ಬಾಲಗಂಗಾಧರ ತಿಲಕ್ ಅವರ ಮರಿ ಮೊಮ್ಮಗನ ಮೇಲೆ ರೇಪ್ ಕೇಸ್

Posted By:
Subscribe to Oneindia Kannada

ಪುಣೆ, ಜುಲೈ 18:ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಅವರ ಮರಿ ಮೊಮ್ಮಗ ರೋಹಿತ್ ತಿಲಕ್‍ ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಎಸಗಿ, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ ಆರೋಪವನ್ನು ಕಾಂಗ್ರೆಸ್ ಮುಖಂಡ ರೋಹಿತ್ ಮೇಲೆ ಹೊರೆಸಲಾಗಿದೆ.ಕಾಂಗ್ರೆಸ್ ಧುರೀಣ ಮತ್ತು ಮಾಜಿ ಸಂಸದ ದಿವಂಗತ ಜಯಂತ್‍ ರಾವ್ ತಿಲಕ್ ಅವರ ಮೊಮ್ಮಗ ಕೂಡಾ ಆಗಿರುವ ರೋಹಿತ್ ಅವರು ಸೋಮವಾರ ತಡರಾತ್ರಿ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ.

Freedom Fighter Bal Gangadhar Tilak's Great-Grandson Accused Of Rape

40 ವರ್ಷದ ಮಹಿಳೆ ನೀಡಿರುವ ದೂರಿನ ಪ್ರಕಾರ, ಇಬ್ಬರಿಗೂ ಹಲವು ವರ್ಷಗಳಿಂದ ಗೆಳೆತನವಿತ್ತು. ಮದುವೆಯಾಗುವುದಾಗಿ ರೋಹಿತ್ ನಂಬಿಸಿದ್ದರು. ಆದರೆ, ಲೈಂಗಿಕವಾಗಿ ಬಳಸಿಕೊಂಡರು. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಲವಂತ ಪಡಿಸಿದಾಗ ವಿಧಿ ಇಲ್ಲದೆ ರಕ್ಷಣೆಗಾಗಿ ದೂರು ನೀಡಬೇಕಾಯಿತು ಎಂದು ಹೇಳಲಾಗಿದೆ.

Insensitive Remark By An MLA

ರೋಹಿತ್ ತಿಲಕ್ 2014ರಲ್ಲಿ ಮಹಾರಾಷ್ಟ್ರದ ಪುಣೆಯ ಕಸಬಾಪೇಟ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಗಣೇಶ್ ಬಾಪಟ್ ವಿರುದ್ಧ ಪರಾಭವಗೊಂಡಿದ್ದರು. ರೋಹಿತ್ ವಿರುದ್ಧ ಐಪಿ ಸಿ ಸೆಕ್ಷನ್ 376ರಂತೆ ಪ್ರಕರಣ ದಾಖಲಿಸಿಕೊಂಡು, ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress leader Rohit Tilak, who is the great-grandson of freedom fighter Bal Gangadhar Tilak, was today booked for allegedly raping a woman and forcing her into "unnatural" sex, the police said.
Please Wait while comments are loading...