• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರಗಳಲ್ಲಿ ಆರ್.ಕೆ. ಲಕ್ಷ್ಮಣ್ ಅಂತ್ಯಸಂಸ್ಕಾರ

By Kiran B Hegde
|
Google Oneindia Kannada News

ಪುಣೆ, ಜ. 27: ಮಹಾರಾಷ್ಟ್ರ ರಾಜ್ಯದ ಪುಣೆ ನಗರದಲ್ಲಿ ಮಂಗಳವಾರ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಮಂಗಳವಾರ ರಾಜ್ಯ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಆರ್.ಕೆ. ಲಕ್ಷ್ಮಣ್ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಿಸಿದರು. ಕಲಾವಿದ ಆರ್.ಕೆ. ಲಕ್ಷ್ಮಣ್ (94) ತಮ್ಮ 'ಕಾಮನ್ ಮ್ಯಾನ್' ರೇಖಾ ಚಿತ್ರಗಳ ಮೂಲಕ ವ್ಯಂಗ್ಯ ಚಿತ್ರ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ವೃದ್ಧಾಪ್ಯದ ಕಾರಣ ಕಾಯಿಲೆಯಿಂದ ನಿತ್ರಾಣರಾಗಿದ್ದ ಅವರನ್ನು ಪುಣೆಯ ದೀನಾನಾಥ್ ಮಂಗೇಶ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. [ವ್ಯಂಗ್ಯಚಿತ್ರ ಕೌಶಲ್ಯ ಅರಳಿದ್ದು ಮೈಸೂರಲ್ಲಿ]

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌, ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಶಿಕ್ಷಣ ಸಚಿವ ವಿನೋದ್ ತಾವ್ಡೆ ಮತ್ತು ಎಂಎನ್‌ಎಸ್‌ ಮುಖ್ಯಸ್ಥ ರಾಜ್ ಠಾಕ್ರೆ, ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್‌ ಮುಂತಾದ ಗಣ್ಯರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ಆರ್.ಕೆ. ಲಕ್ಷ್ಮಣ್ ಪಾರ್ಥಿವ ಶರೀರ ಹೊತ್ತೊಯ್ದ ಪೊಲೀಸರು

ಆರ್.ಕೆ. ಲಕ್ಷ್ಮಣ್ ಪಾರ್ಥಿವ ಶರೀರ ಹೊತ್ತೊಯ್ದ ಪೊಲೀಸರು

ಪುಣೆಯಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕಾಗಿ ಸರ್ಕಾರಿ ಗೌರವದೊಂದಿಗೆ ಹೊತ್ತೊಯ್ಯುತ್ತಿರುವ ಪೊಲೀಸರು.

ರಾಷ್ಟ್ರಧ್ವಜ ಹೊದಿಸಿ ಗೌರವ

ರಾಷ್ಟ್ರಧ್ವಜ ಹೊದಿಸಿ ಗೌರವ

ಪುಣೆಯಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದ ಮಹಾರಾಷ್ಟ್ರ ರಾಜ್ಯ ಸರ್ಕಾರ.

ಸಿಎಂ ಫಡ್ನವಿಸ್ ನಮನ

ಸಿಎಂ ಫಡ್ನವಿಸ್ ನಮನ

ಆರ್.ಕೆ. ಲಕ್ಷ್ಮಣ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್.

ಸರ್ಕಾರಿ ಗೌರವ

ಸರ್ಕಾರಿ ಗೌರವ

ಆರ್.ಕೆ. ಲಕ್ಷ್ಮಣ್ ಪಾರ್ಥಿವ ಶರೀರಕ್ಕೆ ಸರ್ಕಾರಿ ಗೌರವ ಸಲ್ಲಿಸುತ್ತಿರುವ ಪೊಲೀಸರು.

ಆರ್.ಕೆ. ಲಕ್ಷ್ಮಣ ಒಂದು ನೆನಪು

ಆರ್.ಕೆ. ಲಕ್ಷ್ಮಣ ಒಂದು ನೆನಪು

ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತೆಗೆದಿದ್ದ ಚಿತ್ರ.

ಮಂಗಳಗ್ರಹವೂ ಸಾಮಾನ್ಯ ಮನುಷ್ಯನೂ

ಮಂಗಳಗ್ರಹವೂ ಸಾಮಾನ್ಯ ಮನುಷ್ಯನೂ

ಭಾರತದ ಉಪಗ್ರಹ ಮಂಗಳಗ್ರಹದ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದಾಗ ಸಾಮಾನ್ಯ ವ್ಯಕ್ತಿಯೋರ್ವ ಸಂಭ್ರಮಿಸಿದ ಬಗೆಯನ್ನು ತಮ್ಮ ರೇಖಾಚಿತ್ರದಲ್ಲಿ ಹಿಡಿದಿಟ್ಟ ಆರ್.ಕೆ. ಲಕ್ಷ್ಮಣ್.

English summary
A state funeral has been accorded to cartoonist R K Laxman in Pune on Tuesday. Here are the pictures of the funeral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X