳನ್ನು ಆಕೆಗೆ ನೀಡಿ ಧರಿಸುವಂತೆ ಸೂಚಿಸಿದ್ದಾನೆ. ನಂತರ ಆಕೆ ಫೋಟೋಶೂಟ್ ನಡೆಸಿದ್ದಾರೆ" ಪೊಲೀಸರು ತಿಳಿಸಿದ್ದಾರೆ.

      ಫೋಟೋಶೂಟ್ ವೇಳೆ ಬಿಕಿನಿ ಧರಿಸುವಂತೆ ಒತ್ತಾಯಿಸಿದ್ದು, ಇದಕ್ಕೆ ಆಕೆ ವಿರೋಧಿಸಿದರೂ ತನ್ನ ಪ್ರಯತ್ನ ಮುಂದುವರೆಸಿದ್ದಾರೆ. ಕೊನೆಗೆ ಹೇಗೂ ಆಕೆಯನ್ನು ಪುಸಲಾಯಿಸಿ, ಬಿಕಿನಿ ಧರಿಸಿದ್ದ ಆಕೆಯ ಫೋಟೋಗಳನ್ನು ತೆಗೆಯಲಾಗಿದೆ

      "ತನ್ನ ಮಗಳ ಅನುಮತಿ ಇಲ್ಲದೆ, ಅಸಭ್ಯ ಭಂಗಿಯಲ್ಲಿ ಬಿಕಿನಿ ತೊಟ್ಟಿರುವ ಚಿತ್ರವನ್ನು ತೊಡುವಂತೆ ಮಾಡಿದ್ದಾನೆ" ಎಂದು ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ.

      ದೂರು ದಾಖಲಿಸಿಕೊಂಡಿರುವ ಪೊಲೀಸರು, ಮಂದಾರ್ ವಿರುದ್ಧ ಐಪಿಸಿ ಸೆಕ್ಷನ್ 354, ಅಪ್ರಾಪ್ತರ ವಿರುದ್ಧ ಲೈಂಗಿಕ ಕಿರುಕುಳ ತಡೆ ಕಾಯ್ದೆ ಅನ್ವಯ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+