ಗೂಗಲ್ ಉಚಿತ ವೈಫೈ ಪಡೆಯುವ ಮೊದಲ ನಗರ ಯಾವುದು?

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 07: ಭಾರತಕ್ಕಾಗಿ ಗೂಗಲ್ ಇಂಡಿಯಾ ಸಂಸ್ಥೆ ಹೊಸ ಉತ್ಪನ್ನ, ಸೌಲಭ್ಯಗಳನ್ನು ಹೊರತರುತ್ತಿದೆ. ಈ ಪೈಕಿ ರೈಲ್ವೆ ನಿಲ್ದಾಣಗಳಿಗೆ ಸೀಮಿತವಾಗಿದ್ದ ಉಚಿತ ವೈಫೈ ಸೌಲಭ್ಯಗಳನ್ನು ಸ್ಮಾರ್ಟ್ ಸಿಟಿಗೂ ವಿಸ್ತರಿಸಲಾಗುತ್ತಿದೆ.

ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳ ಅನಾವರಣ

ದೇಶದ 200 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಶುರುಮಾಡಿದ್ದ ಗೂಗಲ್ ಈಗ ಇನ್ನೂ 200 ನಿಲ್ದಾಣಗಳಿಗೆ ಈ ಸೌಲಭ್ಯ ನೀಡಲು ಮುಂದಾಗಿದೆ.

Google Stations initiative Free connectivity in Pune

ಇದರ ಜತೆಗೆ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರವಲ್ಲ ಮಾರುಕಟ್ಟೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿಯೂ ಉಚಿತ ವೈಫೈ ಸೇವೆ ನೀಡುವ ಗುರಿಯನ್ನು ಗೂಗಲ್ ಹೊಂದಿದೆ. ಈ ಯೋಜನೆಯನ್ನು ಮೊದಲಿಗೆ ಪುಣೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

ಈ ಗೂಗಲ್ ಆಪ್ ಬಳಸಿ, ಹಣ ಗಳಿಸುವುದು ಹೇಗೆ?

ದೆಹಲಿಯಲ್ಲಿ ನಡೆದ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಾಧ್ಯಕ್ಷ ಸೀಸರ್ ಸೇನ್ ಗುಪ್ತ ಅವರು ಈ ಬಗ್ಗೆ ಮಾತನಾಡಿ, 'ಗೂಗಲ್ ಸ್ಟೇಷನ್ ಪ್ರೋಗ್ರಾಮ್ ಮೂಲಕ 75 ಲಕ್ಷ ಬಳಕೆದಾರರಿಗೆ ವೇಗದ ಉಚಿತ ವೈಫೈ ಸೇವೆ ನೀಡಲಾಗುತ್ತೆ. ಸದ್ಯಕ್ಕೆ ಈ ಪ್ರೋಗ್ರಾಂ ಅಡಿ ದೇಶದ 227 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸಿಗುತ್ತಿದೆ ಎಂದರು.

ದ್ವಿಚಕ್ರವಾಹನ ಸಂಚಾರಿಗಳೇ ಗಮನಿಸಿ, ಗೂಗಲ್ ಮಾರ್ಗದರ್ಶಿಯಲ್ಲಿ ಕನ್ನಡ

ಈ ವರ್ಷದ ಅಂತ್ಯದೊಳಗೆ 400 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆ ಲಭ್ಯವಾಗಲಿದೆ. ಈ ಯೋಜನೆಗಾಗಿ ಗೂಗಲ್ RailTel ಕಾರ್ಪೋರೇಷನ್ ಜೊತೆ ಕೈ ಜೋಡಿಸಿದೆ. ಗೂಗಲ್ ಮಾದರಿಯಲ್ಲೇ ಫೇಸ್ ಬುಕ್ ಕೂಡಾ ದೇಶದ ಹಲವು ಗ್ರಾಮಗಳಿಗೆ ವೈಫೈ ಒದಗಿಸಲು ಮುಂದಾಗಿದೆ. 10 ರು ಕನಿಷ್ಟ ದರದಲ್ಲಿ 300ಎಂಬಿ ಡೇಟಾ ನೀಡುವ ಯೋಜನೆ ಹಾಕಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Google is all set to extend its free Wi-Fi services beyond railway stations to include entire cities. Pune will be the first smart city to receive free connectivity across the city from Google Stations initiative.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ